ಸಾನಿಯಾ-ಆನ್ನಾ ಜೋಡಿ ಆಸ್ಟ್ರೇಲಿಯನ್ ಓಪನ್ ನಿಂದ ಔಟ್.

ವೃತ್ತಿಜೀವನದ ಕೊನೆಯ ಆಸ್ಟ್ರೇಲಿಯನ್ ಓಪನ್ ಆಡಿದ ಭಾರತದ ಸಾನಿಯಾ ಮಿರ್ಜಾ ಜೋಡಿ ವನಿತೆಯರ ಡಬಲ್ಸ್ ವಿಭಾಗದ 2ನೇ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಆನ್ನಾ ಡೆನಿಲಿನಾ ಜೋಡಿ ಭಾನುವಾರ ನಡೆದ ವನಿತೆಯರ ಡಬಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ 4-6,6-4,2-6 ಸೆಟ್ ಗಳಿಂದ 8ನೇ ಶ್ರೇಯಾಂಕಿತ ಜೋಡಿಯಾದ ಬೆಲ್ಜಿಯಂನ ಅಲಿಸನ್ ವ್ಯಾನ್ ಉಯೆತ್ಸವಿಕ್ ಮತ್ತು ಉಕ್ರೇನ್ ನ ಅನ್ಹೆಲಿನಾ ಕಲಿಲಿನಾ ವಿರುದ್ಧ ಸೋಲುಂಡರು.

ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಮಿಶ್ರ ಡಬಲ್ಸ್ ನಲ್ಲಿ ಆಡುತ್ತಿದ್ದು, ಸಾನಿಯಾ ವೃತ್ತಿಜೀವನದ ಕೊನೆಯಲ್ಲಿ ಪ್ರಶಸ್ತಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಂಡಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಈ ಜೋಡಿ ಗೆದ್ದು ಎರಡನೇ ಸುತ್ತು ಪ್ರವೇಶಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೈದ್ಯೆ ಸೋಗಿನಲ್ಲಿ ಕಳವು ಖತರ್ನಾಕ್ ನರ್ಸ್ ಸೆರೆ.

Sun Jan 22 , 2023
ವೈದ್ಯೆಯ ವೇಷ ಧರಿಸಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಚಿನ್ನಾಭರಣ ಕಳವು ಮಾಡುತ್ತಿದ್ದ ಖತರ್ನಾಕ್ ನರ್ಸ್ ನ್ನು ಆಶೋಕನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್? ಆಗಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಿ ಬಂಧಿತ ಆರೋಪಿಯಾಗಿದ್ದಾಳೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಕಳೆದ ಜ.೧೧ ರಂದು ಉಸಿರಾಟ ಸಮಸ್ಯೆಯಿಂದ ಸರಸಮ್ಮ ದಾಖಲಾಗಿದ್ದು, ಅಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ವೈದ್ಯರ ವೇಷದಲ್ಲಿ ವಾರ್ಡ್ ಒಳಗೆ ಬಂದ ಆರೋಪಿಯು […]

Advertisement

Wordpress Social Share Plugin powered by Ultimatelysocial