ಫೆಬ್ರವತಿ ತಿಂಗಳಲ್ಲಿ 1,49,557 ಕೋಟಿ ದಾಖಲೆ ಜಿಎಸ್ ಟಿ ಸಂಗ್ರಹ.

 

ಪೆಬ್ರವರಿ ತಿಂಗಳಲ್ಲಿ ಸರುಕು ಸೇವಾ ತೆರಿಗೆ – ಜಿಎಸ್ ಟಿ 1 ಲಕ್ಷ 49 ಸಾವಿರದ 557 ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.ಕಳೆದ ವರ್ಷ ಇದೇ ತಿಂಗಳಿಗೆ ಹೊಲಿಸಿದರೆ ಶೇ. 12ರಷ್ಟು ಜಿಎಸ್ ಟಿ ಸಂಗ್ರಹಣೆ ಹೆಚ್ಚಾಗಿದೆ. ಸತತ 12 ತಿಂಗಳಿನಿಂದ ಪ್ರತಿ ತಿಂಗಳ ಜಿಎಸ್ ಟಿ ಸಂಗ್ರಹದ ಮೊತ್ತ 1 ಲಕ್ಷ 40 ಸಾವಿರಕ್ಕೂ ಅಧಿಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಪೆಬ್ರವರಿ ತಿಂಗಳಲ್ಲಿ ಸಂಗ್ರಹವಾಗಿರುವ 1 ಲಕ್ಷ 49 ಸಾವಿರದ 577 ಕೋಟಿ ರೂಪಾಯಿ ಜಿಎಸ್ ಟಿ ತೆರಿಗೆಯಲ್ಲಿ ಸಿಜಿಎಸ್ ಟಿ- 27 ಸಾವಿರದ 662 ಕೋಟಿ ರೂಪಾಯಿ. ಎಸ್ ಜಿಎಸ್ ಟಿ – 34 ಸಾವಿರದ 915 ಕೋಟಿ ರೂಪಾಯಿ, ಐಜಿಎಸ್ ಟಿ -75 ಸಾವಿರದ 69 ಕೋಟಿ ರೂ. ಹಾಗೂ ಸೆಸ್ ನಿಂದ 11 ಸಾವಿರದ 931 ಕೋಟಿ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ.ಈ ಪೈಕಿ ಕರ್ನಾಟಕದಲ್ಲಿ 10 ಸಾವಿರದ 809 ಕೋಟಿ ರೂ. ತೆರಿಗೆ ಸಂಹ್ರಹಿಸಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 9 ಸಾವಿರದ 176 ಕೋಟಿರೂ. ತೆರಿಗೆ ಸಂಗ್ರಹಿಸಿದ್ದು, ಈಗ ಶೇ. 18 ರಷ್ಟು ಹೆಚ್ಚಳ ಕಂಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.ಉಳಿದಂತೆ ಮಹಾರಾಷ್ಟ್ರದಲ್ಲಿ 22,349 ಕೋಟಿ ರೂ. ತಮಿಳುನಾಡಿದಲ್ಲಿ 8,774 ಕೋಟಿ ರೂ. ಹರಿಯಾಣದಲ್ಲಿ 7310 ಕೋಟಿ.ರೂ. ಉತ್ತರ ಪ್ರದೇಶದಲ್ಲಿ 7431 ಕೋಟಿ ರೂ. ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಾಖಲೆಯ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

29 ಲಕ್ಷ ವಾಟ್ಸ್ ಅಪ್ ಬಳಕೆದಾರರಿಗೆ ವಾಟ್ಸ್ ಅಪ್ ಸಂಸ್ಥೆ ಬರೆ.

Thu Mar 2 , 2023
  ನಿಯಮ ಉಲ್ಲಂಘಿಸಿದ ಆರೋಪದ‌ ಹಿನ್ನೆಲೆಯಲ್ಲಿ ಈ ವರ್ಷದ ಜನವರಿ ಅಂತ್ಯಕ್ಕೆ 29 ಲಕ್ಷ ವಾಟ್ಸ್ ಅಪ್ ಖಾತೆಗಳನ್ನು ವಾಟ್ಸ್ ಅಪ್ ಸಂಸ್ಥೆ ನಿಷೇಧಿಸಿದೆ. ಐಟಿ ನಿಯಮಗಳು 2021 ರ ಅನುಸಾರವಾಗಿ, ನಾವು ಜನವರಿ 2023 ಕ್ಕೆ ನಮ್ಮ ವರದಿ ಪ್ರಕಟಿಸಿದ್ದೇವೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ವರದಿಯಡಿ ಬಳಕೆದಾರರ ದೂರುಗಳು ಮತ್ತು ವಾಟ್ಸ್ ಅಪ್ ತೆಗೆದುಕೊಂಡ ಕ್ರಮಗಳು ಮತ್ತು ವಾಟ್ಸ್ ಅಪ್ ಸ್ವಂತ ತಡೆಗಟ್ಟುವ ಕ್ರಮಗಳ ವಿವರಗಳನ್ನು […]

Advertisement

Wordpress Social Share Plugin powered by Ultimatelysocial