ಎಸ್ ಸಿ/ ಎಸ್ ಟಿ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ!

ಐವತ್ತು ಲಕ್ಷ ರೂಪಾಯಿಗಳಿಗೆ ಮೀರಿ ಕೋಟ್ಯಂತರ ರೂಪಾಯಿಯ ಪ್ಯಾಕೇಜ್ ಟೆಂಡರ್ ಗಳನ್ನು ರದ್ದುಪಡಿಸಿ 50 ಲಕ್ಷ ರೂಗಳಿಗೆ ನಿಗದಿ ಮಾಡಿ ಮರು ಟೆಂಡರ್ ಕರೆಯುವಂತೆ ಒತ್ತಾಯಿಸಿ ರಾಜ್ಯ ಎಸ್ ಸಿ ಎಸ್‌ಟಿ ಗುತ್ತಿಗೆದಾರರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಇವರ ಬೆಂಬಲಕ್ಕೆ ನಂಜನಗೂಡಿನ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಬಳಿಕ ಸಂಘದ ಅಧ್ಯಕ್ಷ ಸಿದ್ಧಲಿಂಗು ಹಾಗೂ ಪ್ರಧಾನ ಕಾರ್ಯದರ್ಶಿ ಶಿವಣ್ಣ ಮಾತನಾಡಿ
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಎಸ್ ಸಿ ಎಸ್ ಟಿ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ 50 ಲಕ್ಷ ರೂಪಾಯಿಗಳಿಗೆ ನಿಗದಿ ಮಾಡಿ ಮೀಸಲು ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿಕೊಟ್ಟಿದ್ದರು.
ಆದರೆ ಈಗಿನ ಸರ್ಕಾರ 50 ಲಕ್ಷ ರೂಪಾಯಿಗಳಿಗೆ ಮೀರಿ ಕೋಟ್ಯಂತರ ರೂಪಾಯಿ ಪ್ಯಾಕೇಜ್ ಟೆಂಡರ್ ಗಳನ್ನು ಕರೆದು ಎಸ್ಸಿ ಎಸ್ಟಿ ಗುತ್ತಿಗೆದಾರರನ್ನು ಟೆಂಡರ್ ಪ್ರಕ್ರಿಯೆಯಿಂದ ದೂರ ಉಳಿಯುವಂತೆ ತೊಂದರೆ ನೀಡುತ್ತಿದೆ.
50 ಲಕ್ಷಕ್ಕೂ ಹೆಚ್ಚಿನ ಟೆಂಡರ್ ಗಳನ್ನು ರದ್ದುಪಡಿಸಿ 50 ಲಕ್ಷ ರೂಗಳಿಗೆ ನಿಗದಿ ಮಾಡಿ ಮರು ಟೆಂಡರ್ ಕರೆಯುವಂತೆ ಒತ್ತಾಯಿಸಿದರು.
ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅಲ್ಲದೆ ಎಸ್ ಸಿ ಎಸ್ ಟಿ ಗುತ್ತಿಗೆದಾರರಿಗೆ ನಿಗದಿಪಡಿಸಿರುವ 50 ಲಕ್ಷ ರೂಪಾಯಿ ಟೆಂಡರನ್ನು ಒಂದು ಕೋಟಿ ರೂಪಾಯಿಗೆ ಏರಿಸಬೇಕು ಎಂದು ಆಗ್ರಹಿಸಿ ಅಲ್ಲಿನ ಕಾರ್ಯ ಪಾಲಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿ ಕಾರ್ಯಪಾಲಕ ಅಭಿಯಂತರರಾದ ರಾಜು ಮಾತನಾಡಿ ತಮ್ಮ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಮಹದೇವಪ್ಪ ಖಜಾಂಚಿ ಹೊಸಕೋಟೆ ಬಸವರಾಜು ಗುತ್ತಿಗೆದಾರ ಬಿಎಸ್ಪಿ ಶ್ರೀಕಂಠ, ರಾಜೇಶ್, ಶಂಕರ್ನಾಯಕ್, ಕಾಳಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಿಎಂ ಶಂಕರ್ ಶ್ರೀಕಂಠ ನಾಯಕ ನಗರಸಭೆ ಸದಸ್ಯ ಶ್ರೀಕಂಠ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಇತಿಹಾಸ ಪ್ರಸಿದ್ದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಸಂಭ್ರಮದ ಭ್ರಹ್ಮರಥೋತ್ಸವ.

Wed Dec 28 , 2022
ಇತಿಹಾಸ ಪ್ರಸಿದ್ದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಸಂಭ್ರಮದ ಭ್ರಹ್ಮರಥೋತ್ಸವ, ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಘಾಟಿ ಸುಬ್ರಮಣ್ಯ ರಥೋತ್ಸವ, ಪುಷ್ಪ ಶುದ್ದ ಷಷ್ಟಿ ಹಿನ್ನಲೆ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ, ಘಾಟಿ ಸುಭ್ರಹ್ಮಣ್ಯ ರಥವನ್ನ ಎಳೆದ ಭಕ್ತಾದಿಗಳು, ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗಿ, ಕೊವಿಡ್ ರೂಲ್ಸ್ ಮರೆತು ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿ, ಬೆಳಗ್ಗೆಯಿಂದ ಸಾವಿರಾರು ಭಕ್ತರು ಆಗಮನದ ಹಿನ್ನಲೆ ಘಾಟಿಯಲ್ಲಿ ಬಿಗಿಬಪೊಲೀಸ್ ಬಂದೋಬಸ್ತ್ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ […]

Advertisement

Wordpress Social Share Plugin powered by Ultimatelysocial