ದೀಪಾವಳಿ ದಿನದಂದು ಎಣ್ಣೆ ಸ್ನಾನ ಯಾಕೆ ಮಾಡ್ಬೇಕು? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ

Deepavali 2021: ನರಕ‌ ಚತುರ್ದಶಿಯ ದಿನ ಎಣ್ಣೆ ಸ್ನಾನ ಯಾಕೆ ಮಾಡ್ಬೇಕು? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ

ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗಿದೆ. ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಎಣ್ನೆ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಆದರೆ ದೇಹಕ್ಕೆ ಎಣ್ಣೆ ಸವರಿ ನಮ್ಮ ಸಾಂಪ್ರದಾಯಿಕ ಸ್ನಾನ ಮಾಡುವ ಪದ್ಧತಿ ಇಂದು ಸಂಪೂರ್ಣ ಕಣ್ಮರೆಯಾಗುತ್ತಿದೆ.

ವರ್ಷಕ್ಕೊಮ್ಮೆ ಹೆಚ್ಚೆಂದರೆ ದೀಪಾವಳಿಯಂದು ಮಾತ್ರ ಎಣ್ಣೆ ಸ್ನಾನ(Oil Bathing) ಮಾಡುತ್ತಾರೆ. ಆದರೆ ನಮ್ಮ ಪೂರ್ವಜರು ಕೆಲವು ದಿನಗಳಲ್ಲಿ ಎಣ್ಣೆ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಪುರುಷರು ಬುಧವಾರ ಮತ್ತು ಶನಿವಾರದಂದು ಮತ್ತು ಮಹಿಳೆಯರು ಮಂಗಳವಾರ ಮತ್ತು ಶುಕ್ರವಾರದಂದು ಎಣ್ಣೆ ಸ್ನಾನ ಮಾಡಬಹುದು. ಭಾನುವಾರದಂದು ಎಣ್ಣೆ ಸ್ನಾನ ಮಾಡುವಂತಿಲ್ಲ ಎನ್ನಲಾಗುತ್ತದೆ.

ಎಣ್ಣೆ ಸ್ನಾನ ಯಾಕೆ ಮಾಡಬೇಕು?

ಎಣ್ಣೆ ಕೂಡ ನಮ್ಮ ದೇಹಕ್ಕೆ ಅತ್ಯಗತ್ಯವಾದ ವಸ್ತು ಎಂಬುದನ್ನ ಮರೆಯಬಾರದು. ಕೂದಲು ಮತ್ತು ಚರ್ಮ ಎರಡೂ ನೈಸರ್ಗಿಕವಾಗಿ ಆರೋಗ್ಯಯುತವಾಗಿರಲು ಎಣ್ಣೆ ಅತಿ ಅವಶ್ಯಕ. ಇವೆರಡೂ ನಮ್ಮ ತ್ವಚೆ ಮತ್ತು ಕೂದಲನ್ನು ರಕ್ಷಿಸುವ ಶಕ್ತಿ ಹೊಂದಿವೆ. ಹಾಗಾಗಿ, ವಾರಕ್ಕೆ ಎರಡು ಬಾರಿ ಎಣ್ಣೆ ಸ್ನಾನ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ, ನಮ್ಮ ದೇಹದಲ್ಲಿ ಉಷ್ಣತೆಯ ಹೆಚ್ಚಳದಿಂದ ವಿವಿಧ ಸಮಸ್ಯೆಗಳು ಉಂಟಾಗುತ್ತವೆ. ಬೇಸಿಗೆಯ ದದ್ದುಗಳು, ಹೀಗೆ ಹಲಾರು ಸಮಸ್ಯೆಗಳು ಉಂಟಾಗುತ್ತದೆ. ಆಯಿಲ್ ಸ್ಕ್ರಬ್ ಇಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಸಮಾಧಿಯತ್ತಾ ಅಭಿಮಾನಿಗಳ ದಂಡು...!

Wed Nov 3 , 2021
ನಮ್ಮನೆಲ್ಲ​ ಬಿಟ್ಟು ಪವರ್​ ಸ್ಟಾರ್ ಬಾರದ ಲೋಕಕ್ಕೆ ಹೊಗಿದ್ದಾರೆ. ಆದರೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. 6 ದಿನ ಅಲ್ಲ, 6 ಸಾವಿರ ದಿನಗಳು ಕಳೆದrರು ಅಪ್ಪು(Appu) ನೆನೆಪುಗಳು ನಮ್ಮಿಂದ ದೂರವಾಗುವುದಿಲ್ಲ. ಎಲ್ಲೆ ಹೋದರು, ಎಲ್ಲೆ ಬಂದರು ಪುನೀತ್​ #ರಾಜ್​ಕುಮಾರ್​ ಅವರ ನಗು ಮುಖ ನಮ್ಮನ್ನ ಹಿಂಬಾಲಿಸಿ ಬರುತ್ತಿದೆ. ನಿನ್ನೆ ಡಾ.ರಾಜ್​ಕುಮಾರ್​(Dr.Rajkumar) ಕುಟುಂಬಸ್ಥರೆಲ್ಲ ಅಪ್ಪು ಸಮಾಧಿ ಬಳಿ ಬಂದು ಹಾಲು-ತುಪ್ಪ ಕಾರ್ಯವನ್ನು ನೇರವೇರಿಸಿದ್ದರು. ಇದಾದ ಬಳಿಕ ಅಪ್ಪು […]

Advertisement

Wordpress Social Share Plugin powered by Ultimatelysocial