ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಜಾತ್ರಾ ಕಾರ್ಯಕ್ರಮ.

ಆರು ದಿನಗಳ ಕಾಲ ನಡೆಯುವ ಐತಿಹಾಸಿಕ ಸುತ್ತೂರು ಜಾತ್ರೆ ಇಂದಿನಿಂದ ಪ್ರಾರಂಭ ಹತ್ತೂರ ಜಾತ್ರೆಗೆ ಸುತ್ತೂರು ಜಾತ್ರೆ ಸಮ ಎಂಬ ನಾಣ್ಣುಡಿ ಯಂತೆ ಗ್ರಾಮೀಣ ಸೊಗಡಿನ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ, ಕೃಷಿ, ಆರೋಗ್ಯ, ಜಾನಪದ, ಸಾಮೂಹಿಕ ವಿವಾಹ, ಅನ್ನದಾಸೋಹ ಸೇರಿದಂತೆ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪು ಮೂಡಿಸಿಕೊಂಡಿರುವ ಸುಪ್ರಸಿದ್ಧ ಜಾತ್ರಾ ಮಹೋತ್ಸವವು ಇಂದಿನಿಂದ ಆರು ದಿನಗಳ ಕಾಲ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಲ್ಲಾ ಜಾತ್ರಾ ಕಾರ್ಯಕ್ರಮಗಳು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿವೆ ಆರೂ ದಿನಗಳ ಜಾತ್ರ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧಿಪತಿಗಳು ಸೇರಿದಂತೆ ಮುಖ್ಯಮಂತ್ರಿಗಳಾದಿಯಾಗಿ ಸಚಿವರು ಮಾಜಿ ಮುಖ್ಯಮಂತ್ರಿಗಳು ಮಾಜಿ ಸಚಿವರು ಸಂಸದರು ಮಾಜಿ ಸಂಸದರು ಶಾಸಕರು ಸೇರಿದಂತೆ ರಾಜಕೀಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಇಂದು ಪ್ರಮುಖವಾಗಿ ವಸ್ತು ಪ್ರದರ್ಶನ, ಕೃಷಿಮೇಳ, ಕೃಷಿ ವಿಚಾರ ಸಂಕಿರಣ, ಸಿರಿಧಾನ್ಯ ಮೇಳ, ದೋಣಿ ವಿಹಾರ, ಭಜನಾಮೇಳ, ಕೃತಿ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ.ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಭಜನಾಂಜಲಿ ಎಂಬ ಕೃತಿ ಬಿಡುಗಡೆ ಮಾಡಿದರು ಬಳಿಕ ಅವರು ಮಾತನಾಡಿ ಸರ್ಕಾರ ಮಾಡದ ಹಲವಾರು ಕಾರ್ಯಕ್ರಮಗಳನ್ನು ಶ್ರೀ ಮಠವು ಮಾಡುತ್ತಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಮಠ ಹಾಗೂ ಶ್ರೀಗಳು ಶ್ರೀಸಾಮಾನ್ಯರ ನೆರವಿಗೆ ನಿಂತಿದೆ ಎಂದು ಸುತ್ತೂರು ಮಠದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರುಇದೇ ಸಂದರ್ಭ ಅವರನ್ನು ಶ್ರೀ ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಕಾರ್ಯಕ್ರಮಕ್ಕೂ ಮುನ್ನ ಬಂದ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು ಸಚಿವರು ನೂತನ ಗದ್ದುಗೆಗೆ ತೆರಳಿ ತಮ್ಮ ಭಕ್ತಿ ನಮನ ಸಲ್ಲಿಸಿ ಬಳಿಕ ಶ್ರೀಗಳ ಆಶೀರ್ವಾದ ಪಡೆದರು
ರಾಜ್ಯದ ನಾನಾ ಮೂಲೆಗಳಿಂದ ಸುಮಾರು 800ಕ್ಕೂ ಹೆಚ್ಚು ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ದ್ದವು
ಈಗಾಗಲೇ ರಾಜ್ಯದ ನಾನಾ ಮೂಲೆಗಳಿಂದ ಭಕ್ತರ ಮಹಾಪೂರವೇ ಜಾತ್ರಾ ಮಹೋತ್ಸವಕ್ಕೆ ಹರಿದು ಬರಲಾರಂಬಿಸಿದೆ ಬಂದ ಎಲ್ಲಾ ಭಕ್ತರಿಗೆ ಶ್ರೀಮಠದ ವತಿಯಿಂದ ಮೂರು ವೇಳೆಯೂ ಪ್ರಸಾದ ನೀಡಲಾಗುತ್ತಿದೆ
ಇದೇ ಸಂದರ್ಭ ನೂತನವಾಗಿ ನಿರ್ಮಾಣ ಮಾಡಿರುವ ತೇರಿನ ಮನೆಯಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶನಾಡೆ ಗೋವಿಂದ ಭಟ್, ಕಾನೂನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನಾರ್ಧನ್‌ ರೆಡ್ಡಿ ನೂತನ ಪಕ್ಷ ಕೆಆರ್‌ಪಿಗೆ ಸೇರ್ಪಡೆಯಾದ ಬಿಜೆಪಿ ಮುಖಂಡ.

Wed Jan 18 , 2023
  ಗಂಗಾವತಿ, ಜನವರಿ, 18: ಬಿಜೆಪಿ ಮುಖಂಡ, ಬಳ್ಳಾರಿ ಜಿಲ್ಲಾ ಲಿಂಗಾಯತ ಸಮುದಾಯದ ನಾಯಕ ಗೋನಾಳು ರಾಜಶೇಖರಗೌಡ ಅವರು ಮಾಜಿ ಸಚಿವ ಜನಾರ್ಧನ್‌ ರೆಡ್ಡಿ ಅವರ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಕುರಿತು ಪಕ್ಷದ ಸಂಸ್ಥಾಪಕ ಆಗಿರುವ ಜಿ.ಜನಾರ್ಧನ್‌ ರೆಡ್ಡಿ ಆದೇಶ ಪತ್ರವನ್ನು ನೀಡಿದ್ದು, ಮುಂದಿನ ಆದೇಶದವರೆಗೆ ಕೆಆರ್‌ಪಿ ಪಕ್ಷದ ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ. ಪಕ್ಷದ ಧ್ವಜವನ್ನು […]

Advertisement

Wordpress Social Share Plugin powered by Ultimatelysocial