ಫ್ಯಾಮಿಲಿ ಪ್ಯಾಕ್ ಚಿತ್ರ ಅರ್ಜುನ್ ಕುಮಾರ್​ಗೆ ಮೆಚ್ಚುಗೆಯ ಟಾಲಿವುಡ್​ನಿಂದ ಎರಡು ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಬುಲಾವ್!

ಪಿಆರ್​ಕೆ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಫೆ. 16ರಂದು ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಇದಷ್ಟೇ ಅಲ್ಲ ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈ ವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್ ಕುಮಾರ್ ಅವರ ಕೆಲಸಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ, ಸೌತ್​ ಸಿನಿ ಇಂಡಸ್ಟ್ರಿಯ ಹಲವು ದಿಗ್ಗಜರಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ.ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಸಿನಿಮಾಕ್ಕೆ ತಮಿಳಿನ ರಜನಿಕಾಂತ್ ಅವರ ಪಿಆರ್​ಒ ಆಗಿರುವ ರಿಯಾಜ್ ಕೆ ಅಹ್ಮದ್ ಅವರು ಗುಡ್ ಜಾಬ್ ಅರ್ಜುನ್ ಕುಮಾರ್ ಮತ್ತು ಪಿಆರ್​ಕೆ ಸಂಸ್ಥೆ ಆಯ್ಕೆಯೂ ಅಷ್ಟೇ ಚೆನ್ನಾಗಿದೆ ಎನ್ನುವ ಮೂಲಕ ತಂಡದ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.ಬಾಹುಬಲಿ ಮತ್ತು ಆರ್​ಆರ್​ಆರ್ ಸಿನಿಮಾ ತಂಡದ ಜತೆ ಗುರುತಿಸಿಕೊಂಡಿರುವ ವಂಶಿ ಕಾಕಾ ಮಜವಾದ ಸ್ಕ್ರಿಪ್ಟ್ ಮತ್ತು ಅದನ್ನು ಹೇಳಿರುವ ರೀತಿಯೂ ಅಷ್ಟೇ ಸರಳವಾಗಿದೆ ಎಂದಿದ್ದಾರೆ. ಸೌತ್ ಸಿನಿ ದುನಿಯಾದ ಇನ್ಫೂಯೆನ್ಸರ್ ರಮೇಶ್ ಬಾಲ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಅರ್ಜುನ್ ಕುಮಾರ್ ಒಂದೊಳ್ಳೆ ಮನರಂಜನಾತ್ಮಕ ಚಿತ್ರವನ್ನೇ ನೀಡಿದ್ದಾರೆ ಎಂದಿದ್ದಾರೆ.ಇದಷ್ಟೇ ಅಲ್ಲು ಅರ್ಜುನ್ ಒಡೆತನದ ಆಹಾ ಓಟಿಟಿ ಮೀಡಿಯಾದ ಪ್ರಣೀತಾ ಸಿನಿಮಾ ನೋಡಿ, ಸ್ವತಃ ನಿರ್ದೇಶಕರನ್ನೇ ಹೈದರಾಬಾದ್​ಗೆ ಆಹ್ವಾನ ನೀಡಿದ್ದಾರೆ. ವಿಜಯ್ ದೇವರಕೊಂಡ ಅವರ ಪಿಆರ್​ಒ ಆಗಿರುವ ಸುರೇಶ್ ಕೊಂಡ, ತೆಲುಗಿನಲ್ಲಿಯೂ ಈ ಸಿನಿಮಾ ಮಾಡುವಂತೆ, ಇಲ್ಲಿನ ಮಾರುಕಟ್ಟೆಗೆ ಈ ಥರದ ಸಿನಿಮಾಗಳು ಬೇಕಿವೆ ಎಂದಿದ್ದಾರೆ.ಈವರೆಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ ಆಗಿವೆ. ಆದರೆ, ಸಿನಿಮಾದ ಜತೆಗೆ ನಿರ್ದೇಶಕರಿಗೆ ಈ ಮಟ್ಟದ ಮೆಚ್ಚುಗೆ ಸಿಕ್ಕಿರಲಿಲ್ಲ. ಇದೀಗ ಫ್ಯಾಮಿಲಿ ಪ್ಯಾಕ್ ಚಿತ್ರದಿಂದ ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಬೇರೆ ಬೇರೆ ಇಂಡಸ್ಟ್ರಿಯವರೂ ಗುರುತಿಸುತ್ತಿದ್ದಾರೆ.ವಿಶೇಷ ಏನೆಂದರೆ ತೆಲುಗಿನ ಎರಡು ಚಿತ್ರ ನಿರ್ಮಾಣ ಸಂಸ್ಥೆಗಳು ಅರ್ಜುನ್​ಗೆ ಸಿನಿಮಾ ಅವಕಾಶವನ್ನೂ ನೀಡಿವೆಯಂತೆ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, ಮಾತುಕತೆಗಳು ನಡೆಯುತ್ತಿವೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಈಗಲೇ ಅದೆಲ್ಲವನ್ನು ನಾನು ರಿವೀಲ್ ಮಾಡುವುದಿಲ್ಲ. ಸದ್ಯ ಪಿಆರ್​ಕೆ ಸಂಸ್ಥೆ ವತಿಯಿಂದ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಖುಷಿಯ ವಿಚಾರ ಎಂಬುದು ಅವರ ಮಾತು.
ಶೀರ್ಷಿಕೆ ನೋಡಿ ಇದೊಂದು ಡಬಲ್ ಮೀನಿಂಗ್ ಇರುವಂತಹ ಸಿನಿಮಾ ಎದೆನಿಸಬಹುದು. ಆದರೆ ಇದೊಂದು ಪಕ್ಕಾ ಕೌಟುಂಬಿಕ ಸಿನಿಮಾ ಎಂದು ತಂಡ ಹೇಳಿಕೊಂಡಿದೆ. ಪಿಆರ್​ಆಕೆ ಸಿನಿಮಾ ಸಂಸ್ಥೆ ವಜ್ರೇಶ್ವರಿ ಸಂಸ್ಥೆ ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯಲಿದೆ. ಆ ಸಂಸ್ಥೆ ಸಾಗಿ ಬಂದ ರೀತಿಯಲ್ಲಿಯೇ ಮನರಂಜನಾತ್ಮಕ ಸಿನಿಮಾಗಳನ್ನು ನೀಡುವುದು ಸಂಸ್ಥೆಯ ಉದ್ದೇಶ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅ. ರಾ. ಮಿತ್ರ

