ಠೇವಣಿ ಇಡುವ ಮೊದಲು ಮುಹೂರ್ತದ ಬಗ್ಗೆ ಇರಲಿ ಗಮನ

ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಮುಹೂರ್ತ, ದಿನ ನೋಡುವುದು ಬಹಳ ಒಳ್ಳೆಯದು. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಜೀವ ವಿಮೆ ಸೇರಿದಂತೆ ಬ್ಯಾಂಕ್ ಖಾತೆಯಲ್ಲಿ ಹಣ ಇಡುವುದು ಕೂಡ ಒಳ್ಳೆಯದಲ್ಲ. ಆರ್ಥಿಕ ಸಂಕಷ್ಟ ಎದುರಾಗಬಾರದೆಂದಾದಲ್ಲಿ ಸಮಯ, ದಿವಸ ನೋಡಿ ಹಣ ಜಮಾ ಮಾಡುವುದು ಒಳ್ಳೆಯದು.ಕೃಷ್ಣಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೆ ಶುಕ್ಲ ಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ತ್ರಿಯೋದಶಿ ತಿಥಿಯ ಜೊತೆಗೆ ಸೋಮವಾರ, ಭಾನುವಾರ, ಶನಿವಾರದ ಜೊತೆಗೆ ಅಶ್ವಿನಿ, ಪುನರ್ವಸು, ಪುಷ್ಯ, ಚಿತ್ರಾ, ಅನುರಾಧಾ, ಶ್ರವಣ, ಧನಿಷ್ಠ, ರೇವತಿ ಈ ಯಾವುದಾದ್ರೂ ಒಂದು ನಕ್ಷತ್ರದಲ್ಲಿ ಜಮಾ ಮಾಡಿದ ಹಣದಿಂದ ಧನವೃದ್ಧಿಯಾಗುತ್ತದೆ.ಬಡ್ಡಿಗಾಗಿ ಸಾಲ ನೀಡುವ ವೇಳೆ ಕೂಡ ಸಮಯ ನೋಡುವುದು ಒಳ್ಳೆಯದು. ಕೃಷ್ಣಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೂ ಶುಕ್ಲಪಕ್ಷದ ತೃಯೋದಶಿಯಂದು ಸಾಲ ನೀಡಬೇಕು. ಈ ತಿಥಿಗಳು ಅಶ್ವಿನಿ, ಪುನರ್ವಸು, ಚಿತ್ರಾ, ಅನುರಾಧಾ, ಮೃಗಶಿರ, ಪುಷ್ಯ, ಶ್ರವಣ, ಧನಿಷ್ಠ, ಶತಬಿಶಾ ಹಾಗೂ ರೇವತಿ ಇವುಗಳಲ್ಲಿ ಯಾವುದಾದ್ರೂ ಒಂದು ನಕ್ಷತ್ರದಲ್ಲಿ ಬಂದ್ರೆ ಬಹಳ ಒಳ್ಳೆಯದು. ಶನಿವಾರ, ಶುಕ್ರವಾರ ಹಾಗೂ ಸೋಮವಾರ ಒಳ್ಳೆಯ ವಾರ.ಹಣದ ವ್ಯವಹಾರ, ಠೇವಣಿ ಸಂಗ್ರಹ ಇತ್ಯಾದಿಗಳಿಗೆ ಮಂಗಳವಾರ, ಸಂಕ್ರಾಂತಿಯ ದಿನ, ಸಂಕ್ರಾಂತಿ ಜೊತೆ ಭಾನುವಾರ ಬಂದಲ್ಲಿ, ಜೊತೆಗೆ ಮೂಲಾ ನಕ್ಷತ್ರ, ಜೇಷ್ಠ, ವೈಶಾಖ, ಕೃತಿಕಾ ಸೇರಿದಂತೆ ಕೆಲ ನಕ್ಷತ್ರಗಳಲ್ಲಿ ಮಾಡಬಾರದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈಲ್ವೆ ನಿಲ್ದಾಣದಲ್ಲೇ ಸ್ವಾಮೀಜಿಗೆ ಹೃದಯಾಘಾತ;

Thu Jan 12 , 2023
      ಯಾದಗಿರಿ: ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿಗೆ ಹೃದಯಾಘಾತ ಸಂಭವಿಸಿ ಲಿಂಗೈಕ್ಯರಾದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ (48) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಸ್ವಾಮೀಜಿಯವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಯಾದಗಿರಿಯ ಮಠಕ್ಕೆ ಸ್ವಾಮೀಜಿ […]

Advertisement

Wordpress Social Share Plugin powered by Ultimatelysocial