ಕರ್ತಾರ್‌ಪುರ ಕಾರಿಡಾರ್‌ ಮೂಲಕ ಪಾಕ್‌ಗೆ ಹೊರಟಿದ್ದ ʻಐಎಸ್‌ಐ ಗೂಢಚರʼ

 

ಪಾಕಿಸ್ತಾನದ ಇಂಟರ್‌ ಸರ್ವೀಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಶಂಕೆಯ ಮೇರೆಗೆ ತಾಪಿಂದರ್‌ ಸಿಂಗ್‌ನನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಗುರುವಾರ ಬಂಧಿಸಿದ್ದಾರೆ.ಪಾಕಿಸ್ತಾನಕ್ಕೆ ಹೊರಟ ʻಐಎಸ್‌ಐ ಗೂಢಚರʼನೊಬ್ಬನನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತಾಪಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ.ಪಾಕಿಸ್ತಾನದ ಇಂಟರ್‌ ಸರ್ವೀಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಶಂಕೆಯ ಮೇರೆಗೆ ತಾಪಿಂದರ್‌ ಸಿಂಗ್‌ನನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಗುರುವಾರ ಬಂಧಿಸಿದ್ದಾರೆ. ಆತ ಚಂಡೀಗಢದ ಸೆಕ್ಟರ್‌ 40ರಲ್ಲಿ ನಿವಾಸದಲ್ಲಿದ್ದಾಗ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.ಪಂಜಾಬ್‌ ಪೊಲೀಸರು ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, “ಪಾಕಿಸ್ತಾನದಲ್ಲಿರುವ ಆತನ ಪ್ರಾಯೋಜಕ ನಿರ್ದೇಶಕರ ನಿರ್ದೇಶನಾನುಸಾರ ಆತ ಪಾಕಿಸ್ತಾನಕ್ಕೆ ಹೊರಟಿದ್ದ. ವಾಟ್ಸ್‌ಆಪ್‌ ಚಾಟ್‌ನಲ್ಲಿ ಇತ್ತೀಚೆಗೆ ಆತನಿಗೆ ಈ ಕುರಿತು ಆದೇಶ ಸಿಕ್ಕಿತ್ತು. ಕರ್ತಾರ್‌ಪುರ ಕಾರಿಡಾರ್‌ಗೆ ತಾಪಿಂದರ್‌ ನಿಯೋಜನೆ ಆಗಿದ್ದು, ಅಲ್ಲಿ ಭೇಟಿಗೆ ವ್ಯವಸ್ಥೆ ಆಗಿದೆ ಎಂಬುದು ಸಂದೇಶದ ಸಾರವಾಗಿತ್ತು ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕುರಿತ ತನಿಖೆ ಪ್ರಗತಿಯಲ್ಲಿದೆ.ಏತನ್ಮಧ್ಯೆ, ದೆಹಲಿ ಮೂಲದ ವ್ಯಕ್ತಿ ಮತ್ತು ಚಂಡೀಗಢ ನಿವಾಸಿ ಸೇರಿ ತಾಪಿಂದರ್‌ನ ಇಬ್ಬರು ಸಹಚರರನ್ನು ಪೊಲೀಸರು ಗುರುತಿಸಿದ್ದಾರೆ. “ನಾವು ಆತನ ಸಹಚರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದೇವೆ. ನಮ್ಮ ತಂಡ ಶೀಘ್ರದಲ್ಲೇ ಅವರನ್ನು ಬಂಧಿಸಲಿದೆ. ತಾಪಿಂದರ್‌ನನ್ನು ಸೋಮವಾರ ಮೊಹಾಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನ ಸ್ಥಳೀಯ ಮತ್ತು ವಿದೇಶಿ ಸಂಪರ್ಕವನ್ನು ಸ್ಥಾಪಿಸಲು ಡಿಸೆಂಬರ್ 21 ರವರೆಗೆ ಅವರ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಲಾಗಿದೆ”ಎಂದು ಪೊಲೀಸ್‌ ಅಧಿಕಾರಿ ಹೇಳಿದ್ಧಾರೆ.ಸೂಕ್ಷ್ಮ ದಾಖಲೆಗಳು, ಸ್ಥಳಗಳು ಮತ್ತು ಭಾರತದ ಪೊಲೀಸ್ ಠಾಣೆಗಳು ಮತ್ತು ಸೇನಾ ನೆಲೆಗಳ ಬಗ್ಗೆ ಇತರ ಮಾಹಿತಿಯನ್ನು ಐಎಸ್‌ಐಗೆ ಒದಗಿಸಿದ ಆರೋಪದ ಮೇಲೆ ಗುರುವಾರ ತಾಪಿಂದರ್‌ನನ್ನು ಬಂಧಿಸಲಾಯಿತು. ತಾಪಿಂದರ್‌ ಸಿಂಗ್‌ ಕೃತ್ಯವು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಎಸ್ ಸಿ/ ಎಸ್ ಟಿ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ!

Wed Dec 28 , 2022
ಐವತ್ತು ಲಕ್ಷ ರೂಪಾಯಿಗಳಿಗೆ ಮೀರಿ ಕೋಟ್ಯಂತರ ರೂಪಾಯಿಯ ಪ್ಯಾಕೇಜ್ ಟೆಂಡರ್ ಗಳನ್ನು ರದ್ದುಪಡಿಸಿ 50 ಲಕ್ಷ ರೂಗಳಿಗೆ ನಿಗದಿ ಮಾಡಿ ಮರು ಟೆಂಡರ್ ಕರೆಯುವಂತೆ ಒತ್ತಾಯಿಸಿ ರಾಜ್ಯ ಎಸ್ ಸಿ ಎಸ್‌ಟಿ ಗುತ್ತಿಗೆದಾರರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಇವರ ಬೆಂಬಲಕ್ಕೆ ನಂಜನಗೂಡಿನ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial