‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ಬದಲಾಯ್ತು ರಕ್ಷಿತ್ ಶೆಟ್ಟಿ ಲುಕ್..!

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ನಿರ್ದೇಶಕ ಹೇಮಂತ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಮತ್ತೆ ಒಂದಾಗಿದ್ದಾರೆ. ಈ ಜೋಡಿ ಒಂದಾಗಿ ವಿಭಿನ್ನ ರೀತಿಯ ಚಿತ್ರ ಮಾಡಿದ್ದು, ಅದಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಎಂದು ಚಂದದ ಹೆಸರು ಕೂಡ ಇಟ್ಟಿದ್ದಾರೆ.

ಈ ಸಿನಿಮಾ ಫಸ್ಟ್ ಲುಕ್ ಇಂದು ಬಿಡುಗಡೆ ಆಗಿದೆ. ಫಸ್ಟ್ ಲುಕ್ ಕಂಡು ರಕ್ಷಿತ್ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಮಲ್ಲಿಗೆಯಂತೆ ತೂಗುತ್ತಿದ್ದ ರಕ್ಷಿತ್ ಗುಲಾಬಿ ರೀತಿಯಲ್ಲಿ ಉಬ್ಬಿಕೊಂಡಿರುವುದಕ್ಕೆ ಕಾರಣವನ್ನೂ ಅವರು ಕೇಳಿದ್ದಾರೆ. ಹೌದು, ಈ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು,

ಅದು ಗಾಬರಿ ಬೀಳುವಷ್ಟು ತೂಕ ಹೆಚ್ಚಿದೆಯಂತೆ. ಈ ಪಾತ್ರಕ್ಕಾಗಿ ಅಂಥದ್ದೊಂದು ತಾಲೀಮು ಅವಶ್ಯಕತೆ ಇತ್ತು. ಹಾಗಾಗಿ 15 ರಿಂದ 20 ಕೇಜಿ ತೂಕವನ್ನು ಈ ಚಿತ್ರಕ್ಕಾಗಿ ರಕ್ಷಿತ್ ಹೆಚ್ಚಿಸಿಕೊಂಡಿದ್ದಾರಂತೆ. ಅಲ್ಲದೇ, ಇಲ್ಲಿ ಅವರ ಪಾತ್ರಕ್ಕೆ ಹಲವು ಶೇಡ್ ಗಳು ಇರುವುದರಿಂದ ತೂಕ ಹೆಚ್ಚಿಸಿಕೊಂಡ ಪಾತ್ರದ ಫಸ್ಟ್ ಲುಕ್ ಅನ್ನು ಈ ಬಾರಿ ರಿಲೀಸ್ ಮಾಡಿದ್ದಾರೆ ನಿರ್ದೇಶಕರು. ಈಗ ಆ ಫಸ್ಟ್ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ, ರಕ್ಷಿತ್ ನಡೆಯನ್ನು ಅಭಿನಂದಿಸಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಯಾರಾ ಅಡ್ವಾನಿ ಮದುವೆ ಬಗ್ಗೆ ಶಾಕಿಂಗ್ ಕಮೆಂಟ್: ಸಿದ್ಧಾರ್ಥ್ ಗತಿ ಏನು?

Wed May 25 , 2022
ನಟಿ ಕಿಯಾರ ಅಡ್ವಾಣಿ ತಮ್ಮ ಅಭಿನಯದ ಭೂಲ್ ಭುಲಯ್ಯ 2 ಸಿನಿಮಾ ರಿಲೀಸ್ ಆಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ನಟಿ ಕಿಯಾರಾ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಮದುವೆ ವಿಚಾರಕ್ಕೆ ಕಿಯಾರ ಸದ್ದು ಆಗಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ನಡುವೆ ಲವ್ವಿ, ಡವ್ವಿ ಇದೆ ಎನ್ನುವ ವಿಚಾರ ಹಲವು ದಿನಗಳಿಂದ ಬಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ. ಆದರೆ ಮಧ್ಯದಲ್ಲಿ ಕಿರಿಕ್ ಆಗಿತ್ತಂತೆ. ಈಗ ಈ […]

Advertisement

Wordpress Social Share Plugin powered by Ultimatelysocial