ಸಾಲು ಸಾಲು BMTC Busಗಳು ಬೆಂಕಿಗಾಹುತಿ: ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳಲು ಇದೇ ಕಾರಣ!

ಕಳೆದ ಕೆಲ ತಿಂಗಳಿನಿಂದ ಬೆಂಗಳೂರಿ (Bengaluru)ನಲ್ಲಿ ಬಿಎಂಟಿಸಿ ಬಸ್ (BMTC Bus) ಗಳು ಬೆಂಕಿಗೆ (Fire Accident) ಆಹುತಿಯಾಗುತ್ತಿವೆ. ಆದ್ರೆ ಚಾಲಕರ (Drivers) ಸಮಯ ಪ್ರಜ್ಞೆಯಿಂದಾಗಿ ಪ್ರಾಣಹಾನಿ ಸಂಭವಿಸಿಲ್ಲ. ಈ ಸಂಬಂಧ ಅನಾಹುತಕ್ಕೆ ಕಾರಣಗಳನ್ನು ತಿಳಿಯಲು ಬಿಎಂಟಿಸಿ (BMTC) ತನಿಖೆ (Investigation) ನಡೆಸಿತ್ತು.
ಇದೀಗ ಬಿಎಂಟಿಸಿ ಕೈಗೆ ತನಿಖಾ ವರದಿ (Investigation Report) ಸೇರಿದೆ. ಈ ವರದಿಯಲ್ಲಿ ಬಸ್ ಗಳಲ್ಲಿ ದಿಢೀರ್ ಬೆಂಕಿ ಯಾಕೆ ಕಾಣಿಸಿಕೊಂಡಿದೆ ಎಂಬುದರ ಮಾಹಿತಿ ಹೊರ ಬಂದಿದೆ. ಅಶೋಕ್ ಲೈಲೆಂಡ್ ಕಂಪನಿ ತಜ್ಞರು ಮತ್ತು ಬಿಎಂಟಿಸಿ ಅಧಿಕಾರಿಗಳ ನೇತೃತ್ವದಲ್ಲಿ ಈ ತನಿಖೆ ನಡೆದಿತ್ತು.
ಬಸ್ ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳೋಕೆ ವಿನ್ಯಾಸ ದೋಷವೇ ಕಾರಣ ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಅಶೋಕ್ ಲೈಲೆಂಡ್ ಕಂಪನಿಯ ಸುಮಾರು 189 ಬಸ್ ಗಳು ಬಿಎಂಟಿಸಿಯಲ್ಲಿವೆ. 9 ಮೀಟರ್ ಉದ್ದದ ಮಿನಿ ಬಸ್ ನಲ್ಲಿ ಈ ಹಿಂದೆ ಬೆಂಕಿ ಕಾಣಿಸಿಕೊಂಡಿತ್ತು.

ವಿನ್ಯಾಸ ದೋಷವೇ ಕಾರಣ
ಬಸ್ ನ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇರೋದು ಬೆಂಕಿ ಹತ್ತಿಕೊಳ್ಳಲು ಕಾರಣ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಸ್ಟಾರ್ಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ತಕ್ಷಣವೇ ಡಿಸೇಲ್ ಪೈಪ್ ಗೆ ಕಿಡಿ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ದೊಡ್ಡ ಬಸ್ ಗಳಲ್ಲಿ ಪ್ರತ್ಯೇಕವಾಗಿ ಕೇಬಲ್ ಗಳು ಇರಲಿವೆ. ಮಿನಿ ಬಸ್ ಆಗಿರೋದ್ರಿಂದ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇಡಲಾಗಿದೆ. ಈ ವಿನ್ಯಾಸ ದೋಷವೇ ಬೆಂಕಿ ಹತ್ತಿಕೊಳ್ಳಲು ಕಾರಣ.

ಎಚ್ಚೆತ್ತ ಬಿಎಂಟಿಸಿ ತಾಂತ್ರಿಕ ವಿಭಾಗ
ಸಾಲು ಸಾಲು ಬಸ್ ಗಳು ಬೆಂಕಿಗೆ ಆಹುತಿ ಆಗುತ್ತಿರೋದರಿಂದ ಬಿಎಂಟಿಸಿ ತಾಂತ್ರಿಕ ವಿಭಾಗ ಎಚ್ಚೆತ್ತುಕೊಂಡಿದೆ. ಇದೀಗ ವಿನ್ಯಾಸ ಬದಲಾವಣೆ ಬಿಎಂಟಿಸಿ ಮುಂದಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ತನ್ನ ಬಳಿಯಲ್ಲಿರುವ 189 ಮಿನಿ ಬಸ್ ಗಳಲ್ಲೂ ವಿನ್ಯಾಸ ಬದಲಾವಣೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ.
ಈಗಾಗಲೇ 40 ಬಸ್ ಗಳ ವಿನ್ಯಾಸ ಬದಲಾವಣೆ ಮಾಡಿ ವಾಹನಗಳನ್ನು ರಸ್ತೆಗೆ ಇಳಿಸಿದೆ. 2014 ರಲ್ಲಿ ಬಿಎಂಟಿಸಿ ಮಿನಿ ಬಸ್ ಗಳನ್ನ ಖರೀದಿ ಮಾಡಿತ್ತು.

