ಒಂದು ಬಾರಿ ಚಾರ್ಜ್‌ ಮಾಡಿದರೆ ಸಾವಿರ ಕಿ.ಮೀ. ಓಡಬಲ್ಲ ಎಲೆಕ್ಟ್ರಿಕ್‌ ಕಾರು ಬಿಡುಗಡೆ

 

ಖ್ಯಾತ ಜಾಗತಿಕ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಝ್‌, ತನ್ನ ಹೊಸ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್‌ ಕಾರು ಹಲವು ನೂತನ ತಂತ್ರಜ್ಞಾನ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿಲಿದ್ದು, ಭಾರತದಲ್ಲಿ ಕಾರುಪ್ರಿಯರ ಗಮನ ಸೆಳೆದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಖ್ಯಾತ ಜಾಗತಿಕ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಝ್‌, ತನ್ನ ಹೊಸ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್‌ ಕಾರು ಹಲವು ನೂತನ ತಂತ್ರಜ್ಞಾನ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿಲಿದ್ದು, ಭಾರತದಲ್ಲಿ ಕಾರುಪ್ರಿಯರ ಗಮನ ಸೆಳೆದಿದೆ.ಭಾರತದಲ್ಲಿ ಮೂರನೇ ಆವೃತ್ತಿಯ ರಸ್ತೆ ಸುರಕ್ಷತೆ ಅಭಿಯಾನಕ್ಕೆ ಚಾಲನೆ ನೀಡಿರುವ ಮರ್ಸಿಡಿಸ್ ಬೆಂಝ್‌ ಇಂಡಿಯಾ, ವಿಷನ್ ಇಕ್ಯೂಎಕ್ಸ್ಎಕ್ಸ್‌ ಎಲೆಕ್ಟ್ರಿಕ್‌ ಕಾರಿನ ಮೂಲಕ ಹೊಸ ಇತಿಹಾಸ ಬರೆಯುವ ಹುಮ್ಮಸ್ಸಿನಲ್ಲಿದೆ.ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮರ್ಸಿಡಿಸ್ ಬೆಂಝ್, ಭಾರತದಲ್ಲೂ ತನ್ನ ಎಲೆಕ್ಟ್ರಿಕ್‌ ಕಾರುಗಳ ಜಾದೂ ಆರಂಭಿಸಲು ಕಾತರವಾಗಿದೆ. 2030ರ ವೇಳೆ ತನ್ನ ಒಟ್ಟು ಉತ್ಪಾದನೆಯಲ್ಲಿ ಶೇ. 50 ರಷ್ಟು ಎಲೆಕ್ಟ್ರಿಕ್‌ ಕಾರು ತಯಾರಿಸುವ ಗುರಿ ಹೊಂದಿರುವ ಮರ್ಸಿಡಿಸ್‌ ಬೆಂಝ್‌, ಈ ಬೃಹತ್ ಯೋಜನೆಗೆ ಪೂರಕವಾಗಿ ಕಂಪನಿಯು ಹಂತ-ಹಂತವಾಗಿ ಇವಿ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದೆ.ಸದ್ಯ ಅನಾವರಣಗೊಂಡಿರುವ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು‌, ಫಾರ್ಮಲಾ 1 ಮಾದರಿಯ ಏರೋಡೈನಾಮಿಕ್ ವಿನ್ಯಾಸದೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ. ಹೊಸ ಕಾರಿನಲ್ಲಿ ಬೃಹತ್ ಗಾತ್ರದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಮೈಲೇಜ್ ವಿಚಾರಕ್ಕೆ ಬರುವುದಾದರೆ ಒಂದು ಬಾರಿ ಚಾರ್ಜ್‌ ಮಾಡಿದರೆ 1 ಸಾವಿರ ಕಿ.ಮೀ. ಓಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿದೆ.ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಇವಿ ಕಾರು ಮಾದರಿಯಲ್ಲಿ‌, ಬೃಹತ್ ಗಾತ್ರ 100kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ. ಜೊತೆಗೆ ಹೊಸ ಕಾರು ಸೂಪರ್ ಏರೋಡೈನಾಮಿಕ್ ವಿನ್ಯಾಸದೊಂದಿಗೆ ಗಮನಸೆಳೆಯಲಿದ್ದು, ಬ್ಯಾಟರಿಯಿಂದ ಹೊರಹೊಮ್ಮುವ ಶೇ.95 ರಷ್ಟು ಶಕ್ತಿಯನ್ನು ಚಕ್ರಗಳಿಗೆ ವರ್ಗಾಯಿಸಲ್ಪಡುವಂತೆ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕರ್ತಾರ್‌ಪುರ ಕಾರಿಡಾರ್‌ ಮೂಲಕ ಪಾಕ್‌ಗೆ ಹೊರಟಿದ್ದ ʻಐಎಸ್‌ಐ ಗೂಢಚರʼ

Wed Dec 28 , 2022
  ಪಾಕಿಸ್ತಾನದ ಇಂಟರ್‌ ಸರ್ವೀಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಶಂಕೆಯ ಮೇರೆಗೆ ತಾಪಿಂದರ್‌ ಸಿಂಗ್‌ನನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಗುರುವಾರ ಬಂಧಿಸಿದ್ದಾರೆ.ಪಾಕಿಸ್ತಾನಕ್ಕೆ ಹೊರಟ ʻಐಎಸ್‌ಐ ಗೂಢಚರʼನೊಬ್ಬನನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತಾಪಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ.ಪಾಕಿಸ್ತಾನದ ಇಂಟರ್‌ ಸರ್ವೀಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಶಂಕೆಯ ಮೇರೆಗೆ ತಾಪಿಂದರ್‌ ಸಿಂಗ್‌ನನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಗುರುವಾರ ಬಂಧಿಸಿದ್ದಾರೆ. ಆತ ಚಂಡೀಗಢದ ಸೆಕ್ಟರ್‌ […]

Advertisement

Wordpress Social Share Plugin powered by Ultimatelysocial