ವಾಟ್ಸ್ ಆಪ್ ಮೂಲಕವೇ ಊಬರ್ ಬುಕ್ ಮಾಡಿ – ಅತೀ ಸುಲಭದಲ್ಲಿ ಮನೆ ಮುಂದೆ ಕ್ಯಾಬ್ ನಿಲ್ಲುತ್ತೆ

ಸ್ಮಾರ್ಟ್‌ ಫೋನ್‌ ಬಂದಾಗಿನಿಂದ ಜನರಿಗೆ ಅದೆಷ್ಟೋ ಕೆಲಸಗಳು ಬಹಳಾನೇ ಸುಲಭವಾಕ್ತಿದೆ. ಮನೆಯಲ್ಲಿಯೇ ಕೂತು ಬಹುತೇಕ ಕೆಲಸಗಳನ್ನ ಆನ್ಲೈನ್‌ ಮೂಲಕ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರ ಸಮಯ ಉಳಿತಾಯವಾಗುತ್ತಿದೆ. ತಂತ್ರಜ್ಞನ ಬೆಳೆಯುತ್ತಿದ್ದಂತೆ ಮನುಷ್ಯನಿಗೆ ತುಂಬಾ ಸಹಕಾರಿಯಾಕ್ತಿದೆ. ಮೊಬೈಲ್‌ನಲ್ಲಿ ಆಪ್‌ ಹಾಕ್ಕೋಂಡ್ರೆ ಸಾಕು ಕೇಳಿದ್ದು ಮನೆಬಾಗಿಲಿಗೆ ಬರುತ್ತೆ. ಇಂತಹ ಸೇವೆಗಳಲ್ಲಿ ಉಬರ್‌ ಕೂಡಾ ಒಂದು.ಉಬರ್‌ ಆಪ್‌ನಲ್ಲಿ ಕ್ಯಾಬ್‌, ಆಟೋಗಳನ್ನ ಮನೆಯಲ್ಲೇ ಕೂತು ಬುಕ್‌ ಮಾಡಬಹುದು. ನಗರ ಪ್ರದೇಶದ ಜನರ ಓಡಾಟಕ್ಕೆ ಸುಲಭವಾಗಲಿ ಎಂದು ಉಬರ್ ಸಂಸ್ಥೆ ಕ್ಯಾಬ್ ಸೇವೆಯನ್ನು ನೀಡುತ್ತಿದೆ. ಇದೀಗ ಕಂಪನಿ ಜನರಿಗೆ ಮತ್ತಷ್ಟು ಅನುಕೂಲವಾಗಲಿ ಎಂದು ವಾಟ್ಸ್ಆ್ಯಪ್ ಮೂಲಕ ರೈಡಿಂಗ್ ಬುಕ್ ಮಾಡುವ ಫೀಚರ್ಸ್ ಅನ್ನು ಹೊರತಂದಿದೆ.

ಹಾಗಾದ್ರೆ ವಾಟ್ಸ್‌ ಆಪ್‌ನಲ್ಲಿ ಹೇಗೆ ಊಬರ್‌ ಬುಕ್‌ ಮಾಡೋದು ಅನ್ನೋದನ್ನ ನೋಡೋಣ

WhatsApp ಬಳಕೆದಾರರು ಮೂರು ರೀತಿಯಲ್ಲಿ Uber ರೈಡ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಮೊದಲಿಗೆ, ಅವರು Uber ನ ವ್ಯವಹಾರ ಖಾತೆ ಸಂಖ್ಯೆಗೆ ಸಂದೇಶ ಕಳುಹಿಸಬಹುದು. ನಂತರ ಅವರು QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಆ ಬಳಿಕ Uber WhatsApp ಚಾಟ್ ಅನ್ನು ತೆರೆಯಲು ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.

ಆದರೆ Uber ಇನ್ನೂ ಆ WhatsApp ಸಂಖ್ಯೆಯನ್ನು ನಿರ್ದಿಷ್ಟಪಡಿಸಿಲ್ಲ. WhatsApp ನಲ್ಲಿ Uber ನೊಂದಿಗೆ ಚಾಟ್ ಪ್ರಾರಂಭಿಸುವ ಗ್ರಾಹಕರು ನಂತರ ಪಿಕಪ್ ಮತ್ತು ಡ್ರಾಪ್-ಆಫ್ ಸ್ಥಳಗಳನ್ನು ಒದಗಿಸಲು ಕೇಳಲಾಗುತ್ತದೆ. ಬಳಕೆದಾರರು ವಾಟ್ಸ್ಆ್ಯಪ್ ಮೂಲಕವೇ ಚಾಲಕನ ಆಗಮನದ ನಿರೀಕ್ಷಿತ ಸಮಯವನ್ನು ದರದೊಂದಿಗೆ ಸ್ವೀಕರಿಸುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022: 'ನಾಯಕ' ಹಾರ್ದಿಕ್ ಪಾಂಡ್ಯ ಅವರ ಪೋಸ್ಟ್ಗೆ ರಶೀದ್ ಖಾನ್ ಹೊಗಳಿಕೆಯ ಕಾಮೆಂಟ್;

Mon Feb 7 , 2022
ಅಹಮದಾಬಾದ್ ಮತ್ತು ಲಕ್ನೋ ಐಪಿಎಲ್‌ಗೆ ಸೇರ್ಪಡೆಯಾದ ಎರಡು ಹೊಸ ತಂಡಗಳಾಗಿವೆ. ಹಾರ್ದಿಕ್ ಮತ್ತು ರಶೀದ್ ಇಬ್ಬರೂ ಈ ವರ್ಷ ಅಹಮದಾಬಾದ್‌ಗಾಗಿ ಆಡಲು ಸಿದ್ಧರಾಗಿದ್ದಾರೆ ಮತ್ತು ಹಾರ್ದಿಕ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 15 ನೇ ಆವೃತ್ತಿಯು ಮಾರ್ಚ್ ಕೊನೆಯ ವಾರದಿಂದ ಪ್ರಾರಂಭವಾಗಲಿದೆ ಆದರೆ ಅದರ ಸುತ್ತಲಿನ ಉತ್ಸಾಹ ಮತ್ತು ಝೇಂಕಾರವು ಈಗಾಗಲೇ ಅಭಿಮಾನಿಗಳನ್ನು ತೆಗೆದುಕೊಂಡಿದೆ. ಎರಡು ಹೊಸ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ, ಐಪಿಎಲ್ ದೊಡ್ಡದಾಗುತ್ತಿದೆ ಮತ್ತು ಥ್ರಿಲ್ […]

Advertisement

Wordpress Social Share Plugin powered by Ultimatelysocial