ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಅಮ್ಮನ ಸೀರೆಯಲ್ಲಿ ಜೋಲಿ ಕಟ್ಟಿ ಆಟವಾಡಲು ಹೋದ ಬಾಲಕ ದುರಂತ ಅಂತ್ಯ! ಮಂಡ್ಯದಲ್ಲಿ ಮನಕಲಕುವ ಘಟನೆ

ಶಾಲೆ ಮುಗಿಸಿಕೊಂಡು ಮನೆಗೆ ಬಂದ 9 ವರ್ಷದ ಬಾಲಕನೊಬ್ಬ ಸೀರೆಯಲ್ಲಿ ಜೋಲಿ ಕಟ್ಟಿಕಂಡು ಖುಷಿಯಿಂದ ಆಟವಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ.ಬೇವಿನಹಳ್ಳಿ ಕೊಪ್ಪಲು ಗ್ರಾಮದ ಶ್ರೀನಿವಾಸ ಅವರ ಪುತ್ರ ಸಮರ್ಥ್​(9) ಮೃತ ಬಾಲಕ.ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಸಮರ್ಥ್ ಬಂದಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಜೋಕಾಲಿ ಆಟವಾಡಬೇಕು ಅನ್ನಿಸಿ, ಅಮ್ಮನ ಸೀರೆ ತೆಗೆದುಕೊಂಡು ಈತನೇ ಜೋಲಿ ಕಟ್ಟಿದ್ದಾನೆ. ಅದೇ ಇವನ ಪಾಲಿಗೆ ಉರುಳಾಗಿ ಪ್ರಾಣ ತೆಗೆದಿದೆ.ಜೋಲಿ ಕಟ್ಟಿ ಅದರೊಳಗೆ ಕುಳಿತು ಆಟವಾಡಲು ಸಮರ್ಥ್​ ಹೋಗಿದ್ದಾನೆ. ಈ ವೇಳೆ ಜೋಲಿಯ ಬಟ್ಟೆ ಸುರುಳಿ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.ಬಾಲಕನಿಗೆ ಜೋಲಿಯಲ್ಲಿ ಆಡುವುದು ಎಂದರೆ ಬಲು ಖುಷಿ. ಯಾವುದೇ ಮನೆಗೆ ಹೋದರೂ ಜೋಲಿ ಕಟ್ಟಿಕೊಡಲು ಕೇಳಿ ಆಟವಾಡುವುದಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇಷ್ಟವಾದ ಜೋಲಿಯೇ ಬಾಲಕನ ಸಾವಿಗೆ ಮುಳುವಾಗಿದ್ದು ವಿಪರ್ಯಾಸ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗಲಿದೆ? ಹೆಣ್ಣು ಮಕ್ಕಳಿಗೆ ಬರುವ ಪಾಲೆಷ್ಟು?

Sat Dec 31 , 2022
ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ.ಬೆಂಗಳೂರು: ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್​ ಮೆಟ್ಟಿಲೇರಿದ್ದುಂಟು.ಅವು ಬೇಗ ಇತ್ಯರ್ಥಗೊಳ್ಳದೇ ಕುಟುಂಬದಲ್ಲಿ ಬಿರುಕು, ಜಗಳವುಂಟಾಗಿ ಆಸ್ತಿಗಳು ಪ್ರಯೋಜನಕ್ಕೆ ಬಾರದಿರುವ ಹಲವು ಪ್ರಕರಣಗಳನ್ನು ಕಾಣುತ್ತೇವೆ. ಆದರೆ, ಸಾಮಾನ್ಯ ಪರಿಭಾಷೆಯಲ್ಲಿ ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಮತ್ತು ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ವಿಂಗಡಿಸಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.ಹೆಣ್ಣುಮಕ್ಕಳ ಪಾಲು: […]

Advertisement

Wordpress Social Share Plugin powered by Ultimatelysocial