ಸಣ್ಣ – ಪುಟ್ಟ ಗಾಯಗಳಿಗೆ ಇಲ್ಲಿದೆ ಪರಿಹಾರ

ಸಣ್ಣ - ಪುಟ್ಟ ಗಾಯಗಳಿಗೆ ಇಲ್ಲಿದೆ ಪರಿಹಾರ

ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು.

ಗಾಯವಾದ ತಕ್ಷಣ ಮೊದಲು ತಣ್ಣನೆಯ ನೀರಿನಲ್ಲಿ ಗಾಯವನ್ನು ಕ್ಲೀನ್ ಮಾಡಿ.

ಯಾವುದೇ ಸೋಪ್ ಬಳಸಬೇಡಿ.

ಬೆಳ್ಳುಳ್ಳಿ, ಸೋಂಕು ಹರಡುವುದನ್ನು ತಡೆಯುತ್ತದೆ. ಹಾಗಾಗಿ ಗಾಯವಾದ ಜಾಗಕ್ಕೆ ಬೆಳ್ಳುಳ್ಳಿ ರಸವನ್ನು ಹಚ್ಚಿ. ಇದ್ರಿಂದ ನೋವು ಕಡಿಮೆಯಾಗುತ್ತದೆ.

ಅರಿಶಿನ ಎಂಟಿಬಯೋಟಿಕ್ ಹಾಗೂ ನಂಜು ನಿರೋಧಕ ಶಕ್ತಿ ಹೊಂದಿದೆ. ಗಾಯವಾದ ಜಾಗಕ್ಕೆ ಅರಿಶಿನವನ್ನು ಹಾಕಿ. ತಕ್ಷಣ ರಕ್ತ ಸೋರುವುದು ಕಡಿಮೆಯಾಗಿ ನೋವು ಕಡಿಮೆಯಾಗುತ್ತದೆ. ಜೊತೆಗೆ ಸೋಂಕು ಹರಡದಂತೆ ತಡೆಯುತ್ತದೆ.

ಜೇನು ತುಪ್ಪದ ಹನಿಯನ್ನು ಗಾಯಕ್ಕೆ ಹಾಕಿ ಪಟ್ಟಿ ಕಟ್ಟುವುದು ಬಹಳ ಒಳ್ಳೆಯದು.

ಅಲೋವೆರಾ ಬಳಸಬಹುದುದಾಗಿದೆ. ಅಲೋವೆರಾ ರಸವನ್ನು ಗಾಯದ ಮೇಲೆ ಹಾಕಿ ಸ್ವಲ್ಪಹೊತ್ತು ಬಿಡಿ.

ವೈಟ್ ವಿನೆಗರ್ ಬಳಕೆಯಿಂದ ನೋವು ಕಡಿಮೆಯಾಗುತ್ತದೆ. ಇದರಿಂದ ಸೋಂಕನ್ನು ತಡೆಗಟ್ಟಬಹುದಾಗಿದೆ.

ಗಾಯ ಗುಣಪಡಿಸಲು ಈರುಳ್ಳಿ ರಸ ಒಳ್ಳೆಯದು. ಇದು ಬಹು ಬೇಗ ಗಾಯವನ್ನು ಕಡಿಮೆ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

DELHI:ಧ್ವಜವನ್ನು ಹಾರಿಸುತ್ತಿದ್ದಂತೆಯೇ ಸೋನಿಯಾ ಗಾಂಧಿಯವರ ಮೈಮೇಲೆ ಬಿತ್ತು ಧ್ವಜ;

Tue Dec 28 , 2021
ನವದೆಹಲಿ:ಮಂಗಳವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ(AICC) ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಂತೆ ಧ್ವಜವು ಧ್ವಜಸ್ತಂಭದಿಂದ ಬಿದ್ದಿದೆ. ನವದೆಹಲಿಯ (DELHI)ಎಐಸಿಸಿ (AICC)ಕೇಂದ್ರ ಕಚೇರಿಯಲ್ಲಿ ಪಕ್ಷದ 137ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.ಆದರೆ, ಪಕ್ಷದ ಖಜಾಂಚಿ ಪವನ್ ಬನ್ಸಾಲ್ ಮತ್ತು ಎಐಸಿಸಿ(AICC) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೊಂದಿಗೆ ಸೋನಿಯಾ ಗಾಂಧಿ ಅವರು ಪಕ್ಷದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಸಂಕ್ಷಿಪ್ತವಾಗಿ ಪ್ರದರ್ಶಿಸಿದರು. ನಂತರ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial