ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ; ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

 

ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ನಗರದ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗಳ ಮೇಲೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಆನಂದ್, ನಾಗೇಶ್, ಗಿರೀಶ್, ರಂಜಿತ್ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ.ಬಹುಜನ ಸಮಾಜವಾದಿ ಪಾರ್ಟಿ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಗೋಪಾಲಲಕ್ಷ್ಮಿ ಎಂಬುವವರ ತಾಯಿ ಯಲ್ಲಮ್ಮ ಅವರನ್ನು ಚಿಕಿತ್ಸೆಗೆಂದು ಜ.21ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದಿದ್ದರು. ಜ.28 ರಂದು ತಲೆಯ ಭಾಗಕ್ಕೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಐಸಿಯುಗೆ ಶಿಫ್ಟ್​ ಮಾಡಬೇಕಿತ್ತು. ಆಗ ಆಸ್ಪತ್ರೆಯ ನಾಲ್ವರು ಸಿಬ್ಬಂದಿ 50 ಸಾವಿರ ಲಂಚ ಕೊಡಲೇಬೇಕು ಎಂದು ಒತ್ತಡ ಹೇರಿದ್ದಾರೆ. ಕಡು ಬಡವರಾಗಿದ್ದರೂ ನಿಮ್ಮ ತಾಯಿ ಬದುಕಬೇಕೆಂದರೆ ತಕ್ಷಣ ಹಣ ತಂದಿಡಿ ಎಂದು ಸಂಬಂಧಿಕರಿಗೆ ಆರೋಪಿಗಳು ಬೆದರಿಸಿದ್ದರು ಎಂದು ಅವರು ತಿಳಿಸಿದ್ದಾರೆ.ನೊಂದ ಮಹಿಳೆ ಲಕ್ಷ್ಮಿ ದಕ್ಷಿಣ ವಿಭಾಗದ ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ಹಾಗೂ ಸಾಕ್ಷ್ಯಾಧಾರ ಆಧಾರದ ಮೇಲೆ ನಾಲ್ವರು ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೃಢಪಟ್ಟಿದೆ. ಹಾಗಾಗಿ ಇದೀಗ ನಾಲ್ವರು ಸಿಬ್ಬಂದಿಗಳ ವಿರುದ್ಧ ಎಫ್​​ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ಜಾರಿ ಮಾಡಿಲಾಗಿದೆ.ತುಂಬಾ ವಿಶೇಷ ಹಾಗೂ ನಿಖರತೆ ಹೊಂದಿರುವ ನ್ಯೂಸ್‌ ಆಪ್ ಡೌನ್ಲೋಡ್ ಮಾಡಿಕೊಳ್ಳಿ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾಸವಾಳದ ಚಹಾ ಬೆಸ್ಟ್ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ!

Tue Feb 1 , 2022
ಅಧಿಕ ರಕ್ತದೊತ್ತಡವು ಹೃದಯದಲ್ಲಿನ ರಕ್ತಕೊರತೆ ಮತ್ತು ಸೆರೆಬ್ರೊವಾಸ್ಕುಲರ್ (ಮೆದುಳಿಗೆ ಸಂಬಂಧಿಸಿದ) ಕಾಯಿಲೆ ಜೊತೆಗೆ ಮತ್ತು ಮೂತ್ರಪಿಂಡದಲ್ಲಿ ದೀರ್ಘಕಾಲೀನ ಕಾಯಿಲೆ ಸೇರಿದಂತೆ ಅನೇಕ ರೀತಿಯ ಗಂಭೀರ ಅನಾರೋಗ್ಯಗಳಿಗೆ ಕಾರಣವಾಗಬಹುದು.ಅಧಿಕ ರಕ್ತದೊತ್ತಡವು ಅಂಗವೈಕಲ್ಯ ಹೆಚ್ಚಿಸಿ, ಅಕಾಲಿಕ ಸಾವುಗಳಿಗೆ ವಿಶ್ವಾದ್ಯಂತ ಕಾರಣವಾಗುತ್ತಾ ಬಂದಿದೆ.ಅನೇಕ ಸಂದರ್ಭಗಳಲ್ಲಿ ರೋಗಿಯ ರಕ್ತದೊತ್ತಡವು ಸ್ಥಿರವಾಗಿಲ್ಲದ ಕಾರಣ ವೈದ್ಯರು ಕೆಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಗದೇ ಇರುವ ಪ್ರಸಂಗ ನೀವು ಕೇಳಿರಬಹುದು.ಹೌದು, ಆಧುನಿಕ ಔಷಧಿಗಳ ಮೂಲಕ ರಕ್ತದೊತ್ತಡದ ಮಟ್ಟವನ್ನು ನಿರ್ವಹಿಸಬಹುದು, ಆದರೆ ಈ […]

Advertisement

Wordpress Social Share Plugin powered by Ultimatelysocial