ಹೊಸದಿಲ್ಲಿ: ಹಾಕಿ ಗೋಲ್‌ಕೀಪರ್‌ ಶ್ರೀಜೇಶ್‌ಗೆ ವರ್ಲ್ಡ್ ಗೇಮ್ಸ್‌ ಆಯತ್ಲೀಟ್‌ ಪ್ರಶಸ್ತಿ

 

ಹೊಸದಿಲ್ಲಿ: ಭಾರತೀಯ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರಿಗೆ ಪ್ರತಿಷ್ಠಿತ “ವರ್ಲ್ಡ್ ಗೇಮ್ಸ್‌ ಆಯತ್ಲೀಟ್‌’ ವರ್ಷದ ಪ್ರಶಸ್ತಿ ಒಲಿದು ಬಂದಿದೆ. 2021ರ ಸಾಧನೆಗಾಗಿ ಅವರು ಈ ಗೌರವಕ್ಕೆ ಭಾಜನರಾದರು.ಪಿ.ಆರ್‌.ಶ್ರೀಜೇಶ್‌ ಈ ಗೌರವಕ್ಕೆ ಪಾತ್ರರಾದ ಭಾರತದ ಕೇವಲ ಎರಡನೇ ಕ್ರೀಡಾಪಟು. 2020ರಲ್ಲಿ ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.ಪ್ರಶಸ್ತಿ ರೇಸ್‌ನಲ್ಲಿ ಶ್ರೀಜೇಶ್‌ ಅವರು ಸ್ಪೇನ್‌ನ ಹಾಕಿಪಟು ಆಲ್ಬರ್ಟೊ ಗಿನೆಸ್‌ ಲೋಪೆಜ್‌ ಮತ್ತು ಇಟಲಿಯ ವುಶು ಆಟಗಾರ ಮೈಕಲ್‌ ಅವರನ್ನು ಹಿಂದಿಕ್ಕಿದರು.

“ಬಹಳ ಖುಷಿಯಾಗುತ್ತಿದೆ. ಮೊದ ಲಾಗಿ ನನ್ನ ಹೆಸರನ್ನು ಈ ಪ್ರತಿಷಿzತ ಪ್ರಶಸ್ತಿಗೆ ಸೂಚಿಸಿದ ಹಾಕಿ ಇಂಡಿಯಾಕ್ಕೆ ಕೃತಜ್ಞತೆಗಳು. ಜತೆಗೆ ವಿಶ್ವದಾದ್ಯಂತ ಇರುವ ಭಾರತದ ಹಾಕಿ ಪ್ರೇಮಿಗಳಿಗೆ, ನನಗೆ ಮತ ಚಲಾಯಿಸಿದವರಿಗೆಲ್ಲ ಧನ್ಯವಾದಗಳು’ ಎಂಬುದಾಗಿ ಶ್ರೀಜೇಶ್‌ ಹೇಳಿದರು.ಶ್ರೀಜೇಶ್‌ ಈ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಭಾರತದ ಏಕೈಕ ಕ್ರೀಡಾಪಟುವಾಗಿದ್ದರು. 2021ರ ಎಫ್‌ಐಎಚ್‌ ಗೋಲ್‌ಕೀಪರ್‌ ಪ್ರಶಸ್ತಿಯೂ ಇವರಿಗೆ ಒಲಿದು ಬಂದಿತ್ತು.ತಂಡದ ನಾಯಕನೂ ಆಗಿದ್ದ ಪಿ.ಆರ್‌. ಶ್ರೀಜೇಶ್‌ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬರಗಾಲ ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರಿಗೆ 1,27,647 ಮತಗಳು ಲಭಿಸಿದವು. ಲೋಪೆಜ್‌ಗೆ 67,428 ಮತ್ತು ಮೈಕಲ್‌ಗೆ 52,046 ಮತಗಳು ಬಂದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskanna

 

 
  
Please follow and like us:

Leave a Reply

Your email address will not be published. Required fields are marked *

Next Post

''RRR'' ಸಿನಿಮಾ ಬಿಡುಗಡೆಗೆ ಮತ್ತೊಂದು ಮುಹೂರ್ತ ಫಿಕ್ಸ್:

Tue Feb 1 , 2022
ಹೈದರಾಬಾದ್ : ರಾಜ್‍ಮೌಳಿ ನಿರ್ದೇಶನದ ಬಹುನೀರಿಕ್ಷಿತ ಆರ್‌ಆರ್‌ಆರ್‌ ಸಿನಿಮಾವನ್ನು ಮಾರ್ಚ್ 25ರಂದು ಬಿಡುಗಡೆ ಮಾಡುವು ದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಕೊರೊನಾ ಕಾರಣದಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಬಂದಿರುವ ಚಿತ್ರ ತಂಡ ಅಧಿಕೃತ ದಿನಾಂಕವನ್ನು ಪ್ರಕಟ ಮಾಡಿದೆ.ಜೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್‌ ಸಿನಿಮಾವು ಜನವರಿ 7ರಂದು ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ.ಈ ಮಧ್ಯೆ ಮಾರ್ಚ್ 18ರಂದು ಆರ್‌ಆರ್‌ಆರ್‌ ಸಿನಿಮಾವನ್ನು ತೆರೆಕಾಣಿಸಲು ಸಜ್ಜಾಗಿದ್ದರು ರಾಜಮೌಳಿ. […]

Advertisement

Wordpress Social Share Plugin powered by Ultimatelysocial