ರಾಯಚೂರು: 14 ಲಕ್ಷ ಪುಟಗಳ ದಾಖಲೆಗಳು ಡಿಜಿಟಲೀಕರಣ; ಜಿಲ್ಲಾಡಳಿತದ ಕಾರ್ಯ ಕರ್ನಾಟಕಕ್ಕೆ ಮಾದರಿ

ಸದ್ಯ ರಾಯಚೂರು, ದೇವದುರ್ಗ, ಸಿರವಾರ ಹಾಗೂ ಮಾನವಿ ತಾಲೂಕುಗಳ ದಾಖಲೆಗಳ ಸ್ಕ್ಯಾನ್ ಮಾಡಿದ್ದು, ಕೆಟಿಟಿಪಿ ಕಾಯ್ದೆ ಅನುಸಾರ ಇ- ಟೆಂಡರ್ ಮೂಲಕ ಡಿಜಿಟಲೀಕರಣ ಮಾಡಲಾಗಿದೆ.ರಾಯಚೂರು: ಇಲ್ಲಿನ ಜಿಲ್ಲಾಡಳಿತ ಕೈಗೊಂಡಿರುವ ಡಿಜಿಟಲೀಕರಣ ಕಾರ್ಯ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದೆ.

ಡಿಜಿಟಲೀಕರಣದ ಮೂಲಕ 80- 90 ವರ್ಷ ಹಳೆಯ ದಾಖಲೆಗಳಿಗೆ ಮರುಜೀವ ಕೊಡಲಾಗಿದೆ. ಸುಮಾರು 14 ಲಕ್ಷ ಪುಟಗಳ ದಾಖಲೆಗಳು ಡಿಜಿಟಲೀಕರಣ ಮಾಡಲಾಗಿದೆ. ರಾಯಚೂರಿನ ಸಹಾಯಕ ಆಯುಕ್ತ ರಜನಿಕಾಂತ್ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಒಂದು ದಾಖಲೆಗಾಗಿ 3-4 ತಿಂಗಳು ಅಲೆಯೋ ಸ್ಥಿತಿ ಮಾಯವಾಗಿ, ಇದೀಗ ಒಂದೇ ನಿಮಿಷದಲ್ಲಿ ಎಲ್ಲಾ ಡಾಕ್ಯುಮೆಂಟ್ ಸಿಗುವಂತೆ ಮಾಡಲಾಗಿದೆ. ಸದ್ಯ ರಾಯಚೂರು, ದೇವದುರ್ಗ, ಸಿರವಾರ ಹಾಗೂ ಮಾನವಿ ತಾಲೂಕುಗಳ ದಾಖಲೆಗಳ ಸ್ಕ್ಯಾನ್ ಮಾಡಿದ್ದು, ಕೆಟಿಟಿಪಿ ಕಾಯ್ದೆ ಅನುಸಾರ ಇ- ಟೆಂಡರ್ ಮೂಲಕ ಡಿಜಿಟಲೀಕರಣ ಮಾಡಲಾಗಿದೆ.

ದಶಕದ ಹಳೆ ದಾಖಲೆಗಳಾಗಿರುವ ಕೃಷ್ಣಾ ಮೇಲ್ಡಂಡೆ ಯೋಜನೆ (ಯುಕೆಪಿ), ತುಂಗಾಭದ್ರಾ ಯೋಜನೆ, ಒಟ್ಟು 14 ಲಕ್ಷ ಪುಟಗಳನ್ನು ಸ್ಕ್ಯಾನಿಂಗ್ ಮೂಲಕ ಡಿಜಿಟಲೀಕರಣ ಮಾಡಿದ್ದಾರೆ. ಬಳಿಕ ಸಾಫ್ಟ್ ಕಾಫಿ ಕೂಡ ಕಂಪ್ಯೂಟರ್​ಗಳಿಗೆ ಅಳವಡಿಕೆ ಆಗಿದೆ. ಇನಾಂ ಭೂಮಿ, ಭೂಸ್ವಾಧೀನ ದಾಖಲೆಗಳು, ಭೂ ವಿವಾದ ವ್ಯಾಜ್ಯಗಳ ದಾಖಲೆಗಳ ಡಿಜಿಟಲೀಕರಣ ಆಗಿದೆ.

ಜೊತೆಗೆ ರೆಕಾರ್ಡ್ ರೂಂನಲ್ಲಿ ಮೂಲ ದಾಖಲೆಗಳನ್ನು ಬಂಡಲ್ ಗಳಲ್ಲಿ ಸಂಗ್ರಹಣೆ ಮಾಡಲಾಗಿದೆ. 80-90 ವರ್ಷದ ದಾಖಲೆಗಳ ನಂಬರ್ ಬರೆದು ಬಂಡಲ್ ಗಳಲ್ಲಿ ಜೋಡಣೆ ಮಾಡಲಾಗಿದೆ. ಹಾರ್ಡ್ ಕಾಪಿ ಕೂಡ ಸುಲಭವಾಗಿ ಸಿಗುವಂತೆ ಜೋಡಿಸಲಾಗಿದೆ. ಕೇವಲ ಸರ್ವೇ ನಂಬರ್ ಎಂಟ್ರಿ ಮಾಡಿದರೆ ಇಡೀ ದಾಖಲೆ ಕೈಗೆಟುಕುವಂತೆ ಹಾಗೂ ಕಂಪ್ಯೂಟರ್ ನಲ್ಲಿ ನಂಬರ್ ಉಲ್ಲೇಖಿಸಿದರೇ, ಇಡೀ ಸಾಫ್ಟ್ ಕಾಪಿ ಲಭ್ಯ ಆಗುವಂತೆ ಜೋಡಣೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಂಬೈ ನಂತರ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ!

Wed Mar 2 , 2022
ನೈಟ್ ಫ್ರಾಂಕ್‌ನ ವೆಲ್ತ್ ವರದಿಯ ಪ್ರಕಾರ, ಹೈದರಾಬಾದ್ 2021 ರಲ್ಲಿ 467 ಅತಿ ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳಿಗೆ (UHNWIs, USD 30 ಮಿಲಿಯನ್ (ರೂ. 225 ಕೋಟಿಗಿಂತ ಹೆಚ್ಚು) ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದೊಂದಿಗೆ) ನೆಲೆಯಾಗಿದೆ, ಇದು ಭಾರತದಲ್ಲಿ ಎರಡನೇ ಅತಿ ಹೆಚ್ಚು ಮುಂಬೈ ನಂತರ(1,596 UHNWIಗಳು), ಮತ್ತು ಬೆಂಗಳೂರು ಮತ್ತು ಪುಣೆಗಿಂತ ಹೆಚ್ಚು ಮುಂದಿದೆ. ರಲ್ಲಿ ಅತಿ ಶ್ರೀಮಂತ ಜನಸಂಖ್ಯೆ ಹೈದರಾಬಾದ್ ನಿರೀಕ್ಷಿಸಲಾಗಿದೆ 2026 ರ ವೇಳೆಗೆ […]

Advertisement

Wordpress Social Share Plugin powered by Ultimatelysocial