ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು.

 

 

ಕಳೆದ ರಾತ್ರಿಯ ವಹಿವಾಟಿನಲ್ಲಿ ವಾಲ್ ಸ್ಟ್ರೀಟ್ ಸೂಚ್ಯಂಕಗಳು ಕುಸಿತ ಕಂಡಿದ್ದರೂ ಏಷ್ಯಾದ ಎಲ್ಲಾ ಪ್ರಮುಖ ಸೂಚ್ಯಂಕಗಳು ಬುಧವಾರ ಏರುಗತಿಯಲ್ಲಿವೆ. ಲೋಹಗಳು, ಕಮಾಡಿಟಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿನ ಬಲವಾದ ಗಳಿಕೆಯಿಂದ ಹಾಗೂ ಏಷ್ಯಾದ ಮಾರುಕಟ್ಟೆಗಳಲ್ಲಿನ ಬಲದಿಂದ ಉತ್ತೇಜನಗೊಂಡು ಭಾರತೀಯ ಮುಖ್ಯಾಂಶ ಸೂಚ್ಯಂಕಗಳು ದೃಢವಾದ ಲಾಭದೊಂದಿಗೆ ಬುಧವಾರದ ವಹಿವಾಟನ್ನು ಆರಂಭಿಸಿದವು.
ಕಳೆದ ವಹಿವಾಟು ಅವಧಿಯಲ್ಲಿ ಅತ್ಯಂತ ಕಳಪೆ ಕಾರ್ಯನಿರ್ವಹಣೆಯ ವಲಯವಾಗಿದ್ದ ಬಿಎಸ್‌ಇ ಮೆಟಲ್ಸ್, ಎಪಿಎಲ್‌ ಅಪೋಲೋ ಟ್ಯೂಬ್ಸ್ ಲಿಮಿಟೆಡ್‌ ನೇತೃತ್ವದಲ್ಲಿ ಸುಮಾರು ಶೇ. 1.8ರಷ್ಟು ಲಾಭ ಗಳಿಸಿದೆ. ಬಿಎಸ್ಇ ಟೆಲಿಕಮ್ಯುನಿಕೇಶನ್ಸ್ ಸಾಧಾರಣ ಲಾಭ ದಾಖಲಿಸಿದೆ.ಬುಧವಾರ ಬೆಳಗ್ಗೆ 11:00 ಗಂಟೆಗೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.62ರಷ್ಟು ಏರಿಕೆ ಕಂಡು 59,327 ಮಟ್ಟವನ್ನು ತಲುಪಿತ್ತು. ನಿಫ್ಟಿ 50 ಸೂಚ್ಯಂಕವು ಶೇ. 0.66ರಷ್ಟು ಗಳಿಕೆ ದಾಖಲಿಸಿ 17,417 ಮಟ್ಟವನ್ನು ಮುಟ್ಟಿದೆ. ಸೆನ್ಸೆಕ್ಸ್‌ನಲ್ಲಿ ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಆಂಡ್‌ ಮಹೀಂದ್ರಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗರಿಷ್ಠ ಗಳಿಕೆ ದಾಖಲಿಸಿದ್ದರೆ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಎನ್‌ಟಿಪಿಸಿ ಲಿಮಿಟೆಡ್ ಹೆಚ್ಚಿನ ನಷ್ಟದೊಂದಿಗೆ ಮಾರುಕಟ್ಟೆಯನ್ನು ಕೆಳಕ್ಕೆಳೆದಿವೆ.ಬಿಎಸ್‌ಇಯಲ್ಲಿ 2,336 ಷೇರುಗಳು ಏರಿಕೆ ಕಂಡಿದ್ದು, 798 ಷೇರುಗಳು ಕುಸಿತ ಕಾಣುವುದರೊಂದಿಗೆ ಏರಿಕೆ -ಇಳಿಕೆಯ ಅನುಪಾತವು ಇಳಿಕೆ ಪರವಾಗಿ ಬಲವಾಗಿ ಉಳಿದಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್‌ನಲ್ಲಿ ಗರಿಷ್ಠ ಗಳಿಕೆ ದಾಖಲಿಸಿರುವ ಇಂಡೋ ಅಮೈನ್ಸ್ ಲಿಮಿಟೆಡ್‌ನ ಷೇರುಗಳು ವಾಲ್ಯೂಮ್‌ನಲ್ಲಿನ ಹೆಚ್ಚಳದೊಂದಿಗೆ ಶೇ. 14ಕ್ಕಿಂತ ಹೆಚ್ಚು ಗಳಿಕೆ ಕಂಡಿವೆ. ರೂಪಾ & ಕಂಪನಿ ಲಿಮಿಟೆಡ್ ಮತ್ತು ಅಲೋಕ್ ಇಂಡಸ್ಟ್ರೀಸ್ ಷೇರುಗಳು ಸಹ ಭಾರೀ ಪ್ರಮಾಣದಲ್ಲಿ ಖರೀದಿಗೆ ಒಳಪಟ್ಟಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏರುತ್ತಲೇ ಇದೆ ಚಿನ್ನದ ದರ, 10 ಗ್ರಾಂಗೆ ₹68,000 ಮುಟ್ಟಬಹುದು ಎನ್ನುತ್ತಿದ್ದಾರೆ ತಜ್ಞರು!.

Wed Mar 1 , 2023
  ಚಿನ್ನದ ರೇಟು ಈಗಾಗಲೇ 10 ಗ್ರಾಂಗೆ 60,000 ರೂ.ಗೆ ಮುಟ್ಟಿದೆ. ಈ ದರ ಮುಂದಿನ ದಿನಗಳಲ್ಲಿ 63,000 ರೂ.ಗೆ ಏರಿಕೆ ಆಗಬಹುದು ಅನ್ನುವ ಅಂದಾಜಿದೆ. 2023ರ ಕೊನೆಗೆ ಅಥವಾ ಮುಂದಿನ ವರ್ಷ ಚಿನ್ನದ ರೇಟು 10 ಗ್ರಾಂಗೆ 68,000 ರೂಪಾಯಿ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.ಅಂತಾರಾಷ್ಟ್ರೀಯ ಮಟ್ಟದ ತಲ್ಲಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಲವಾರು ಬಿಕ್ಕಟ್ಟುಗಳು ಎದುರಾಗಿವೆ. ಆರ್ಥಿಕ […]

Advertisement

Wordpress Social Share Plugin powered by Ultimatelysocial