ಶರ್ಮಿಳಾ ಠಾಗೂರ್ ಗುಳಿ ಕೆನ್ನೆಯ ಪ್ರತಿಭಾವಂತ ಚೆಲುವೆ

 

ಶರ್ಮಿಳಾ ಠಾಗೂರ್ 1944ರ ಡಿಸೆಂಬರ್ 8ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರ ತಂದೆ ಗೀತೀಂದ್ರನಾಥ ಠಾಗೂರರು ಬ್ರಿಟಿಷ್ ಇಂಡಿಯಾ ಕಾರ್ಪೊರೇಷನ್ನಿನ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದರು. ತಾಯಿ ಇರಾ ಠಾಗೂರ್. ತಂದೆ ಮತ್ತು ತಾಯಿ ಎರಡೂ ಕುಟುಂಬಕ್ಕೂ ನೊಬೆಲ್ ಪುರಸ್ಕೃತ ಕವಿ ರಬೀಂದ್ರನಾಥ್ ಠಾಗೂರರು ದೂರ ಸಂಬಂಧಿಗಳಾಗಿದ್ದರು.
ಶರ್ಮಿಳಾ ಅವರು ಶಾಲೆಯಲ್ಲಿ ಓದುತ್ತಿದ್ದಾಗ 13ನೇ ವಯಸ್ಸಿನಲ್ಲಿ ಇರುವಾಗಲೇ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ದೊರಕಿ ಅವರ ಓದು ನಿಲುಗಡೆ ಆಯ್ತು. 1959ರಲ್ಲಿ ಸತ್ಯಜಿತ್ ರೇ ಅವರ ಬೆಂಗಾಲಿ ಚಿತ್ರ ‘ಅಪುರ್ ಸನ್ಸಾರ್’ ಚಿತ್ರದ ಮೂಲಕ ಶರ್ಮಿಳಾ ಸಿನಿಮಾ ವೃತ್ತಿಗೆ ಕಾಲಿಟ್ಟರು. 1964ರಲ್ಲಿ ಶಕ್ತಿ ಸಾಮಂತ್ ಅವರ ‘ಕಾಶ್ಮೀರ್ ಕಿ ಕಲಿ’ ಚಿತ್ರದಲ್ಲಿ ನಟಿಸಿದರು. ‘ಎನ್ ಈವನಿಂಗ್ ಇನ್ ಪ್ಯಾರಿಸ್’ ಚಿತ್ರದಲ್ಲಿ ಬಿಕಿನಿ ಧರಿಸಿದ ಪ್ರಥಮ ಭಾರತೀಯ ನಟಿ ಎನಿಸಿದರು. 1968ರಲ್ಲಿ ಬಿಕಿನಿ ಉಡುಪಿನಲ್ಲಿ ಫಿಲಂಫೇರ್ ಪತ್ರಿಕೆಗೂ ಪೋಸ್ ನೀಡಿದರು. ಆದರೆ 36 ವರ್ಷಗಳ ನಂತರ ಸೆನ್ಸಾರ್ ಮಂಡಲಿಯ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಭಾರತೀಯ ಚಿತ್ರಗಳಲ್ಲಿ ಬಿಕಿನಿ ಉಡುಪನ್ನು ಅತೀವವಾಗಿ ಬಿಂಬಿಸುತ್ತಿರುವ ಬಗ್ಗೆ ಕಳವಳವನ್ನು ಸಹಾ ವ್ಯಕ್ತಪಡಿಸಿದರು.
ಶಕ್ತಿ ಸಾಮಂತರು ಶರ್ಮಿಳಾರನ್ನು 1969 ವರ್ಷದಲ್ಲಿ ರಾಜೇಶ್ ಖನ್ನ ಜೊತೆ ‘ಆರಾಧನಾ’, 1972 ವರ್ಷದಲ್ಲಿ ‘ಅಮರ್ ಪ್ರೇಮ್’, ಮುಂತಾದ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿಸಿದರು. ಈ ಎರಡೂ ಚಿತ್ರಗಳಲ್ಲದೆ ಇತರ ಚಿತ್ರ ನಿರ್ದೇಶಕರ ಸಫರ್, ದಾಗ್, ಮಾಲಿಕ್, ಚೋಟಿ ಬಹು, ರಾಜಾ ರಾಣಿ, ಆವಿಷ್ಕಾರ್ ಮುಂತಾದ ಬಹು ಯಶಸ್ವಿ ಚಿತ್ರಗಳಲ್ಲಿ ಸಹಾ ರಾಜೇಶ್ ಖನ್ನ ಮತ್ತು ಶರ್ಮಿಳಾ ಠಾಗೂರ್ ಜೋಡಿ ಅಪಾರ ಜನಪ್ರಿಯತೆಗಳಿಂದ ಕಂಗೊಳಿಸಿತು.
1975 ವರ್ಷದಲ್ಲಿ ಶರ್ಮಿಳಾ ಅವರು ಗುಲ್ಜಾರ್ ಅವರ ಪ್ರಸಿದ್ಧ ಚಿತ್ರ ‘ಮೌಸಮ್’ನಲ್ಲಿ ಮಹಾನ್ ನಟ ಸಂಜೀವ್ ಕುಮಾರ್ ಅವರೊಂದಿಗೆ ಶ್ರೇಷ್ಠ ಅಭಿನಯದಲ್ಲಿ ಸಹಭಾಗಿಯಾದರು. ಈ ಚಿತ್ರದ ಅಭಿನಯಕ್ಕೆ ಅವರಿಗೆ ರಾಷ್ಟ್ರೀಯ ಚಲಚಿತ್ರ ಪ್ರಶಸ್ತಿ ಸಂದಿತು. ಶರ್ಮಿಳಾ 1991 ವರ್ಷದಲ್ಲಿ ಮೀರಾ ನಾಯರ್ ಅವರ ‘ಮಿಸಿಸಿಪಿ ಮಸಾಲಾ’ ಚಿತ್ರದ ಪೋಷಕ ನಟಿ ಪಾತ್ರದಲ್ಲಿ ಅಭಿನಯಿಸಿದರು.
ಶರ್ಮಿಳಾ ಅವರು ನಟ ಧರ್ಮೇಂದ್ರ ಜೊತೆಯಲ್ಲಿ ಸಹಾ ದೇವರ್, ಅನುಪಮಾ, ಮೇರೆ ಹಮ್ದಮ್ ಮೇರೆ ದೋಸ್ತ್, ಸತ್ಯಕಾಮ್, ಯಾಕೀನ್, ಚುಪ್ಕೆ ಚುಪ್ಕೆ, ಏಕ್ ಮಹಲ್ ಹೋ ಸಪ್ನೋಂ ಕಾ, ಸನ್ನಿ ಮುಂತಾದ ಚಿತ್ರಗಳ ಯಶಸ್ವಿ ಜೋಡಿ ಎನಿಸಿದ್ದರು. ಅಮಿತಾಬ್, ನಸೀರುದ್ದೀನ್ ಷಾ ಮುಂತಾದವರೊಂದಿಗೆ ಸಹಾ ಅವರು ಅಭಿನಯಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಧರ್ಮೇಂದ್ರ ಚಲನಚಿತ್ರ ರಂಗದಲ್ಲಿ ಸುರದ್ರೂಪ ಪ್ರತಿಭೆ, ಯಶಸ್ಸು ಎಲ್ಲವೂ ಒಂದೆಡೆ ಸಂಭವಿಸಿದ ನಟ.

