ಶ್ವಾಸಕೋಶಕ್ಕಲ್ಲ, ದೇಹಕ್ಕೇ ಕುತ್ತು

ಕೋವಿಡ್ ಪ್ರಕರಣಗಳು ಕಂಡು ಬಂದ ಹೊಸತರಲ್ಲಿ ಅದು ಕೇವಲ ಶ್ವಾಸಕೋಶಕ್ಕೆ ಸಂಬAಧಿಸಿದ ಕಾಯಿಲೆ ಎಂದು ಗುರುತಿಸಲಾಗಿತ್ತು. ಆದರೆ, ಹಲವಾರು ದೇಶಗಳಲ್ಲಿ ನಡೆಸಿದ ಅಧ್ಯಯನ ವರದಿಗಳನ್ನು ಒಂದೆಡೆ ಸೇರಿಸಿ ನೋಡಿದಾಗ, ಕೋವಿಡ್ ವೈರಸ್‌ನಿಂದಾಗಿ ಹೃದಯ, ಕಿಡ್ನಿ, ಮೆದುಳು, ಪಿತ್ತಕೋಶ ಹಾಗೂ ಇನ್ನಿತರ ಪ್ರಮುಖ ಅಂಗಾAಗಗಳಿಗೂ ಹಾನಿಯಾಗುತ್ತದೆ ಎಂಬುದು ತಿಳಿದುಬಂದಿದೆ. ಅಂದರೆ, ದಿನಗಳೆದಂತೆ ವೈರಾಣುಗಳು ಶಕ್ತಿಶಾಲಿಯಾಗಿ ಮಾರ್ಪಾಟಾಗುತ್ತಿದ್ದು, ಅದರ ಪರಿಣಾಮ ಕಾಯಿಲೆಯ ಗುಣಲಕ್ಷಣಗಳೂ ಬದಲಾಗುತ್ತಿವೆ ಎಂದು ಹೇಳಲಾಗಿದೆ. ಅಮೆರಿಕದ ಉಟಾ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಸಂಶೋಧನೆಗಳಲ್ಲಿ, ಕೋವಿಡ್ ಸೋಂಕಿತರಲ್ಲಿ ಇನ್ ಫ್ಲಮೇಟರಿ ಪ್ರೊಟೀನ್‌ಗಳು ಉತ್ಪತ್ತಿಯಾಗುವುದರಿಂದ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಗುಣ ಲಕ್ಷಣಗಳನ್ನು ಬದಲಾಯಿಸುತ್ತದೆ. ಇದರಿಂದಾಗಿ ಮೆದುಳಿ­ನಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಹೃದಯ ಸ್ತಂಭನ, ಪಾರ್ಶ್ವವಾಯು ಅಥವಾ ಇನ್ನಿತರ ಗಂಭೀರ ಸಮಸ್ಯೆಗಳಿಗೆ ರೋಗಿಗಳು ಗುರಿಯಾಗುತ್ತಾರೆ ಎಂಬುದು ತಿಳಿದು ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ದೇಶದ ಬಾಧಿತರ ಸಂಖ್ಯೆ ೬ ಲಕ್ಷಕ್ಕೆ

Thu Jul 2 , 2020
ದೇಶದಲ್ಲಿ ಕೋವಿಡ್-೧೯ ಬಾಧಿತರ ಸಂಖ್ಯೆ ೬ ಲಕ್ಷ ದಾಟಿದೆ. ಜೂ. ೨೬ರಂದು ೫ ಲಕ್ಷ ದಾಟಿದ್ದ ಸಂಖ್ಯೆ ಜು. ೧ರ ವೇಳೆಗೆ ೬ ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ ೧೭,೭೮೬ಕ್ಕೆ ತಲುಪಿದ್ದು, ಚೇತರಿಸಿಕೊಂಡವರ ಸಂಖ್ಯೆಯೂ ೩,೫೮,೪೫೩ಕ್ಕೆ ಮುಟ್ಟಿದೆ. ಜೂ. ೨೬ರಂದು ೧೮,೨೫೫, ಜೂ. ೨೭ರಂದು ೨೦,೧೪೨, ಜೂ. ೨೮ರಂದು ೧೯,೬೧೦, ಜೂ. ೨೯ರಂದು ೧೮,೩೩೯, ಜೂ. ೩೦ರಂದು ೧೮,೨೫೬ ಹಾಗೂ ಜು. ೧ರಂದು ೧೬,೧೬೦ ಏರಿಕೆಯಾಗಿದೆ. ಈ ಮೂಲಕ ಆರು ದಿನಗಳಲ್ಲೇ […]

Advertisement

Wordpress Social Share Plugin powered by Ultimatelysocial