29 ಲಕ್ಷ ವಾಟ್ಸ್ ಅಪ್ ಬಳಕೆದಾರರಿಗೆ ವಾಟ್ಸ್ ಅಪ್ ಸಂಸ್ಥೆ ಬರೆ.

 

ನಿಯಮ ಉಲ್ಲಂಘಿಸಿದ ಆರೋಪದ‌ ಹಿನ್ನೆಲೆಯಲ್ಲಿ ಈ ವರ್ಷದ ಜನವರಿ ಅಂತ್ಯಕ್ಕೆ 29 ಲಕ್ಷ ವಾಟ್ಸ್ ಅಪ್ ಖಾತೆಗಳನ್ನು ವಾಟ್ಸ್ ಅಪ್ ಸಂಸ್ಥೆ ನಿಷೇಧಿಸಿದೆ. ಐಟಿ ನಿಯಮಗಳು 2021 ರ ಅನುಸಾರವಾಗಿ, ನಾವು ಜನವರಿ 2023 ಕ್ಕೆ ನಮ್ಮ ವರದಿ ಪ್ರಕಟಿಸಿದ್ದೇವೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ವರದಿಯಡಿ ಬಳಕೆದಾರರ ದೂರುಗಳು ಮತ್ತು ವಾಟ್ಸ್ ಅಪ್ ತೆಗೆದುಕೊಂಡ ಕ್ರಮಗಳು ಮತ್ತು ವಾಟ್ಸ್ ಅಪ್ ಸ್ವಂತ ತಡೆಗಟ್ಟುವ ಕ್ರಮಗಳ ವಿವರಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಜನವರಿಯಲ್ಲಿ ತಿಂಗಳಲ್ಲಿ ವಾಟ್ಸ್ ಅಪ್ ಸಂಸ್ಥೆ 2.9 ದಶಲಕ್ಷ ಖಾತೆಗಳನ್ನು ನಿಷೇಧಿಸಿದೆ. ಮುಂದೆಯೂ ನಿಯಮ ಉಲ್ಲಂಘಿಸುವ ಬಳಕೆದಾರರ ವಿರುದ್ದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾಟ್ಸ್ ಅಪ್ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.ವಾಟ್ಸ್ ಅಪ್ ಸಂಸ್ಥೆ, ಕೇಂದ್ರ ಸರ್ಕಾರ ಜಾರಿ ಮಾಡಿದ್ದ 2021ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮೀನಾಮೇಷ ಎಣಿಸಿತ್ತು. ಇದರಿಂದಾಗಿ ವಾಟ್ಸ್ ಅಪ್ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆದಿತ್ತುಕೇಂದ್ರ ಸರ್ಕಾರದ ನಿಯಮ ಜಾರಿ ಮಾಡದಿದ್ದರೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೊನೆಗೂ ವಾಟ್ಸ್ ಅಪ್ ಸಂಸ್ಥೆ ಕೇಂದ್ರ ಸರ್ಕಾರದ ನಿಯಮವನ್ನು ಪಾಲಿಸಲು ಒಪ್ಪಿಕೊಂಡಿತ್ತುಅದರ ಅನ್ವಯ ನಿಮಯ ಉಲ್ಲಂಘಿಸಿದ 29 ಲಕ್ಷ ಬಳಕೆದಾರರನ್ನು ವಾಟ್ಸ್ ಅಪ್ ಸಂಸ್ಥೆ ನಿಷೇದಿಸಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜಿ.೨೦ ಶೃಂಗಸಭೆ ಸಭೆಯಲ್ಲಿ ಕ್ವಿನ್ ಭಾಗಿ.

Thu Mar 2 , 2023
  ಶೃಂಗ ಸಭೆ ಹಿನ್ನೆಲೆಯಲ್ಲಿ ಪಾಲ್ಗೊಳ್ಳಲು ಚೀನಾ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರು ನಾಳೆ ಜಿ -೨೦ ಸಭೆಯಲ್ಲಿ ಭಾಗವಹಿಸುವುದಾಗಿ ಖಚಿತ ಪಡಿಸಿದ್ದಾರೆ.ಇಂಡೋ-ಪೆಸಿಫಿಕ್ ವಲಯದ ಭಾರತದ ಪ್ರಮುಖ ಪಾಲುದಾರರಲ್ಲಿ ಒಂದಾದ ಜಪಾನ್ ಅನ್ನು ಕಿರಿಯ ಸಚಿವರು ಪ್ರತಿನಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಾಂಪ್ರದಾಯಿಕ ಸ್ವಾಗತ ಈ ಮಧ್ಯೆ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ತಡರಾತ್ರಿ ದೆಹಲಿದೆ ಬಂದಿಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಚಿವರಿಗೆ ಆತ್ಮೀಯ ಸ್ವಾಗತ […]

Advertisement

Wordpress Social Share Plugin powered by Ultimatelysocial