ಕಿಯಾರಾ ಅಡ್ವಾನಿ ಮದುವೆ ಬಗ್ಗೆ ಶಾಕಿಂಗ್ ಕಮೆಂಟ್: ಸಿದ್ಧಾರ್ಥ್ ಗತಿ ಏನು?

ನಟಿ ಕಿಯಾರ ಅಡ್ವಾಣಿ ತಮ್ಮ ಅಭಿನಯದ ಭೂಲ್ ಭುಲಯ್ಯ 2 ಸಿನಿಮಾ ರಿಲೀಸ್ ಆಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ನಟಿ ಕಿಯಾರಾ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಮದುವೆ ವಿಚಾರಕ್ಕೆ ಕಿಯಾರ ಸದ್ದು ಆಗಿದ್ದಾರೆ.

ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ನಡುವೆ ಲವ್ವಿ, ಡವ್ವಿ ಇದೆ ಎನ್ನುವ ವಿಚಾರ ಹಲವು ದಿನಗಳಿಂದ ಬಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ.

ಆದರೆ ಮಧ್ಯದಲ್ಲಿ ಕಿರಿಕ್ ಆಗಿತ್ತಂತೆ. ಈಗ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ.

ಇನ್ನು ನಟಿ ಕಿಯಾರಾ ತನ್ನ ಮದುವೆ ಮತ್ತು ಜೀವನದಲ್ಲಿ ಸೆಟಲ್ ಆಗುವ ಬಗ್ಗೆ ಮಾತನಾಡಿದ್ದಾರೆ. ಮದುವೆ ಅಗುವ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

ಮದುವೆ ಆಗದೇ ಸೆಟಲ್ ಆಗಬಹುದು ಎಂದ ಕಿಯಾರಾ!
ಮದುವೆ ಯಾವಾಗ ಎನ್ನುವ ಪ್ರಶ್ನೆ ನಟಿ ಕಿಯಾರಾಗೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರ ಕೊಟ್ಟ ನಟಿ ಕಿಯಾರಾ “ಮದುವೆ ಆಗದೇಯೂ ಕೂಡ ನಾನು ಜೀವನದಲ್ಲಿ ಸೆಟಲ್ ಆಗ ಬಹುದು ಅಲ್ಲವಾ? ನಾನು ತುಂಬಾ ಚೆನ್ನಾಗೇ ಸೆಟಲ್ ಆಗಿದ್ದೇನೆ. ನಾನು ದುಡಿಯುತ್ತಾ ಇದ್ದೇನೆ, ಖುಷಿಯಾಗಿ ಇದ್ದೇನೆ.” ಎಂದಿದ್ದಾರೆ.

ಮದುವೆ ಆಗುವುದಿಲ್ಲವಾ ಕಿಯಾರಾ!

ಇನ್ನು ನಟಿ ಕಿಯಾರಾ ಅಡ್ವಾಣಿ ಮದುವೆ ಆಗದೇ ನಾನು ಆರಾಮಾಗಿ, ಸೆಟಲ್ ಆಗಿದ್ದೇನೆ ಎಂದು ಹೇಳಿಕೆ ಕೊಟ್ಟ ನಂತರ, ಬಾಲಿವುಡ್‌ನಲ್ಲಿ ಹೊಸ ಚರ್ಚೆ ಶುರುವಾಗಿದೆ. ಕಿಯಾರಾ ಮದುವೆಯೇ ಅಗುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿರುವುದರಿಂದ, ಸಿದ್ಧರ್ಥ್ ಜೊತೆಗೆ ಮತ್ತೇ ಕಾಣಿಸಿಕೊಂಡಿದ್ದೇಕೆ. ಈ ಜೋಡಿ ಮದುವೆ ಆಗುವುದು ಅನುಮಾನ ಎನ್ನುವ ಚರ್ಚೆ ಕೂಡ ಶುರುವಾಗಿದೆ.

ಕಿಯಾರಾ ಬ್ರೇಕಪ್ ಸುದ್ದಿಗೆ ಬ್ರೇಕ್!

ಕಳೆದ ಕೆಲವು ದಿನಗಳಿಂದ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಪ್ರೀತಿ ಬ್ರೇಕಪ್ ಆಗಿದೆ ಎನ್ನುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಈಗ ಅದು ಸರಿಯಾಗಿದೆ ಎಂದು ಈ ಜೋಡಿ ತೋರಿಸಿಕೊಟ್ಟಿದೆ. ಭೂಲ್ ಭುಲಯ್ಯಾ 2 ಚಿತ್ರದ ಪ್ರೀಮಿಯರ್ ಶೋಗೆ ಕಿಯಾರ ಜೊತೆಗೆ ಸಿದ್ಧಾರ್ಥ್. ಹಲವು ದಿನಗಳ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು, ಬ್ರೇಕಪ್ ಸುದ್ದಿಗೆ ಬ್ರೇಕ್ ಹಾಕಿದೆ.

ಭುಲ್ ಭುಲಯ್ಯಾ ಯಶಸ್ಸಿನಲ್ಲಿ ಖುಚಿಯಲ್ಲಿ ಕಿಯಾರ!

ಇನ್ನು ನಟಿ ಕಿಯಾರಾ ಅಡ್ವಾಣಿ ಸದ್ಯ ಭೂಲ್ ಭುಲಯ್ಯ 2 ಸಿನಿಮಾದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಈ ಚಿತ್ರದ ಬಳಿಕ ‘ಜುಗ್ ಜುಗ್ ಜಿ ಯೊ’ ಸಿನಿಮಾ ರಿಲೀಸ್ ಆಗಲಿದೆ. ಸಿದ್ದಾರ್ಥ್ ಮಲ್ಹೋತ್ರ ಅಭಿನಯದ ‘ಮಿಷನ್ ಮಜ್ನು’ ಸಿನಿಮಾ ಜೂನ್‌ನಲ್ಲಿ ರಿಲೀಸ್ ಆಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ವೀಕ್ಷಿಸಲಿರುವ ಗೃಹ ಸಚಿವ ಅಮಿತ್ ಶಾ

Wed May 25 , 2022
ಮುಂಬೈ: ಬಾಲಿವುಡ್ ಈಗ ಬಿಗ್ ಬ್ರೇಕ್ ನಿರೀಕ್ಷೆಯಲ್ಲಿದೆ. ಇದರ ನಡುವೇ ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ಸಿನಿಮಾ ಬಿಡುಗಡೆಯಾಗುತ್ತಿದೆ. ಜೂನ್ 3 ರಂದು ಪೃಥ್ವಿರಾಜ್ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ವೀಕ್ಷಿಸಲಿದ್ದಾರೆ ಎಂಬ ಸುದ್ದಿಯಿದೆ. ಅಮಿತ್ ಶಾಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಪೃಥ್ವಿರಾಜ್ ಚೌಹಾಣ್ ಇತಿಹಾಸದ ಕತೆ ಇರುವ ಕಾರಣ ರಾಜಕೀಯ ಗಣ್ಯರು, ಅಧಿಕಾರಿಗಳೂ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎನ್ನಲಾಗಿದೆ. ಇದು ಬಾಲಿವುಡ್ […]

Advertisement

Wordpress Social Share Plugin powered by Ultimatelysocial