ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದ ಚಿತ್ರ ಯಾವುದು?

ಪ್ರತಿ  ವರ್ಷದ ಸಂಕ್ರಾಂತಿ ಹಾಗೆ ಈ ವರ್ಷದ ಸಂಕ್ರಾಂತಿ ಪ್ರಯುಕ್ತವೂ ಸಹ ಕಾಲಿವುಡ್‌ನಲ್ಲಿ ಸ್ಟಾರ್‌ಗಳ ಚಿತ್ರಗಳು ಬಿಡುಗಡೆಗೊಂಡಿವೆ. ತಮಿಳುನಾಡಿನಲ್ಲಿ ಸಂಕ್ರಾಂತಿ ಪ್ರಯುಕ್ತ ಸಾಲು ಸಾಲು ರಜೆಗಳಿರುವ ಕಾರಣ ಆ ದಿನಗಳಂದು ಚಿತ್ರಗಳನ್ನು ಬಿಡುಗಡೆ ಮಾಡಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ಹಿನ್ನೆಲೆಯಲ್ಲಿ ಸ್ಟಾರ್ ನಟರ ಚಿತ್ರಗಳನ್ನು ಚಿತ್ರಮಂದಿರಗಳ ಅಂಗಳಕ್ಕೆ ತರುತ್ತಾರೆ ನಿರ್ಮಾಪಕರು. ಈ ಬಾರಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿದ್ದವು. ತಮಿಳುನಾಡಿನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹಾಗೂ ಕ್ರೇಜ್ ಹೊಂದಿರುವ ಈ ಇಬ್ಬರ ಚಿತ್ರಗಳನ್ನು ವೀಕ್ಷಿಸಲು ವೀಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿಸಿದ್ದರು. ವಾರಿಸು ಚಿತ್ರಕ್ಕೆ ತೆಲುಗಿನ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನವಿದ್ದರೆ, ಅಜಿತ್ ಈ ಹಿಂದೆ ತಮ್ಮ ವಾಲಿಮೈ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಎಚ್ ವಿನೋದ್ ಜತೆ ತುನಿವುಗಾಗಿ ಕೈಜೋಡಿಸಿದ್ದಾರೆ. ಎರಡೂ ಚಿತ್ರಗಳಿಗೂ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತು ಹಾಗೂ ಎರಡೂ ಚಿತ್ರಗಳು ಜನವರಿ 11ರಂದೇ ಚಿತ್ರಮಂದಿರದ ಅಂಗಳಕ್ಕೆ ಬಂದವು. ಹೀಗಾಗಿ ಎರಡೂ ಚಿತ್ರಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಜಿತ್ ನಟನೆಯ ತುನಿವು ಚಿತ್ರಕ್ಕಿಂತ ವಿಜಯ್ ನಟನೆಯ ವಾರಿಸು ಚಿತ್ರಕ್ಕೆ ಹೆಚ್ಚು ಚಿತ್ರಮಂದಿರಗಳು ಹಾಗೂ ಪ್ರದರ್ಶನಗಳು ಲಭಿಸಿದರೂ ಸಹ ತುನಿವು ಒಳ್ಳೆಯ ಬುಕಿಂಗ್ ಪಡೆದುಕೊಳ್ಳುವ ಮೂಲಕ ತೀವ್ರ ಪೈಪೋಟಿ ನೀಡಿತ್ತು. ಎರಡು ಚಿತ್ರಗಳ ಪೈಕಿ ಮೊದಲನೇ ದಿನ ಯಾವ ಚಿತ್ರ ಹೆಚ್ಚು ಕಲೆಕ್ಷನ್ ಮಾಡಬಹುದು ಎಂಬ ಪ್ರಶ್ನೆ ಹಾಗೂ ಕುತೂಹಲ ಸಿನಿ ರಸಿಕರಲ್ಲಿ ಉಂಟಾಗಿತ್ತು. ಬಾಕ್ಸ್ ಆಫೀಸ್ ರಿಪೋರ್ಟ್ ಹೊರಬಿದ್ದಿದ್ದು, ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ವಾರಿಸು vs ತುನಿವು ಮೊದಲ ದಿನದ ಕಲೆಕ್ಷನ್‌ನಲ್ಲಿ ಗೆದ್ದಿದ್ಯಾರು? ವಾರಿಸು ಹಾಗೂ ತುನಿವು ತಂಡಗಳು ಅಧಿಕೃತವಾಗಿ ಮೊದಲ ದಿನದ ಕಲೆಕ್ಷನ್ ಅನ್ನು ಘೋಷಿಸಿಲ್ಲ. ಆದರೆ ಸಿನಿ ರಸಿಕರ ಅತಿ ನಂಬುಗೆಯ ಬಾಕ್ಸ್ ಆಫೀಸ್ ರಿಪೋರ್ಟ್ ಮಾಡುವ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ಈ ಎರಡೂ ಚಿತ್ರಗಳು ಮೊದಲ ದಿನ ಭಾರತದಲ್ಲಿ ಗಳಿಸಿದ್ದೆಷ್ಟು ಎಂಬುದನ್ನು ಪ್ರಕಟಿಸಿದೆ. ಈ ರಿಪೋರ್ಟ್ ಪ್ರಕಾರ ವಿಜಯ್ ನಟನೆಯ ವಾರಿಸು ಮೊದಲ ದಿನ ಭಾರತದಾದ್ಯಂತ 26.