ಒಂದಲ್ಲ ಎರಡಲ್ಲ 4 ಮದ್ವೆಯಾಗಿರುವ ಸ್ಯಾಂಟ್ರೋ ರವಿ!

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಲೇ ಇದೆ. ಕಳ್ಳತನ, ವರ್ಗಾವಣೆ ದಂಧೆ ಹಾಗೂ ವೇಶ್ಯಾವಾಟಿಕೆ ದಂಧೆ ಹೊರತು ಪಡಿಸಿ ಇದೀಗ ಸ್ಯಾಂಟ್ರೋ ರವಿಯ ವೈಯಕ್ತಿಕ ಮಾಹಿತಿಗೆ ಬಯಲಿಗೆ ಬಂದಿದೆ.ಸ್ಯಾಂಟ್ರೋ ರವಿಗೆ ಎರಡಲ್ಲ ನಾಲ್ಕು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. 2000ನೇ ಇಸವಿಯಲ್ಲಿ ಮಂಡ್ಯದ ರೂಪ ಎನ್ನುವ ಯುವತಿಯನ್ನು ರವಿ ಪ್ರೀತಿಸಿದ್ದ. ರೂಪ ಪಿಯುಸಿ ಓದುತ್ತಿದ್ದಳು. ಬಡವರ ಮನೆಯ ರೂಪ ತುಂಬಾ ಸುಂದರವಾಗಿದ್ದಳು. ಕದ್ದ ಕಾರಿನಿಂದ ರೂಪಳನ್ನು ಬಲೆಗೆ ಬೀಳಿಸಿಕೊಂಡಿದ್ದ ರವಿ, ಮದುವೆಯಾಗ್ತೀನಿ ಎಂದು ನಂಬಿಸಿ ರೂಪಳನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದ.ಅಂದು ರವಿ ಜತೆ ಮೈಸೂರಿಗೆ ಹೋದ ರೂಪ ಇಂದಿಗೂ ನಿಗೂಢವಾಗಿಯೇ ಉಳಿದಿದ್ದಾಳೆ. ಇಲ್ಲಿಯವರೆಗೆ ರೂಪ ಏನಾದಳು ಎಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ರೂಪಳನ್ನು ಸ್ಯಾಂಟ್ರೋ ರವಿ ಏನು ಮಾಡಿರಬಹುದು ಎಂಬ ಹಲವು ಅನುಮಾನ ಕಾಡತೊಡಗಿದೆ. ರೂಪ ಸ್ಯಾಂಟ್ರೋ ರವಿ ಜೊತೆ ಹೋದ ಮೇಲೆ ಆಕೆಯ ಕುಟುಂಬ ಮಂಡ್ಯ ಖಾಲಿ ಮಾಡಿದೆ.ಇದಾದ ಬಳಿಕ 2007ರಲ್ಲಿ ಮೈಸೂರಿನ ಆಫೀಸರ್ ಮಗಳ ಮೇಲೆ ಸ್ಯಾಂಟ್ರೋ ರವಿಗೆ ಲವ್ ಆಗಿತ್ತು. ಆದರೆ, ಆಕೆ ಅಪ್ರಾಪ್ತೆಯಾಗಿದ್ದಳು. ಆಕೆಗೂ ತನ್ನ ಪ್ರೀತಿಯ ಬಲೆ ಬೀಸಿದ್ದ ಸ್ಯಾಂಟ್ರೋ ರವಿ, ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗಲು ಸಂಚು ರೂಪಿಸಿದ್ದ. ಅಪ್ರಾಪ್ತ ಬಾಲಕಿಯ ಅಪಹರಣ ವಿಚಾರವಾಗಿ ಪೊಲೀಸರಿಗೆ ಅಂದು ಸಿಕ್ಕಿಬಿದ್ದು ಜೈಲು ಸೇರಿದ್ದ ಎಂದು ತಿಳಿದುಬಂದಿದೆ.ಮೈಸೂರಿನ ಯುವತಿಯೊಬ್ಬಳು ರವಿ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಮೈಸೂರು ಪೊಲೀಸರು ವಿಶೇಷ ತಂಡ ರಚಿಸಿ ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ್ದಾರೆ. ಬಾಂಬೆಗೆ ಹೋಗಿದ್ದ ರಾಜಕಾರಣಿಗಳ ಜೊತೆ 12 ಹುಡುಗಿಯರನ್ನು ಈತ ಕಳುಹಿಸಿದ್ದ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸ್ಯಾಂಟ್ರೋ ರವಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಡುಕರ ಗಲಾಟೆ, ಗಗನಸಖಿಯೊಂದಿಗೆ ಜಗಳ!

Mon Jan 9 , 2023
  ಏರ್ ಇಂಡಿಯಾ ವಿಮಾನದಲ್ಲಿ ವೃದ್ಧೆಯೊಬ್ಬಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಇನ್ನೂ ಮಾಸಿದಂತಿಲ್ಲ ಎನ್ನುವಾಗಲೇ ವಿಮಾನದೊಳಗೆ ಮತ್ತೊಂದು ದುರ್ವರ್ತನೆ ಪ್ರಕರಣ ಬಯಲಿಗೆ ಬಂದಿದೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಗಗನಸಖಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.ವರದಿಗಳ ಪ್ರಕಾರ, ಅಮಲೇರಿದ ಸ್ಥಿತಿಯಲ್ಲಿದ್ದ ಮೂವರು ಪ್ರಯಾಣಿಕರು ವಿಮಾನದೊಳಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ. ಮೂವರು ಆರೋಪಿ ಪ್ರಯಾಣಿಕರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ದೆಹಲಿಯಿಂದ ಪಾಟ್ನಾಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ನಲ್ಲಿ […]

Advertisement

Wordpress Social Share Plugin powered by Ultimatelysocial