2025ರಿಂದ ಸ್ಮಾರ್ಟ್‌ಫೋನ್‌ಗಳಿಗೆ ಯುಎಸ್‌ಬಿ ಟೈಪ್-ಸಿ ಚಾರ್ಜರ್ ಕಡ್ಡಾಯ

ಭಾರತದಲ್ಲಿ 2025ರ ಮಾರ್ಚ್‌ ಬಳಿಕ ‌ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಯುಎಸ್‌ಬಿ ಟೈಪ್‌ ಸಿ ( USB Type-C Charger) ಚಾರ್ಜರ್ ಕಡ್ಡಾಯವಾಗಲಿದೆ. ‌ಈ ಸಂಬಂಧ ಡಿವೈಸ್‌ ಉತ್ಪಾದಕರುಗಳಿಗೆ ಗಡುವು ನೀಡಲಾಗಿದೆ. ಸರ್ಕಾರ ಸಾಮಾನ್ಯ ಚಾರ್ಜರ್‌ ನಿರ್ದೇಶನ ನೀತಿಯನ್ನು ಬಿಡುಗಡೆಗೊಳಿಸಿದೆ.ಅಂತಾರಾಷ್ಟ್ರೀಯ ದರ್ಜೆಗೆ ಅನುಗುಣವಾಗಿ ಬದಲಾಗಬೇಕಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.2025ರ ಮಾರ್ಚ್‌ ಗಡುವು ಸ್ಮಾರ್ಟ್‌ ಫೋನ್‌ಗಳಿಗೆ ಅನ್ವಯವಾಗಲಿದೆ. ಲ್ಯಾಪ್‌ ಟಾಪ್‌ ಉತ್ಪಾದಕರಿಗೆ 2026ರ ಮಾರ್ಚ್‌ ಗಡುವು ಇದೆ.ಮೊಬೈಲ್‌, ಟಾಬ್ಲೆಟ್ಸ್‌, ಸ್ಮಾರ್ಟ್‌ವಾಚಸ್‌, ವೈರ್‌ಲೆಸ್‌ ಹೆಡ್‌ಫೋನ್ಗೆ ಏಕರೂಪದ ಚಾರ್ಜರ್‌ ಜಾರಿಗೊಳಿಸಲು ಚಿಂತನೆ ನಡೆದಿದೆ.ಆಟೋ ಚಾಲಕರು ಇಂದು ಸಾರಿಗೆ ಇಲಾಖೆಯ ವಿರುದ್ಧ ವಿಧಾನಸೌಧ ಚಲೋ ಹೋರಾಟ ನಡೆಸಲು ಮುಂದಾಗಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆಯಪ್ ಬ್ಯಾನ್ ಮಾಡಲು ಹಾಗೂ ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರ ಮುಷ್ಕರ ನಡೆಯಲಿದೆ.ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿರುವ ಆಟೋ ಚಾಲಕರು ಬೃಹತ್ ಆಟೋ ರ‍್ಯಾಲಿ ಮೂಲಕ‌ ವಿಧಾನಸೌಧ ಮುತ್ತಿಗೆ ಹಾಕಲು ಪ್ಲಾನ್ ಮಾಡಿದ್ದಾರೆ. ಆಟೋ ಮುಷ್ಕರಕ್ಕೆ 21 ಆಟೋ ಸಂಘಟನೆಗಳು ಬೆಂಬಲ ಸೂಚಿಸಿವೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವಿವಿಧ ಯೂನಿಯನ್‌ಗಳಿಂದ 10 ಸಾವಿರ ಜನ ಭಾಗಿಯಾಗುವ ನಿರೀಕ್ಷೆಯಿದ್ದು, ಕಾಲ್ನಡಿಗೆ ಮೂಲಕ ವಿಧಾನಸೌಧದತ್ತ ತೆರಳಲಿದ್ದಾರೆ. 11 ಗಂಟೆ ಬಳಿಕ ವಿಧಾನಸೌಧಕ್ಕೆ ರ‍್ಯಾಲಿ ಆರಂಭವಾಗಲಿದೆ. ಸದ್ಯ ಫ್ರೀಡಂ ಪಾರ್ಕ್ ಬಳಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆಟೋ ಚಾಲಕರು ಬೀದಿಗೆ ಬೀಳುವ ಹಾಗಾಗಿದೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆಯಪ್ ನಿಷೇಧಿಸಬೇಕು ಹಾಗೂ ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯಬೇಕು ಎಂಬುದು ಆಟೋ ಚಾಲಕರ ಬೇಡಿಕೆಗಳಾಗಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಧೀರೂಭಾಯಿ ಅಂಬಾನಿಯವರ 90ನೇ ಜನ್ಮದಿನಾಚರಣೆ

Thu Dec 29 , 2022
  ರಿಲಯನ್ಸ್‌ ಇಂಡಸ್ಟ್ರೀಸ್‌ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮದಿನಾಚರಣೆ ಪ್ರಯುಕ್ತ ರಿಲಯನ್ಸ್‌ ಫೌಂಡೇಷನ್‌ 50,000 ಸ್ಕಾಲರ್‌ಶಿಪ್‌ಗಳನ್ನು ಪ್ರಕಟಿಸಿದೆ.ರಿಲಯನ್ಸ್‌ ಸಮೂಹದ ದಾನ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸುವ ರಿಲಯನ್ಸ್‌ ಫೌಂಡೇಷನ್‌, ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್‌ಶಿಪ್‌ಗಳನ್ನು ಘೋಷಿಸಲಿದೆ.2022-23ರಲ್ಲಿ 5,000 ಪದವಿ ಪೂರ್ವ ಸ್ಕಾಲರ್‌ಶಿಪ್‌ಗಳನ್ನು ನೀಡಲಿದೆ. ಇದು 2 ಲಕ್ಷ ರೂ. ತನಕ ಸಿಗಲಿದೆ. 2023ರ ಫೆಬ್ರವರಿ 14ರ ತನಕ ಅರ್ಜಿ […]

Advertisement

Wordpress Social Share Plugin powered by Ultimatelysocial