ಹಬ್ಬಕ್ಕೆ ಹಳದಿ ಲೋಹ ತುಟ್ಟಿ, ಬೆಳ್ಳಿ ಬೆಲೆಯೂ ಏರಿಕೆ

 

ಚಿನ್ನ ಮಹಿಳೆಯರಿಗೆ ಅಚ್ಚುಮೆಚ್ಚು. ಅಲ್ಲದೆ ಎಲ್ಲಾ ರೀತಿಯ ಹೂಡಿಕೆದಾರರಿಗೆ ಚಿನ್ನವು ಹೆಚ್ಚು ಆದ್ಯತೆಯ ಆಸ್ತಿಯಾಗಿದೆ. ವಿಶ್ವದ‌ಲ್ಲೇ ಅತಿ ಹೆಚ್ಚು ಚಿನ್ನ ಬಳಸುವ ದೇಶ ಭಾರತ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿವೆ. ಹೂಡಿಕೆಗೆ ಚಿನ್ನ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಹೀಗಾಗಿ ಚಿನ್ನದ ದರವು ಮಾರುಕಟ್ಟೆಯಲ್ಲಿ ಏರಿಳಿತವನ್ನು ಕಾಣುತ್ತಿರುತ್ತದೆ.ಕ್ರಿಸ್‌ಮಸ್‌ ಹಬ್ಬದ ನಡುವೆ ಹಳದಿ ಲೋಹ ದುಬಾರಿಯಾಗಿದೆ. ಹಬ್ಬದ ಸಂಭ್ರಮದ ನಡುವೆ ಚಿನ್ನ ಖರೀದಿಗೆ ಯೋಜಿಸಿದವರಿಗೆ, ಬಂಗಾರ ತುಟ್ಟಿಯಾಗಿದೆ. ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ಕಳೆದ ಶನಿವಾರ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದರೆ ಇಂದು ಏಕಾಏಕಿ 150 ರೂಪಾಯಿ ಏರಿಕೆಯಾಗಿದೆ.ಆಂತರಿಕ ಮಾರುಕಟ್ಟೆಯಲ್ಲಿ ಶನಿವಾರ 22 ಕ್ಯಾರಟ್‌​​ನ 10 ಗ್ರಾಂ ಚಿನ್ನದ ದರ 60 ರೂಪಾಯಿ ಕುಸಿದಿತ್ತು. 24 ಕ್ಯಾರೆಟ್‌​​ನ 10 ಗ್ರಾಂ ಚಿನ್ನದ ದರ 600 ರೂಪಾಯಿ ಇಳಿಕೆಯಾಗಿತ್ತು. ಆದರೆ, ಹಬ್ಬದ ದಿನಕ್ಕೆ ಹಳದಿ ಲೋಹ ತುಸು ದುಬಾರಿಯಾಗಿದೆ. ಇಂದು 22 ಕ್ಯಾರಟ್‌​ನ 10 ಗ್ರಾಂ ಚಿನ್ನದ 49,850 ರೂಪಾಯಿ ಆಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 160 ರೂಪಾಯಿ ಏರಿಕೆಯಾಗಿ 54,380 ರೂ. ಆಗಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ 49,750 ರೂ. ಆಗಿತ್ತು. ಇಂದು ಇಂದು 22 ಕ್ಯಾರಟ್‌ನ​ 10 ಗ್ರಾಂ ಚಿನ್ನದ ದರ 150 ರೂ. ಹೆಚ್ಚಳವಾಗಿದೆ. ಏರಿಕೆಯ ಬಳಿಕ 49,900ಕ್ಕೆ ಬಂದು ನಿಂತಿದೆ. ಮತ್ತೊಂದೆಡೆ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 54,270 ರೂ. ಆಗಿತ್ತು. ಇಂದಿನ ಬೆಲೆ 54,410.ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಹೆಚ್ಚಾಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂ. ಹೆಚ್ಚಳವಾಗಿದೆ.ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ. ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆಯನ್ನು ಇಲ್ಲಿ ಕೊಡಲಾಗಿದೆ.

ನವದೆಹಲಿ: 50,000 ರೂ.(22 ಕ್ಯಾರಟ್‌) ಮತ್ತು 54,530 ರೂ. (24 ಕ್ಯಾರಟ್‌)

ಮುಂಬೈ: 49,850 ರೂ.(22 ಕ್ಯಾರಟ್‌) ಮತ್ತು 54,380 ರೂ. (24 ಕ್ಯಾರಟ್‌)

ಕೋಲ್ಕತ್ತಾ: 49,850 ರೂ.(22 ಕ್ಯಾರಟ್‌) ಮತ್ತು 54,380 ರೂ. (24 ಕ್ಯಾರಟ್‌)

ಚೆನ್ನೈ: 50,790 ರೂ.(22 ಕ್ಯಾರಟ್‌) ಮತ್ತು 55,400 ರೂ. (24 ಕ್ಯಾರಟ್‌)

ಹೈದರಾಬಾದ್:‌ 49,850 ರೂ. (22 ಕ್ಯಾರಟ್‌) ಮತ್ತು 54,380 ರೂ. (24 ಕ್ಯಾರಟ್‌)

ಮಂಗಳೂರು- 54,410 ರೂ.(22 ಕ್ಯಾರಟ್‌) ಮತ್ತು 54,410 ರೂ. (24 ಕ್ಯಾರಟ್‌)

ಮೈಸೂರು- 54,410 ರೂ.(22 ಕ್ಯಾರಟ್‌) ಮತ್ತು 54,410 ರೂ. (24 ಕ್ಯಾರಟ್‌)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆ ಕೂಡಾ ಏಕಾಏಕಿ ಏರಿಕೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಒಂದು ಬಾರಿ ಚಾರ್ಜ್‌ ಮಾಡಿದರೆ ಸಾವಿರ ಕಿ.ಮೀ. ಓಡಬಲ್ಲ ಎಲೆಕ್ಟ್ರಿಕ್‌ ಕಾರು ಬಿಡುಗಡೆ

Wed Dec 28 , 2022
  ಖ್ಯಾತ ಜಾಗತಿಕ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಝ್‌, ತನ್ನ ಹೊಸ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್‌ ಕಾರು ಹಲವು ನೂತನ ತಂತ್ರಜ್ಞಾನ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿಲಿದ್ದು, ಭಾರತದಲ್ಲಿ ಕಾರುಪ್ರಿಯರ ಗಮನ ಸೆಳೆದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಖ್ಯಾತ ಜಾಗತಿಕ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಝ್‌, ತನ್ನ ಹೊಸ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ […]

Advertisement

Wordpress Social Share Plugin powered by Ultimatelysocial