ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ವಿರುದ್ಧ ರಣತಂತ್ರ ಹೆಣೆದ ಕಾಂಗ್ರೆಸ್​!

 

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಗೆ ಅಚ್ಚರಿ ರೂಪದಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಸಿರುವ ಕಾಂಗ್ರೆಸ್​, ಜೆಡಿಎಸ್​ ಅಭ್ಯರ್ಥಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ನಿನ್ನೆ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದ ಕುಪ್ಪೇಂದ್ರ ರೆಡ್ಡಿ, ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು.

ಇದ್ದಕ್ಕಿದ್ದಂತೆ ಕಾಂಗ್ರೆಸ್‌ 2ನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದೇಕೆ? ಅಚ್ಚರಿ ರಾಜ್ಯ ನಾಯಕರ ಲೆಕ್ಕಾಚಾರ ಏನಿರಬಹುದು? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾಂಗ್ರೆಸ್​ನ ಲೆಕ್ಕಾಚಾರ ಏನಿರಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ.

  1. ಜೆಡಿಎಸ್- ಬಿಜೆಪಿ ಬಹಿರಂಗ ಮೈತ್ರಿ ಜಗಜ್ಜಾಹೀರಾಗಲಿ.
  2. ನಾವು ಜೆಡಿಎಸ್​ನಿಂದ ದೂರ ಇದ್ದೇವೆ ಎಂದು ಬಿಂಬಿಸಲು.
  3. ಇಬ್ರಾಹಿಂಗೆ ಅಧ್ಯಕ್ಷ ಸ್ಥಾನ ಹೊರತು ಬೇರೆ ಅವಕಾಶ ನೀಡಿಲ್ಲ, ನಾವು ಅಲ್ಪಸಂಖ್ಯಾತರ ಪರ ಎಂದು ಬಿಂಬಿಸಲು ಮನ್ಸೂರ್ ಅಲಿ ಖಾನ್‌ಗೆ ಅವಕಾಶ.
  4. ಕುಪೇಂದ್ರ ರೆಡ್ಡಿಗೆ ಈ ಹಿಂದೆ ಕಾಂಗ್ರೆಸ್ ಬೆಂಬಲಿಸಿತ್ತು, ಈ ಬಾರಿ ನಮ್ಮ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಅವರು ಬೆಂಬಲಿಸಲಿ.
  5. ಜೆಡಿಎಸ್‌ನಲ್ಲಿ ಒಡಕಿದೆ. ಅದರ ಲಾಭ ಪಡೆಯಲು ಸಾಧ್ಯವಾದರೆ ಬಳಸಿಕೊಳ್ಳುವುದು. 

    ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

    https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈತ ನಾಯಕ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ

Mon May 30 , 2022
ಬೆಂಗಳೂರು,ಮೇ 30- ರೈತರ ಸಭೆಯಲ್ಲಿ ಭಿನ್ನಾಭಿಪ್ರಾಯ ಮೂಡಿ ಪಾಲ್ಗೊಂಡಿದ್ದವರು ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ಇಂದು ಗಾಂಭವನದಲ್ಲಿ ನಡೆದಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಮ್ಮಿಕೊಂಡಿದ್ದ ರೈತ ಚಳುವಳಿ ಆತ್ಮಾವಲೋಕನ ಸ್ಪಷ್ಟೀಕರಣ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ಸೇರಿದಂತೆ ಹಲವರಿಗೆ ಮಸಿ ಬಳಿದ ಘಟನೆಯು ನಡೆದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಆಂಗ್ಲ ಭಾಷೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ […]

Advertisement

Wordpress Social Share Plugin powered by Ultimatelysocial