Fri Feb 25 , 2022
ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ ಅವರು ನಾಡಿನ ಶ್ರೇಷ್ಠರ ಸಾಲಿನ ಹಾಸ್ಯಜ್ಞ, ಉಪನ್ಯಾಸಕ, ವಿದ್ವಾಂಸ, ಅಧ್ಯಾಪಕ, ಬರಹಗಾರ, ವಿಮರ್ಶಕ ಮತ್ತು ಸಜ್ಜನರಲ್ಲಿ ಸಜ್ಜನ ಮನೋಧರ್ಮದವರೆಂದು ಖ್ಯಾತರು. ಅ. ರಾ. ಮಿತ್ರ 1935ರ ಫೆಬ್ರುವರಿ 25ರಂದು ಬೇಲೂರಿನಲ್ಲಿ ಜನಿಸಿದರು. “ಅ. ರಾ ಮಿತ್ರರು ನಮಗೆಲ್ಲಾ ತುಂಬಾ ನೆನಪಾಗುತ್ತಾರೆ. ಕಾರಣ ಅವರಿದ್ದ ಕಾಲೇಜಿಗೆ ನಾವು ಹೋಗ್ತಾ ಇದ್ವಿ. ಅವರನ್ನ ನೋಡಲಿಕ್ಕಲ್ಲ! ಅವರಿದ್ದ ಕಾಲೇಜು ಯಾವುದು ಗೊತ್ತಾಯ್ತಲ್ಲ. ಮಹಾರಾಣಿ ಕಾಲೇಜು!” ಹೀಗೆಲ್ಲಾ ಹೇಳಿದರೆ ಅ. […]

Advertisement

Wordpress Social Share Plugin powered by Ultimatelysocial