2018-20ರಲ್ಲಿ ನಿರುದ್ಯೋಗ, ಸಾಲದ ಸಮಸ್ಯೆಯಿಂದ 25,000ಕ್ಕೂ ಹೆಚ್ಚು ಭಾರತೀಯರು ಆತ್ಮಹತ್ಯೆ: ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.

ನವದೆಹಲಿ: 2018 ರಿಂದ 2020 ರ ನಡುವೆ ಭಾರತದಲ್ಲಿ ನಿರುದ್ಯೋಗ ಅಥವಾ ಸಾಲದ ಸಮಸ್ಯೆಯಿಂದ 25,000ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.ಈ ಅವಧಿಯಲ್ಲಿ 9,140 ಜನರು ನಿರುದ್ಯೋಗದಿಂದ ಮತ್ತು 16,091 ಜನರು ಆರ್ಥಿಕ ದಿವಾಳಿತನ ಅಥವಾ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮೇಲ್ಮನೆಗೆ ಮಾಹಿತಿ ನೀಡಿದೆ.ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಒದಗಿಸಿದ ದತ್ತಾಂಶವನ್ನು ಆಧರಿಸಿ ಅಂಕಿಅಂಶಗಳನ್ನು ನೀಡಲಾಗಿದೆ ಎಂದು ಹೇಳಿದರು.ಕಳೆದ ಕೆಲವು ವಾರಗಳಿಂದ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ನಿರುದ್ಯೋಗ ಸಮಸ್ಯೆಯ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಒಳ್ಳೆಯ ದಿನಗಳು ದುರ್ಗಮವಾಗಿವೆ ಎಂದು ಈ ಅಂಕಿ ಅಂಶಗಳನ್ನು ಉಲ್ಲೇಖಿಸಿದ್ದಾರೆ.ಅಂಕಿಅಂಶಗಳ ಪ್ರಕಾರ, 2020 ರ ಸಾಂಕ್ರಾಮಿಕ ವರ್ಷದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಅತಿ ಹೆಚ್ಚು(3,548) ಪ್ರಕರಣಗಳು ದಾಖಲಾಗಿವೆ. 2018 ರಲ್ಲಿ 2,741 ಮಂದಿ ನಿರುದ್ಯೋಗದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2019 ರಲ್ಲಿ 2,851 ಮಂದಿ ಉದ್ಯೋಗವಿಲ್ಲದೆ ಸಾವಿಗೆ ಶರಣಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಪತ್ನಿ ಸುಸ್ಸಾನೆ ಖಾನ್ ಅವರ ವರ್ಕೌಟ್ ವೀಡಿಯೊ ಕುರಿತು ಹೃತಿಕ್ ರೋಷನ್ ಕಾಮೆಂಟ್ ಮಾಡಿದ್ದಾರೆ, 'ನನಗೆ ಶಾರ್ಟ್ಸ್ ಇಷ್ಟ' ಎಂದಿದ್ದಾರೆ

Wed Feb 9 , 2022
  ಬಾಲಿವುಡ್ ಮೆಗಾಸ್ಟಾರ್ ಹೃತಿಕ್ ರೋಷನ್ ತಮ್ಮ ಮಾಜಿ ಪತ್ನಿ ಸುಸ್ಸಾನೆ ಖಾನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಆಗಾಗ್ಗೆ ಕಾಮೆಂಟ್ ಮಾಡುತ್ತಾರೆ. ಮತ್ತೊಮ್ಮೆ, ನಟ ಸುಸ್ಸಾನ್ನೆ ಅವರ ತಾಲೀಮು ವೀಡಿಯೊದಲ್ಲಿ ಅವರ ಸ್ನೀಕಿ ಕಾಮೆಂಟ್‌ಗಾಗಿ ಸುದ್ದಿಯಲ್ಲಿದ್ದಾರೆ. ಮಂಗಳವಾರ, ಸುಸ್ಸೇನ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗೆ ಕರೆದೊಯ್ದರು ಮತ್ತು ವೀಡಿಯೊವನ್ನು ಕೈಬಿಟ್ಟರು, ಅದರಲ್ಲಿ ಅವರು ತಮ್ಮ ಫಿಟ್ನೆಸ್ ದಿನಚರಿಯ ಒಂದು ನೋಟವನ್ನು ಹಂಚಿಕೊಳ್ಳುವುದನ್ನು ಕಾಣಬಹುದು. ಡೇವಿಡ್ ಗುಟ್ಟಾ […]

Advertisement

Wordpress Social Share Plugin powered by Ultimatelysocial