ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ ಬಿ ಪಾಟೀಲ ನಾಮಪತ್ರ ಸಲ್ಲಿಕೆ .!

ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ ಬಿ ಪಾಟೀಲ ನಾಮಪತ್ರ ಸಲ್ಲಿಕೆ.  ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎ ಬಿ ಪಾಟೀಲ ನಾಮಪತ್ರ ಸಲ್ಲಿಕೆ. ಅಪಾರ ಕಾರ್ಯಕರ್ತರ ಬೆಂಬಲಿಗರಿಂದ ಕೋರ್ಟ್ ಸರ್ಕಲನಿಂದ ಹುಕ್ಕೇರಿ ಆಡಳಿತ ಭವನಕ್ಕೆ ತೇರಳಿ. ಚುನಾವಣಾಧಿಕಾರಿ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರೆ. ತಹಸಿಲ್ದಾರ ಎಸ್ ಬಿ ಇಂಗಳೆ ಅವರಿಗೆ ಎರಡು ನಾಮಪತ್ರ ಸಲ್ಲಿಕೆ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಎ ಬಿ ಪಾಟೀಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನ ಗೆದ್ದು ಸ್ಥಿರ ಸರ್ಕಾರ ರಚಿಸಲಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ. ಶಶಿಕಾಂತ ನಾಯಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರಿಂದ ಪಕ್ಷಕ್ಕೆ ಬಲ ಬಂದಿದೆ, ಹುಕ್ಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ನನಗೆ ಆಶಿರ್ವಾದ ಮಾಡಲಿದ್ದಾರೆ ಎಂದರು. ಹುಕ್ಕೇರಿ ಮತ ಕ್ಷೇತ್ರಕ್ಕೆ ಬಿ ಜೆ ಪಿ ಅಭ್ಯರ್ಥಿ ನಾಮ ಪತ್ರ ಸಲ್ಲಿಕೆ, ಹುಕ್ಕೇರಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನಿಖಿಲ್ ಕತ್ತಿ. ನಾಮಪತ್ರಿಕೆಯನ್ನು ಹುಕ್ಕೇರಿ ಚುನಾವಣಾ ಅಧಿಕಾರಿ ವಿಜಯಕುಮಾರ ಅಜೂರೆ. ತಹಸಿಲ್ದಾರ ಎಸ್ ಬಿ ಇಂಗಳೆ ಯವರಿಗೆ ಸಲ್ಲಿಕೆ. ಮಂಗಳವಾರ ಮಧ್ಯಾಹ್ನ 12 ಘಂಟೆಗೆ ಹುಕ್ಕೇರಿ ಆಡಳಿತ ಭವನಕ್ಕೆ ತಮ್ಮ ಬೆಂಬಲಿಗರೊಂದಿಗೆ.

ಸಂಸದ ಈರಣ್ಣಾ ಕಡಾಡಿ ಅಪ್ಪಾಸಾಹೇಬ ಶಿರಕೋಳಿ ಗಜಾನನ ಕೋಳ್ಳಿ, ರಾಜೇಂದ್ರ ಪಾಟೀಲ ಇವರೊಂದಿಗೆ ನಾಮಪತ್ರ ಸಲ್ಲಿಕೆ. ಮಾದ್ಯಮಗಳೊಂದಿಗೆ ಮಾತನಾಡುತ್ತಾ ನಾಮ್ಮ ತಂದೆಯವರಾದ ದಿವಂಗತ ಉಮೇಶ್ ಕತ್ತಿ ಯವರ ಕಳೆದ 40 ವರ್ಷಗಳಿಂದ ಕ್ಷೇತ್ರದ ಜನತೆ ಮತ್ತು ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಕ್ಷೇತ್ರದ ಜನತೆ ನನಗೆ ಈ ಬಾರಿ ಆಶಿರ್ವಾದ ಮಾಡಿ ಇನ್ನೂ ಹೇಚ್ಚಿನ ಅಭಿವೃದ್ಧಿಗೆ ಸಹಕರಿಸಲಿದ್ದೇನೆ ಎಂದರು.

ಸಂಸದ ಈರಣ್ಣಾ ಕಡಾಡಿ ಮಾತನಾಡಿ ಹುಕ್ಕೇರಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಕತ್ತಿ ಕುಟುಂಬದ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ , ಇಬ್ಬರ ಗೇಲವು ನಿಶ್ಚಿತವಾಗಿದೆ ಎಂದರು. ಹತ್ತು ಸಾವಿರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲ್ಕಣ್ಣ ಗುರುಗಳಿಗೆ ಮಾಜಿ ಶಾಸಕರಿಂದ ಪುಷ್ಪ ನಮನಗಳು !

Tue Apr 18 , 2023
ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದಲ್ಲಿ ಮಲ್ಕಣ್ಣ ತಾಂಬೆ ಅವರ 2ನೇ ಪುಣ್ಯ ಸ್ಮರಣೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಕ್ಯಾಂಡಲ್ ಹಚ್ಚಿ ಎರಡು ನಿಮಿಷಗಳ ಕಾಲ ಮೌನಚರಣೆ. ಅದೇ ವೇಳೆ ಭಾಗವಹಿಸಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳಿ ಪುಷ್ಪ ನಮನವನ್ನು ಸಲ್ಲಿಸಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಮಲ್ಕಣ್ಣ ಗುರುಗಳು ನಿಧನದಿಂದ ಬರಿ ಅವರ ಕುಟುಂಬ ಒಂದೇ ಅಲ್ಲ ಇಡೀ ಗ್ರಾಮದ ಜನರು ವಿದ್ಯಾರ್ಥಿಗಳಿಗೆ ದುಃಖ ವಾಗಿದೆ […]

Advertisement

Wordpress Social Share Plugin powered by Ultimatelysocial