Sat Dec 24 , 2022
  ಧರ್ಮೇಂದ್ರ ಚಲನಚಿತ್ರರಂಗದಲ್ಲಿ ಸುರದ್ರೂಪ, ಪ್ರತಿಭೆ, ಯಶಸ್ಸು ಎಲ್ಲವೂ ಒಂದೆಡೆ ಸಂಭವಿಸಿದ ನಟ. ಜೊತೆಗೆ ಮದುವೆಯಾಗಿ ಹಲವು ಮಕ್ಕಳಿದ್ದರೂ ಕನಸಿನ ಕನ್ಯೆ ಹೇಮಾಮಾಲಿನಿಯೂ ಈತನಿಗೇ ಹೂಮಾಲೆ ಹಾಕಿದರು. ನೂರಕ್ಕೂ ಹೆಚ್ಚು ಯಶಸ್ವೀ ಚಿತ್ರಗಳಲ್ಲಿ ನಟಿಸಿದ ವಿರಳ ಯಶಸ್ವೀ ನಟರೀತ. ಧರ್ಮೇಂದ್ರ ಪಂಜಾಬಿನ ಲುಧಿಯಾನ ಜಿಲ್ಲೆಯ ನಸ್ರಾಲಿ ಎಂಬ ಹಳ್ಳಿಯಲ್ಲಿ 1935ರ ಡಿಸೆಂಬರ್ 8ರಂದು ಜನಿಸಿದರು. ತಂದೆ ಕೇವಲ್ ಕಿಶನ್ ಸಿಂಗ್ ಡಿಯೋಲ್ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಸತ್ವಂತ್ ಕೌರ್. ಲುಧಿಯಾನದ […]

Advertisement

Wordpress Social Share Plugin powered by Ultimatelysocial