ಶೀಘ್ರದಲ್ಲೇ ಮಂಗಳೂರಿನಿಂದ 3 ಹೊಸ ರೈಲು;

ಮಂಗಳೂರು, ಜನವರಿ 24; ದಕ್ಷಿಣ ರೈಲ್ವೆ ಮೂರು ಹೊಸ ರೈಲುಗಳ ಸಂಚಾರ ಆರಂಭಿಸಲಿದೆ. 2022ರ ಐಆರ್‌ಟಿಟಿಸಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆ ಮಾಡಲಾಗುತ್ತಿದೆ. ಶೀಘ್ರವೇ ಈ ಕುರಿತು ಘೋಷಣೆಯಾಗಲಿದೆ.

ಸೆಂಟ್ರಲ್‌ನಿಂದ ಈ ರೈಲುಗಳು ಸಂಚಾರ ನಡೆಸಲಿವೆ.

ಇವುಗಳಲ್ಲಿ ಮಂಗಳೂರು ಮತ್ತು ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಯ ರೈಲು ಸಹ ಸೇರಿದೆ. ಪಾಲಕ್ಕಾಡ್ ರೈಲು ವಿಭಾಗದ ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೊಸ ರೈಲುಗಳ ಬೇಡಿಕೆ ಇಟ್ಟಿದ್ದಾರೆ.

ಮಂಗಳೂರು-ತಿರುಪತಿ (ವಯಾ ಹಾಸನ), ಮಂಗಳೂರು-ಅಹಮದಾಬಾದ್ (ವಯಾ ಮಡಗಾಂವ್), ಮಂಗಳೂರು-ಮೀರಜ್ (ವಯಾ ಹಾಸನ ಮತ್ತು ಅರಸೀಕೆರೆ) ರೈಲುಗಳ ಪ್ರಸ್ತಾವನೆಯನ್ನು ಸಭೆಯಲ್ಲಿ ಇಡಲಾಗಿದೆ. ಐಆರ್‌ಟಿಟಿಸಿ ಸಭೆಯಲ್ಲಿ ಈ

ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸಂಘಟನೆಗಳು, ರೈಲು ಬಳಕೆದಾರರ ಸಂಘ ಸಂಸದರನ್ನು ಮಂಗಳೂರು-ತಿರುಪತಿ ರೈಲು ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದವು. ಪಸ್ತುತ ರೈಲು ಸೇವೆ ಇಲ್ಲದ ಕಾರಣ ಬೇರೆ ಮಾರ್ಗವಾಗಿ ಸಂಚಾರ ಮಾಡಬೇಕಾಗಿದೆ ಎಂದು ಜನರು ಹೇಳಿದ್ದರು.

ಇದೇ ಮಾದರಿಯಲ್ಲಿ ಮೊದಲು ಮೀರಜ್‌ಗೆ ಸಂಚಾರ ನಡೆಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲನ್ನು ಪುನರ್ ಪರಿಚಯಿಸಬೇಕು ಎಂದು ಸಂಸದರು ಬೇಡಿಕೆ ಇಟ್ಟಿದ್ದಾರೆ. ಗೇಜ್ ಪರಿವರ್ತನೆಗಾಗಿ ಈ ರೈಲನ್ನು ನಿಲ್ಲಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ಪುನಃ ಆರಂಭಿಸಲಿಲ್ಲ.

ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್‌ ಕುಮಾರ್ ಕಟೀಲ್ ಕರಾವಳಿ ಭಾಗದಿಂದ ಉತ್ತರ ಕರ್ನಾಟಕ ಸಂಪರ್ಕಿಸಲು ರೈಲುಗಳನ್ನು ಓಡಿಸಬೇಕು ಎಂದು ಸಹ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆಗೆ ನಾಲ್ಕು ವರ್ಷದ ಹಿಂದೆ ಅನುಮತಿ ಸಿಕ್ಕಿರುವ ಮಂಗಳೂರು ಸೆಂಟ್ರಲ್- ರಾಮೇಶ್ವರಂ (ವಾರದಲ್ಲಿ ಎರಡು ದಿನ) ರೈಲು ವೇಳಾಪಟ್ಟಿಯನ್ನು ಅಂತಿಮಗೊಳಿಸಿ ರೈಲು ಓಡಿಸಬೇಕು ಎಂದು ಸಹ ಬೇಡಿಕೆ ಇಡಲಾಗಿದೆ.

ಪ್ಲಾಟ್‌ ಫಾರಂ ಕೆಲಸ ವೇಗಗೊಳಿಸಿ;

ನಳೀನ್‌ ಕುಮಾರ್ ಕಟೀಲ್ ಸಭೆಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ಲಾಟ್‌ ಫಾರಂ ಕೆಲಸ ವಿಳಂಬವಾಗುತ್ತಿರುವ ಕುರಿತು ಸಹ ವಿಷಯ ಪ್ರಸ್ತಾಪ ಮಾಡಿದ್ದಾರೆ.

ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು 2020ರ ನವೆಂಬರ್ 19ರಂದು ಕೆಲಸಕ್ಕೆ ಚಾಲನೆ ಸಿಕ್ಕಿದೆ. 2021-22ರಲ್ಲಿ ಯಾವುದೇ ಅನುದಾನ ದೊರೆಯದ ಕಾರಣ ಕಾಮಗಾರಿ ವಿಳಂಬವಾಗಿದೆ ಎಂದು ವಿವರಣೆ ನೀಡಿದರು.

ಇದರ ಜೊತೆಗೆ ಪಿಟ್‌ಲೈನ್‌ ಕಾಮಗಾರಿಗೆ ಈಗ ಅನುದಾನ ಸಿಕ್ಕಿದೆ. ಮುಂದಿನ ತಿಂಗಳ ಅಂತ್ಯದೊಳಗೆ ಈ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದರು. 2022-23ನೇ ಅರ್ಥಿಕ ವರ್ಷದಲ್ಲಿ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುತ್ತದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಆಫ್ರಿಕಾ ಥ್ರಿಲ್ಲರ್ ಗೆಲ್ಲಲು ತನ್ನ ಉತ್ಸಾಹವನ್ನು ಇಟ್ಟುಕೊಂಡಿದೆ.

Mon Jan 24 , 2022
ದೀಪಕ್ ಚಹರ್ ಅವರ 34 ಎಸೆತಗಳಲ್ಲಿ 54 ರನ್ ಗಳಿಸಿದ ಹೊರತಾಗಿಯೂ ಪರಿವರ್ತನೆಯ ಸಮಯದಲ್ಲಿ ದಕ್ಷಿಣ ಆಫ್ರಿಕಾದ ತಂಡದ ವಿರುದ್ಧ ಸರಣಿ ವೈಟ್‌ವಾಶ್ ತಪ್ಪಿಸಲು ಭಾರತ ವಿಫಲವಾಯಿತು, ಭಾನುವಾರ ಇಲ್ಲಿ ನಡೆದ ಮೂರನೇ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು ನಾಲ್ಕು ರನ್‌ಗಳಿಂದ ಸೋತರು. ಮೊದಲ ಸ್ಟ್ರೈಕ್ ತೆಗೆದುಕೊಳ್ಳಲು ಕೇಳಿದಾಗ, ಕ್ವಿಂಟನ್ ಡಿ ಕಾಕ್ ಅವರ ಆಕ್ರಮಣಕಾರಿ ಶತಕ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರ ನಿರರ್ಗಳ ಅರ್ಧಶತಕದ ನಂತರ ದಕ್ಷಿಣ […]

Advertisement

Wordpress Social Share Plugin powered by Ultimatelysocial