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ತುನಿವು ಮೊದಲ ದಿನ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ವಿಜಯ್ ನಟನೆಯ ವಾರಿಸು ತುನಿವುಗಿಂತ ಐವತ್ತು ಲಕ್ಷ ರೂಪಾಯಿ ಹೆಚ್ಚು ಗಳಿಸಿದೆ. ವಾರಿಸುಗಿಂತ ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡರೂ ಸಹ ತುನಿವು ಒಳ್ಳೆಯ ಕಲೆಕ್ಷನ್ ಮಾಡಿದ್ದು ಪೈಪೋಟಿ ನೀಡಿದೆ. ಹೀಗಾಗಿ ಮೊದಲ ದಿನ ಎರಡೂ ದಿನ ಸಮಬಲ ಸಾಧಿಸಿವೆ ಎನ್ನಬಹುದಾಗಿದ್ದು, ವಿಮರ್ಶೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ವಾರಿಸುಗಿಂತ ತುನಿವು ಚಿತ್ರವೇ ಹೆಚ್ಚು ಗಳಿಸುವ ಸಾಧ್ಯತೆಗಳಿವೆ. ಇನ್ನು ಭಾರತದಾದ್ಯಂತ ಮೊದಲ ದಿನದ ಕಲೆಕ್ಷನ್‌ನಲ್ಲಿ ಅಜಿತ್ ಕುಮಾರ್ ತುನಿವು ಚಿತ್ರಕ್ಕಿಂತ ವಾರಿಸು ಚಿತ್ರ ಹೆಚ್ಚು ಗಳಿಸಿದರೆ ತಮಿಳುನಾಡಿನಲ್ಲಿ ತುನಿವು ಚಿತ್ರವೇ ಅಧಿಕ ಕಲೆಕ್ಷನ್ ಮಾಡಿದೆ. ಮೊದಲ ದಿನ ತಮಿಳುನಾಡಿನಲ್ಲಿ ವಾರಿಸು 17 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದರೆ, ತುನಿವು 18 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಮೊಲದ ದಿನ ವಿಜಯ್ ಚಿತ್ರದ ಮುಂದೆ ಅಜಿತ್ ಚಿತ್ರ ಗೆದ್ದಿದೆ. ಕರ್ನಾಟಕದಲ್ಲಿ ವಿಜಯ್ ಚಿತ್ರಕ್ಕೆ ಕಲೆಕ್ಷನ್ ಹೆಚ್ಚು ಕರ್ನಾಟಕದಲ್ಲಿ ಮೊದಲ ದಿನ ಅಜಿತ್ ಕುಮಾರ್ ತುನಿವು ಎದುರು ವಿಜಯ್ ನಟನೆಯ ವಾರಿಸು ಜಯಭೇರಿ ಬಾರಿಸಿದೆ. ತುನಿವು ಮೊದಲ ದಿನ ರಾಜ್ಯದಲ್ಲಿ 4.77 ಕೋಟಿ ಗಳಿಸಿದರೆ, ವಾರಿಸು 5.65 ಕೋಟಿ ಗಳಿಸಿದೆ. ಕೇರಳದಲ್ಲಿ ತುನಿವು 1.5 ಕೋಟಿ ಗಳಿಸಿದರೆ, ವಾರಿಸು 3.5 ಕೋಟಿ ಗಳಿಸಿದೆ. ಈ ಮೂಲಕ ಕೇರಳದಲ್ಲಿಯೂ ವಾರಿಸು ತುನಿವು ಚಿತ್ರವನ್ನು ಹಿಂದಿಕ್ಕಿದೆ. ತುನಿವು ತೆಲುಗು ಡಬ್ ತೆಗಿಂಪು ಚಿತ್ರ ತೆಲುಗು ರಾಜ್ಯಗಳಲ್ಲಿ 2.50 ಕೋಟಿ ಗಳಿಸಿದ್ದು, ವಾರಿಸು ತೆಲುಗು ಡಬ್ ವಾರಸುಡು ಚಿತ್ರ ಬಿಡುಗಡೆಗೊಂಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರಕ್ಕೆ ಸಮತಿ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

Thu Jan 12 , 2023
ಬೆಂಗಳೂರು: ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರಕ್ಕೆ ಸಮತಿ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಈ ಬಾರಿ ಗಣರಾಜ್ಯೋತ್ಸವ ಪೆರೇಡ್‌ ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಿದೆ. ಕೊನೆ ಕ್ಷಣದಲ್ಲಿ ಕರ್ನಾಟಕ ಸ್ತಬ್ಧಚಿತ್ರ ಸೇರ್ಪಡೆಯಾಗಿದೆ. 14ನೇ ಬಾರಿ ಕರ್ನಾಟಕದ ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಸಾಗಲಿದೆ.ರಾಜಧಾನಿ ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸಂಸ್ಕೃತಿ, ಕಲೆ, ಬಿಂಬಿಸುವ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಬಾರಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿಸಲಾಗಿತ್ತು. ಇದೀಗ […]

Advertisement

Wordpress Social Share Plugin powered by Ultimatelysocial