ತಿರುಮಲ ಭಕ್ತರ ದರ್ಶನ ಪದ್ಧತಿಯಲ್ಲಿ ಬದಲಾವಣೆ ಇಲ್ಲ

ಆನಂದ ನಿಲಯದ ಚಿನ್ನದ ಹೊದಿಕೆ ಹೊದಿಸುವುದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಟಿಟಿಡಿ ಮಂಡಳಿ ಇತ್ತೀಚೆಗೆ ತೆಗೆದುಕೊಂಡಿತ್ತು. ಇದು ತಿರುಮಲ ಭಕ್ತರ ದರ್ಶನ ಪದ್ಧತಿಗೆ ಅನ್ವಯವಲ್ಲ ಎಂದು ಟಿಟಿಡಿ ವಕ್ತಾರರು ತಿಳಿಸಿದ್ದಾರೆ.ಆನಂದ ನಿಲಯಂಗೆ ಈಗಿರುವ ಚಿನ್ನದ ಹೊದಿಕೆ ತೆಗೆದು ಹೊಸ ಚಿನ್ನದ ಹೊದಿಕೆ (ಗೋಲ್ಡ್‌ ಪ್ಲೇಟಿಂಗ್‌) ಹೊದಿಸುವ ತೀರ್ಮಾನವನ್ನುತಿರುಮಲ ತಿರುಪತಿ ದೇವಸ್ಥಾನಮ್ಸ್‌  ಇತ್ತೀಚಿನ ಸಭೆಯಲ್ಲಿ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಇರಲ್ಲ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಟಿಟಿಡಿ ಸ್ಪಷ್ಟೀಕರಣ ನೀಡಿದೆ.ಆನಂದ ನಿಲಯಂನ ಚಿನ್ನದ ಹೊದಿಕೆ ನವೀಕರಣ ಸಂದರ್ಭದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿ ದೇವರ ದರ್ಶನ ಮೊಟಕುಗೊಳಿಸುವಂತಹ ಯಾವುದೇ ನಿರ್ಧಾರವನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ತೆಗೆದುಕೊಂಡಿಲ್ಲ.ಹಿಂದುಸ್ತಾನ್‌ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಟಿಟಿಡಿಯ ವಕ್ತಾರ ಹೇಳಿರುವುದು ಇಷ್ಟು – ಟಿಟಿಡಿ ಚೇರ್ಮನ್‌ ವೈ.ವಿ.ಸುಬ್ಬಾ ರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಹೀಗೆ – ಬಾಲಾಲಯಂನ ನಿರ್ಮಾಣ ಫೆಬ್ರವರಿ 23ರಿಂದ ಶುರುವಾಗಲಿದೆ. ಭಕ್ತರ ದರ್ಶನ ವ್ಯವಸ್ಥೆಯಲ್ಲಿ ಅಥವಾ ದರ್ಶನ ಪದ್ಧತಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.ದರ್ಶನ ಪದ್ಧತಿಯಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದಾದರೆ, ಬಾಲಾಲಯ ನಿರ್ಮಿಸುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ – ಫೆಬ್ರವರಿ ಮೊದಲ ವಾರದಲ್ಲಿ ಆಡಳಿತ ಮಂಡಳಿ ಪುನಃ ಸಭೆ ಸೇರಿ ಈ ವಿಚಾರವಾಗಿ ತೀರ್ಮಾನ ತೆಗೆದುಕೊ‍ಳ್ಳಲಿದೆ ಎಂದು ಟಿಟಿಡಿ ವಕ್ತಾರರು ತಿಳಿಸಿದ್ದಾರೆ.ಆರರಿಂದ ಎಂಟು ತಿಂಗಳ ಕಾಲ ಚಿನ್ನದ ಹೊದಿಕೆ ಹೊದಿಸುವ ಕಾರ್ಯದಲ್ಲಿ ದರ್ಶನ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಆಗಮ ತಜ್ಞರು ಮತ್ತು ಅರ್ಚಕರೊಂದಿಗೆ ಟಿಟಿಡಿ ಚರ್ಚಿಸಲಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ಹಬ್ಬಕ್ಕೆ ಹಳದಿ ಲೋಹ ತುಟ್ಟಿ, ಬೆಳ್ಳಿ ಬೆಲೆಯೂ ಏರಿಕೆ

Wed Dec 28 , 2022
  ಚಿನ್ನ ಮಹಿಳೆಯರಿಗೆ ಅಚ್ಚುಮೆಚ್ಚು. ಅಲ್ಲದೆ ಎಲ್ಲಾ ರೀತಿಯ ಹೂಡಿಕೆದಾರರಿಗೆ ಚಿನ್ನವು ಹೆಚ್ಚು ಆದ್ಯತೆಯ ಆಸ್ತಿಯಾಗಿದೆ. ವಿಶ್ವದ‌ಲ್ಲೇ ಅತಿ ಹೆಚ್ಚು ಚಿನ್ನ ಬಳಸುವ ದೇಶ ಭಾರತ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿವೆ. ಹೂಡಿಕೆಗೆ ಚಿನ್ನ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಹೀಗಾಗಿ ಚಿನ್ನದ ದರವು ಮಾರುಕಟ್ಟೆಯಲ್ಲಿ ಏರಿಳಿತವನ್ನು ಕಾಣುತ್ತಿರುತ್ತದೆ.ಕ್ರಿಸ್‌ಮಸ್‌ ಹಬ್ಬದ ನಡುವೆ ಹಳದಿ ಲೋಹ ದುಬಾರಿಯಾಗಿದೆ. ಹಬ್ಬದ ಸಂಭ್ರಮದ ನಡುವೆ ಚಿನ್ನ ಖರೀದಿಗೆ ಯೋಜಿಸಿದವರಿಗೆ, ಬಂಗಾರ ತುಟ್ಟಿಯಾಗಿದೆ. ದೇಶೀಯ […]

Advertisement

Wordpress Social Share Plugin powered by Ultimatelysocial