ಸರ್ಜಾ ಹೆಣೆದ ಮಾರ್ಟಿನ್‌,

ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ನಟನೆಯ, ಎ.ಪಿ. ಅರ್ಜುನ್‌ ನಿರ್ದೇಶನದ ‘ಮಾರ್ಟಿನ್‌’ ಟೀಸರ್‌ ಸದ್ಯ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಟೀಸರ್‌ 7 ಕೋಟಿ ವೀಕ್ಷಣೆ ಪಡೆದಿದೆ.ಈ ಚಿತ್ರಕ್ಕೆ ಖ್ಯಾತ ಬಹುಭಾಷಾ ನಟ ಅರ್ಜುನ್‌ ಸರ್ಜಾ ಕಥೆ ಬರೆದಿದ್ದಾರೆ. ಧ್ರುವ ಅವರಿಗಾಗಿಯೇ ಈ ಕಥೆಯನ್ನು ಹೆಣೆದಿರೋ ಅರ್ಜುನ್‌ ಸರ್ಜಾ, ‘ಧ್ರುವನಿಗೆ ಕಥೆ ಒಪ್ಪಿಸುವುದು ಅಷ್ಟು ಸುಲಭದ ಮಾತಲ್ಲ’ ಎಂದಿದ್ದಾರೆ. ಕಥೆ ಬಗ್ಗೆ ವಿವರಣೆ ನೀಡಿದ ಅವರು, ‘ಇವತ್ತು ಪ್ಯಾನ್‌ ಇಂಡಿಯಾ ಸಿನಿಮಾ ಎನ್ನುವುದು ಒಂದು ಚಳವಳಿಯ ರೂಪ ಪಡೆದಿದೆ. ಇದಕ್ಕೆ ಎಸ್‌.ಎಸ್‌.ರಾಜಮೌಳಿ, ಪ್ರಶಾಂತ್‌ ನೀಲ್‌, ರಿಷಬ್‌ ಶೆಟ್ಟಿ ಹೀಗೆ ಹಲವರು ಕಾರಣ. ‘ಮಾರ್ಟಿನ್‌’ ಎನ್ನುವುದು ಬೃಹತ್‌ ಪ್ರಾಜೆಕ್ಟ್‌. ಇದು ಧ್ರುವನ ಐದನೇ ಸಿನಿಮಾ. ಆತನಿಗೆ ಪಕ್ಕಾ ಕಮರ್ಷಿಯಲ್‌ ಸಿನಿಮಾ ಮಾಡುವ ಆಸೆ. ಯಾವ ರೀತಿಯ ಕಥೆ ಮಾಡಬೇಕು ಎನ್ನುವುದನ್ನು ನಾವೆಲ್ಲರೂ ಕೂತು ಚರ್ಚೆ ಮಾಡಿದೆವು. ಧ್ರುವನಿಗೆ ಕಥೆ ಒಪ್ಪಿಸುವುದು ತುಂಬಾನೆ ಕಷ್ಟ. ಧ್ರುವನಿಗೆ ಒಂದು ಲೈನ್‌ ಇಷ್ಟವಾದ ಮೇಲೆ ಮುಂದುವರಿ ದೆವು. ನಾನು ಇದುವರೆಗೆ ಮಾಡಿದ ಕಥೆಗಳ ಪೈಕಿ, ‘ಮಾರ್ಟಿನ್‌’ ಅತ್ಯುತ್ತಮ ಕಮರ್ಷಿಯಲ್‌ ಕಥೆ. ಚಿತ್ರಕಥೆಯಲ್ಲಿಹಲವು ತಿರುವುಗಳಿವೆ. ಚಿತ್ರಕ್ಕಾಗಿ ಧ್ರುವನಲ್ಲಿದ್ದ ಆಸ್ಥೆ ಮೆಚ್ಚುವಂತಹದ್ದು. ನಾನಿಷ್ಟು ಸಿನಿಮಾ ಮಾಡಿದರೂ, ಅವನ ಬಳಿ ಕಲಿಯುವುದು ಬಹಳಷ್ಟಿದೆ’ ಎನ್ನುತ್ತಾರೆ.ಇಡೀ ಸಿನಿಮಾ ಭಾರತ-ಪಾಕಿಸ್ತಾನದ ನಡುವಿನ ಕಥೆಯಲ್ಲ. ಪಾಕಿಸ್ತಾನದಲ್ಲಿ ಕೆಲ ಘಟನೆಗಳು ನಡೆಯುತ್ತವೆ. ಇದಕ್ಕೆ ಇರುವ ಸಂಬಂಧವೇನು ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು. ಈಗಾಗಲೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿರುವ ಹೀರೊಗಳು ನನ್ನ ಸಹೋದ್ಯೋಗಿಗಳು. ನಾನು ಸ್ನೇಹಿತರೊಂದಿಗೆ ಸ್ಪರ್ಧೆಗಿಳಿಯಲು ಬಯಸಲ್ಲ’ ಎನ್ನುತ್ತಾರೆ ಧ್ರುವ ಸರ್ಜಾ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಷಡಕ್ಷರಪ್ಪ ಶೆಟ್ಟರ್ ವಿಶ್ವಮಾನ್ಯ ಇತಿಹಾಸತಜ್ಞರು.

Tue Feb 28 , 2023
  ಷಡಕ್ಷರಪ್ಪ ಶೆಟ್ಟರ್ ವಿಶ್ವಮಾನ್ಯ ಇತಿಹಾಸತಜ್ಞರು. ಇಂದು ಅವರ ಸಂಸ್ಮರಣಾ ದಿನ.‍ಶೆಟ್ಟರ್ ಅವರು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ 1935 ವರ್ಷದ ಡಿಸೆಂಬರ್ 11 ರಂದು ಜನಿಸಿದರು. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ನಡೆಸಿದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಅನೇಕ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಶೆಟ್ಟರ್ ಅವರ […]

Advertisement

Wordpress Social Share Plugin powered by Ultimatelysocial