ಬೆಂಗಳೂರಿನ ಜನರೇ ಎಚ್ಚರ..!

ದಿನದಿಂದ ದಿನಕ್ಕೆ ಕೊರೊನಾ ಹೆಚ್ಚುತ್ತಿದ್ದು ನಗರದ 20 ವಾರ್ಡ್‍ಗಳನ್ನು ಡೇಂಜರ್ ಝೋನ್‍ಗಳಾಗಿ ಪರಿವರ್ತನೆಗೊಳಿಸಲಾಗಿದೆ. ಕೊರೊನಾ ಹಾಟ್‍ಸ್ಪಾಟ್ ಪಾದರಾಯನಪುರವನ್ನು ವಿವಿ ಪುರಂ ಮೀರಿಸುತ್ತಿದ್ದು, ಈ ಎರಡೂ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪಾದರಾಯನಪುರದಲ್ಲಿ 81 ಮಂದಿ ಸೋಂಕಿತರಿದ್ದರೆ, ಇತ್ತೀಚೆಗಷ್ಟೆ ಸೋಂಕು ಕಾಣಿಸಿಕೊಂಡ ವಿವಿಪುರಂನಲ್ಲಿ  73 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ವಿವಿ ಪುರಂನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚುಮಾಡಿದೆ. ಹಾಗೆಯೇ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‍ನಲ್ಲಿ 54, ಶಿವಾಜಿನಗರದಲ್ಲಿ 52, ಹೊಂಗಸಂದ್ರ 51, ಕೆ.ಆರ್ ಮಾರ್ಕೆಟ್ 36, ಎಸ್‍ಕೆ ಗಾರ್ಡನ್ 35, ಸಂಪಂಗಿರಾಮನಗರದಲ್ಲಿ 28 ಕೊರೊನಾ ಸೋಂಕಿತರಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವು ವಾರ್ಡ್‍ಗಳು ಡೇಂಜರ್ ಝೋನ್ ಹಂತ ತಲುಪುತ್ತಿದ್ದು, ನಾಗರಿಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಶ್ವಾಸಕೋಶಕ್ಕಲ್ಲ, ದೇಹಕ್ಕೇ ಕುತ್ತು

Thu Jul 2 , 2020
ಕೋವಿಡ್ ಪ್ರಕರಣಗಳು ಕಂಡು ಬಂದ ಹೊಸತರಲ್ಲಿ ಅದು ಕೇವಲ ಶ್ವಾಸಕೋಶಕ್ಕೆ ಸಂಬAಧಿಸಿದ ಕಾಯಿಲೆ ಎಂದು ಗುರುತಿಸಲಾಗಿತ್ತು. ಆದರೆ, ಹಲವಾರು ದೇಶಗಳಲ್ಲಿ ನಡೆಸಿದ ಅಧ್ಯಯನ ವರದಿಗಳನ್ನು ಒಂದೆಡೆ ಸೇರಿಸಿ ನೋಡಿದಾಗ, ಕೋವಿಡ್ ವೈರಸ್‌ನಿಂದಾಗಿ ಹೃದಯ, ಕಿಡ್ನಿ, ಮೆದುಳು, ಪಿತ್ತಕೋಶ ಹಾಗೂ ಇನ್ನಿತರ ಪ್ರಮುಖ ಅಂಗಾAಗಗಳಿಗೂ ಹಾನಿಯಾಗುತ್ತದೆ ಎಂಬುದು ತಿಳಿದುಬಂದಿದೆ. ಅಂದರೆ, ದಿನಗಳೆದಂತೆ ವೈರಾಣುಗಳು ಶಕ್ತಿಶಾಲಿಯಾಗಿ ಮಾರ್ಪಾಟಾಗುತ್ತಿದ್ದು, ಅದರ ಪರಿಣಾಮ ಕಾಯಿಲೆಯ ಗುಣಲಕ್ಷಣಗಳೂ ಬದಲಾಗುತ್ತಿವೆ ಎಂದು ಹೇಳಲಾಗಿದೆ. ಅಮೆರಿಕದ ಉಟಾ ವಿಶ್ವವಿದ್ಯಾಲಯದಲ್ಲಿ ನಡೆಸಲಾದ […]

Advertisement

Wordpress Social Share Plugin powered by Ultimatelysocial