ಶೀಘ್ರವೇ ಸ್ಯಾಂಟ್ರೋ ರವಿ ಬಂಧನ,

 

ಮೈಸೂರು: ಮೂಲತಃ ಮೈಸೂರಿನವನಾಗಿರುವ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ವಿರುದ್ಧ ಈ ಹಿಂದೆ ಹಲವೆಡೆ ಪ್ರಕರಣ ದಾಖಲಾಗಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇದೆ ಎನ್ನಲಾಗುತ್ತಿದೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರ ಹಲವು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ತಲೆನೋವಾಗಿರುವ ಸ್ಯಾಂಟ್ರೋ ರವಿ ವಿಚಾರ ಬಗೆದಷ್ಟೂ ವಿಸ್ತರಿಸಿಕೊಳ್ಳುತ್ತಿದೆ. ಸ್ಯಾಂಟ್ರೋ ರವಿ ಬಂಧನ ಆಗದೆ ಇರೋದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗ ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಕಾರ್ಯಾಚರಣೆಗೆ ಪ್ರವೇಶಿಸಿದ್ದಾರೆ.ಸ್ಯಾಂಟ್ರೋ ರವಿ ಪ್ರಕರಣ ಸಂಬಂಧ ಮೈಸೂರಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, ಸ್ಯಾಂಟ್ರೋ ರವಿ ಬಂಧನಕ್ಕಾಗಿ ಪೊಲೀಸರ 3-4 ತಂಡಗಳು ಕೆಲಸ ಮಾಡುತ್ತಿವೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸ್ಯಾಂಟ್ರೋ ರವಿ ವಾಸಿಸುತ್ತಿರುವ ಮನೆ ಹಾಗೂ ಇನ್ನಿತರ ಆಸ್ತಿಪಾಸ್ತಿ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತನ ಎಲ್ಲಾ ಬ್ಯಾಂಕ್ ಅಕೌಂಟ್‌ಗಳನ್ನು ಜಾಲಾಡುತ್ತಿದ್ದೇವೆ, ಮನಿ ಲಾಂಡ್ರಿಂಗ್ ಕಾನೂನನ್ನು ಉಲ್ಲಂಘನೆ ಮಾಡಿದ್ದಾನೆಯೇ ಅನ್ನೋ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಹಾಗೊಮ್ಮೆ ಮನಿ ಲಾಂಡ್ರಿಂಗ್ ಕಾನೂನು ಉಲ್ಲಂಘನೆಯಾಗಿದ್ರೆ, ಹೊಸ ಕೇಸ್ ಕೂಡ ಮಾಡುತ್ತೇವೆ. ಪೊಲೀಸರು ಆತನ ಪತ್ತೆಗೆ ಎಲ್ಲಾ ಅಯಾಮಗಳಲ್ಲೂ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಸ್ಯಾಂಟ್ರೋ ರವಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ ಆರ್.ಆರ್. ನಗರದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಎಲ್ಲ ಅಗತ್ಯ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಎಷ್ಟು ಬ್ಯಾಂಕ್ ಖಾತೆ ಇವೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಆತನ ಆಸ್ತಿ ಜಪ್ತಿ ಬಗ್ಗೆಯೂ ಶೀಘ್ರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಗಾ ವಿಲಾಸ ವಿಹಾರಕ್ಕೆ ಟಿಕೆಟ್ ಎಷ್ಟು, ಪ್ರಯಾಣ ಹೇಗಿರುತ್ತೆ?

Wed Jan 11 , 2023
ಟ್ರಿಪ್​ ಹೋಗೋದು ಅಂದ್ರೆ ನಿಮಗೆಷ್ಟು ಇಷ್ಟ? ವೀಕೆಂಡ್​ ಬಂತು ಅಂದ್ರೆ ಸಾಕು, ಸಿಟಿ ಲೈಫ್​ ಬಿಟ್ಟು ಹೊರ ಪ್ರಪಂಚಕ್ಕೆ ಹಾರ್ತೀರ ಅಲ್ವಾ? ಹೋಗೋ ಸ್ಥಳಗಳ ಬಗ್ಗೆ ಕೂಡ ನೀವು ಸ್ವಲ್ಪ ಜ್ಞಾನ ಹೊಂದಿರಬೇಕು.ನಿಮಗೆ ಫಾರಿನ್​ ಟ್ರಿಪ್​ ಅಂದ್ರೆ ಇಷ್ಟನಾ? ಅದೆಷ್ಟೋ ಜನರಿಗೆ ಈಗಿನ ವ್ಲಾಗರ್ಸ್​ಗಳನ್ನು ನೋಡಿ, ಅಯ್ಯೋ ನಾನು ಕೂಡ ಫಾರಿನ್​ಗೆ ಟ್ರಿಪ್​ ಹೋಗಬೇಕು ಮಹದ್ದಾಸೆಯನ್ನು ಹೊತ್ತಿದ್ದೀರ? ಈ ಹಿಂದೆ ಫಾರಿನ್​ ಟೂರ್​ ಬಗ್ಗೆ ನಿಮಗೆ ವಿವರಸಿಲಾಗಿತ್ತು.ವಿಶ್ವದ ಅತಿ ಉದ್ದದ […]

Advertisement

Wordpress Social Share Plugin powered by Ultimatelysocial