ಭಾರತ ಒಂದೇ ಜಗತ್ತಿನ ಪ್ರಗತಿಯಲ್ಲಿ 15% ಕೊಡುಗೆಯನ್ನು ನೀಡಲಿದೆ

ನವ ದೆಹಲಿ:ಈ ವರ್ಷ ಮತ್ತು ಮುಂದಿನ ವರ್ಷ ಜಗತ್ತಿನ ಬೆಳವಣಿಗೆಯ ಜವಾಬ್ದಾರಿಯನ್ನು ಪ್ರಗತಿಶೀಲ ರಾಷ್ಟ್ರಗಳು ವಹಿಸಲಿವೆ.

ಅದರಲ್ಲೂ ಭಾರತ ಒಂದೇ ಜಗತ್ತಿನ ಪ್ರಗತಿಯಲ್ಲಿ 15% ಕೊಡುಗೆಯನ್ನು ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ನ (International Monetary Fund) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿವಾ ಬುಧವಾರ ಭವಿಷ್ಯ ನುಡಿದಿದ್ದಾರೆ.

ಭಾರತದ ಆರ್ಥಿಕತೆ ಪ್ರಬಲವಾಗಿ ಬೆಳೆಯುತ್ತಿದೆ. (bright spot) ಜಾಗತಿಕ ಅಭಿವೃದ್ಧಿಯ ಚಾಲಕ ಶಕ್ತಿಯಾಗಲಿದೆ. ಅದು ದೇಶಗಳನ್ನು ಒಗ್ಗೂಡಿಸುವ ವಿಶಿಷ್ಟ ಸ್ಥಾನದಲ್ಲಿದೆ. ಜಾಗತಿಕ ಆರ್ಥಿಕತೆ ಅನಿಶ್ಚಿತತೆಯಲ್ಲಿ ಇರುವ ಸಂದರ್ಭದಲ್ಲಿ ಭಾರತದ ಸ್ಥಾನ ವಿಶಿಷ್ಟವಾಗಿದೆ. ಜಿ20 ಗ್ರೂಪ್‌ನ ಅಧ್ಯಕ್ಷ ಸ್ಥಾನವನ್ನೂ ವಹಿಸಿಕೊಂಡಿದೆ.

ಬೆಂಗಳೂರಿನಲ್ಲಿ ಈ ವಾರ ಇಪ್ಪತ್ತು ದೇಶಗಳ ಹಣಕಾಸು ಸಚಿವರು, ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ಗಳು ಸೇರುತ್ತಿದ್ದಾರೆ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ಬುಧವಾರ ಜಿ20 ಗ್ರೂಪ್‌ನ ಸಭೆ ಶುರುವಾಗಿದ್ದು ಶುಕ್ರವಾರದ ತನಕ ನಡೆಯಲಿದೆ. ಈ ಸಭೆಯಲ್ಲಿ ಜಾಗತಿಕ ಆರ್ಥಿಕತೆಯ ಪ್ರಮುಖ ಸವಾಲುಗಳ ಬಗ್ಗೆ ಚರ್ಚೆ ನಡೆಯಲಿದೆ.

ಹಣಕಾಸು ಸೇರ್ಪಡೆಗೆ ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದಕ್ಕೆ ಭಾರತದಲ್ಲಿ ನಡೆದಿರುವ ಯುಪಿಐ ಕ್ರಾಂತಿ ಅತ್ಯುತ್ತಮ ಉದಾಹರಣೆಯಾಗಿದೆ. ಕಳೆದ ತಿಂಗಳು ಭಾರತದಲ್ಲಿ 800 ಕೋಟಿ ಯುಪಿಐ ವರ್ಗಾವಣೆಗಳು ನಡೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಸ್‌ ಬ್ಯಾಂಕ್‌ ತನ್ನ ನಿಶ್ಚಿತ ಅವಧಿಯ ಠೇವಣಿಗಳ ಬಡ್ಡಿ ದರಗಳನ್ನು ಏರಿಸಿದ್ದು

Thu Feb 23 , 2023
ನವ ದೆಹಲಿ: ಯಸ್‌ ಬ್ಯಾಂಕ್‌ ತನ್ನ ನಿಶ್ಚಿತ ಅವಧಿಯ ಠೇವಣಿಗಳ ಬಡ್ಡಿ ದರಗಳನ್ನು ಏರಿಸಿದ್ದು, (FD Interest rate hike) 0.25% ರಿಂದ 0.50% ತನಕ ಏರಿಸಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಪರಿಷ್ಕೃತ ಬಡ್ಡಿ ದರಗಳು ಅನ್ವಯವಾಗಲಿದೆ. ಫೆಬ್ರವರಿ 21ರಿಂದ ಪರಿಷ್ಕೃತ ಬಡ್ಡಿ ದರಗಳು ಜಾರಿಯಾಗಲಿದೆ. ಸಾಮಾನ್ಯ ನಾಗರಿಕರಿಗೆ 15 ತಿಂಗಳಿನಿಂದ ೩೫ ತಿಂಗಳಿನ ಅವಧಿಯ ಠೇವಣಿಗೆ 7.50% ಬಡ್ಡಿ ದರ ಸಿಗಲಿದೆ. ಹಿರಿಯ ನಾಗರಿಕರಿಗೆ […]

Advertisement

Wordpress Social Share Plugin powered by Ultimatelysocial