ಶಾಹಿದ್ ಅಫ್ರಿದಿ ಕಾಲೆಳೆದ ಟ್ರೋಲಿಗರು ..!

ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ಕೊರೊನಾ ಸೋಂಕಿನಿAದ ಚೇತರಿಸಿಕೊಂಡಿರುವ ಬೆನ್ನಲ್ಲೇ ವಿವಾದಾತ್ಮಾಕ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗೆ ಒಳಗಾಗಿದ್ದಾರೆ.ಕೊರೊನಾ ಸೋಂಕಿನಿAದ ಬಳಲುತ್ತಿದ್ದ ಅಫ್ರಿದಿ ಕಳೆದ ೪ ದಿನಗಳ ಹಿಂದಷ್ಟೇ ಚೇತರಿ ಸಿಕೊಂಡಿದ್ದರು. ಇದರ ಬೆನ್ನಲ್ಲೇ ಸಂದರ್ಶನ ನೀಡಿದ್ದ ಅಫ್ರಿದಿ, ಭಾರತ ಕ್ರಿಕೆಟಿಗರ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೇ ಭಾರತ ಆಟಗಾರರು ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ಹೇಳಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಅಭಿಮಾನಿಗಳು ಅಫ್ರಿದಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ವೈರಸ್ ಕಾರಣದಿಂದ ಅಫ್ರಿದಿ ಮೆದುಳಿಗೆ ಸಮಸ್ಯೆ ಉಂಟಾಗಿದೆಯೇ? ಆರ್ ಯು ಓಕೆ..ಅಫ್ರಿದಿ? ನಿನಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯವಿದೆ ಎನಿಸುತ್ತದೆ ಎಂದು ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹೋಂಸ್ಟೇ ರೆಸಾರ್ಟ್, ಲಾಡ್ಜ್ ಬಂದ್

Tue Jul 7 , 2020
ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೊಸ ೧೪ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ಮೂಲೆಮೂಲೆಗೂ ಸೋಂಕು ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರ ಬಡಾವಣೆಯ ೨೩ ವರ್ಷದ ಮಹಿಳೆ, ಗೋಣಿಕೊಪ್ಪಲು ನೇತಾಜಿ ಬಡಾವಣೆಯ ೫೦ ವರ್ಷದ ಆರೋಗ್ಯ ಇಲಾಖೆಯ ಅಧಿಕಾರಿ, ತಿತಿಮತಿ ಗ್ರಾಮದ ೫೪ ವರ್ಷದ ಆರೋಗ್ಯ ಇಲಾಖೆಯ ವಾಹನದ ಚಾಲಕನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.ಅದೇ ರೀತಿಯಲ್ಲಿ, ಮಡಿಕೇರಿ ತಾಲೂಕಿನ […]

Advertisement

Wordpress Social Share Plugin powered by Ultimatelysocial