ವಿಜ್ಞಾನದಿಂದ ಆಲೋಚನ ಶಕ್ತಿ ವೃದ್ಧಿ.

 

ವಿಜ್ಞಾನ ಕೌತುಕತೆ, ವಿಸ್ಮಯತೆ ಮತ್ತು ಸಂಶೋಧನಾತ್ಮಕ ವಿಚಾರಗಳನ್ನು ತಿಳಿಸುವುದರ ಮೂಲಕ ನಮ್ಮಲ್ಲಿನ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಕೋಡ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಕಾಂತ್ ತಾಂಡೂರ ಹೇಳಿದರು.
ಅವರು ತಾಲ್ಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಂಚೋಳಿ ವಿಧಾನಸಭಾ ವ್ಯಾಪ್ತಿಯ ವಸತಿ ಶಾಲೆಗಳ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿ,ನಮ್ಮ ದೈನಂದಿನ ಬದುಕಿನಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ಪ್ರಯೋಗ, ಸಂಶೋಧನೆ ಮಾಡುವ ಮೂಲಕ ಭವಿಷ್ಯದಲ್ಲಿ ಶ್ರೇಷ್ಠ ವಿಜ್ಞಾನಿಗಳಾಗಲು ಪ್ರಯತ್ನಿಸಬೇಕು. ಬಾಲ್ಯದಲ್ಲಿ ಮಾಡಿದ ಚಟುವಟಿಕೆಗಳು ಜೀವನ ಪಯರ್ಂತ ನೆನಪಿನಲ್ಲಿ ಉಳಿಯುತ್ತವೆ. ಈ ದಿಸೆಯಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ರಾಜಶೇಖರ ಮಾಂಗ್ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುವವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವಿಜ್ಞಾನ ಬೋಧಿಸುವ ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬಿತ್ತಬೇಕು .ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪೆÇ್ರತ್ಸಾಹಿಸುವ ದೃಷ್ಟಿಯಿಂದ ಸರಕಾರ ಇಂತಹ ಮೇಳಗಳನ್ನು ರಾಜ್ಯಮಟ್ಟದ ವರೆಗೂ ಆಯೋಜಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯ, ಮಲ್ಲಪ್ಪ ಚಿಂತಕುಂಟ, ವಿಸ್ತೀರ್ಣಾಧಿಕಾರಿ ಶಾಂತವೀರಯ್ಯ ಮಠಪತಿ, ಶಿವಶಂಕರಯ್ಯ ಕಂಠಿ, ಪ್ರಾಂಶುಪಾಲರಾದ ಡಾ.ಕಲಾವತಿ, ಮಲ್ಲಪ್ಪ ಹಿರೆಮಾಳ, ಪವಿತ್ರದೇವಿ,ವಿನೋದ, ಸಮೀರಖಾನ, ಜಿತೇಂದ್ರ, ನಸ್ರೀನ್  ಸಿದ್ರಾಮಪ್ಪ ಹಳ್ಳಿ , ಸಿ ಆರ್ ಪಿ ಪ್ರಕಾಶ ಆಗಮಿಸಿದ್ದರು.
ನಾಗಶೆಟ್ಟಿ, ತುಕಾರಾಮ, ಮಹಾನಂದ, ಲೋಹಿತ, ಬಸವರಾಜ, ಭಾಗ್ಯಜೋತಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೇಳದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಎಂಟು ಶಾಲೆಗಳ ತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಸ್ವೇತಾ ಮತ್ತು ಶ್ರೀದೇವಿ ಆಗಮಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣೆಗೆ ಪ್ರಮೋದ್ ಮಧ್ವರಾಜ್ ಎಲ್ಲೇ ನಿಂತ್ರು ಸೋಲಿಸಿ.

Sun Jan 22 , 2023
ಉಡುಪಿ: ನಮ್ಮ ಆಡಳಿತದಲ್ಲಿ ಪ್ರಮೋದ್ ಮಧ್ವರಾಜ್ ಅವರನ್ನು ಮಂತ್ರಿ ಮಾಡಿದೆವು. ಆದರೆ ಪಕ್ಷಕ್ಕೆ ದ್ರೋಹ ಮಾಡಿದ ಅವರು ಬಿಜೆಪಿಗೆ ಹೋದರೂ, ಒಬ್ಬನೇ ಒಬ್ಬ ಕಾರ್ಯಕರ್ತ ಅವರ ಹಿಂದೆ ಹೋಗಿಲ್ಲ. ತಂದೆ, ತಾಯಿ, ಮಗ ಎಲ್ಲರೂ ಮಂತ್ರಿಗಳಾದರು. ಅವರ ಇಡೀ ಕುಟುಂಬಕ್ಕೆ ಪಕ್ಷ ಎಲ್ಲವನ್ನೂ ನೀಡಿದೆ. ಹೀಗಿದ್ದೂ ಪ್ರಮೋದ್ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಪ್ರಮೋದ್ ಮಧ್ವರಾಜ್​ಗೆ ಬಿಜೆಪಿ ಟಿಕೆಟ್ ಕೊಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮುಂದಿನ […]

Advertisement

Wordpress Social Share Plugin powered by Ultimatelysocial