ಪ್ರಯಾಣಿಕರ ಆತಂಕ ದೂರ ಮಾಡಿದ ಬಿಎಂಟಿಸಿ
ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ ಗಳು ಬೆಂಕಿಗೆ ತುತ್ತಾಗುತ್ತಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ತಾವು ದಿನನಿತ್ಯ ಪ್ರಯಾಣ ಮಾಡುತ್ತಿರುವ ಬಸ್ ಗಳು ಎಷ್ಟು ಸುರಕ್ಷಿತ ಅನ್ನೊ ಪ್ರಶ್ನೆ ಮೂಡಿತ್ತು. ಪ್ರಯಾಣಿಕರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಬಿಎಂಟಿಸಿ ತನಿಖೆ ನಡೆಸಿ, ಬಸ್ ಗಳ ವಿನ್ಯಾಸ ಬದಲಿಸಲು ಮುಂದಾಗಿದೆ.

ನಡುರಸ್ತೆಯಲ್ಲಿಯೇ ಹೊತ್ತಿ ಉರಿದ ಬಸ್ ಗಳು
ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟ ಸರ್ಕಲ್ ಬಳಿ, ಫೆಬ್ರವರಿ 1 ರಂದು ಜಯನಗರ ಸೌತ್ ಎಂಡ್ ಸರ್ಕಲ್ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಎರಡು ಬಿಎಂಟಿಸಿ ಬಸ್​​ ಗಳು ಪ್ರಯಾಣಿಕರನ್ನ ಹೊತ್ತು ಸಾಗುತ್ತಿರುವಾಗಲೇ ಧಗಧಗ ಹೊತ್ತಿ ಉರಿದಿದ್ದವು. ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ನಡುರಸ್ತೆಯಲ್ಲೇ ಬಸ್ಸುಗಳು ಹೊತ್ತಿ ಉರಿದಿದ್ದವು.
ಚಾಲಕ ಮತ್ತು ನಿರ್ವಾಹಕರ, ಸಾರ್ವಜನಿಕರ ಸಮಯ ಪ್ರಜ್ಞೆ ಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲಿಲ್ಲ. ಬಸ್ಸುಗಳಿಗೆ ಮಾತ್ರ ಬೆಂಕಿ ಕೆನ್ನಾಲಿಗೆಗೆ ಉರಿದು ಸುಟ್ಟು ಕರಕಲಾಯಿತು. 11 ದಿನಗಳ ಅಂತರದಲ್ಲೇ ಈ ಎರಡು ಘಟನೆಗಳು ಸಂಭವಿಸಿದ ಹಿನ್ನೆಲೆ ಸಹಜವಾಗೇ ಬಿಎಂಟಿಸಿ ಪ್ರಯಾಣಿಕರಲ್ಲಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಬಗ್ಗೆ ಆತಂಕ ಮೂಡಿಸಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾರುಖ್ ಖಾನ್ ಅವರ ಜೇಮ್ಸ್ ಬಾಂಡ್ ಕ್ಯಾರೆಕ್ಟರ್ ಸರಿಯಾದ ಆಯ್ಕೆಯಾಗಿದೆ!!

Sat Feb 26 , 2022
ಶಾರುಖ್ ಖಾನ್ ಅವರ ಜೇಮ್ಸ್-ಬಾಂಡ್ ರೀತಿಯ ಪಾತ್ರವು ಸರಿಯಾದ ಆಯ್ಕೆಯಾಗಿದೆ. ಪಾನೀಯ ಬ್ರಾಂಡ್‌ಗಾಗಿ ಶಾರುಖ್ ಖಾನ್ ಅವರ ಇತ್ತೀಚಿನ ಜಾಹೀರಾತು ಇಂಟರ್ನೆಟ್ ಅನ್ನು ಬಿರುಗಾಳಿಯಿಂದ ತೆಗೆದುಕೊಂಡಿದೆ. ಆನಂದ್ ಎಲ್ ರೈ ಅವರ ಝೀರೋ ಸೋಲಿನ ನಂತರ, ಅಭಿಮಾನಿಗಳು ತಮ್ಮ ನೆಚ್ಚಿನ ಎಸ್‌ಆರ್‌ಕೆ ಅವರ ಗ್ಲಿಂಪ್ಸ್‌ಗಳನ್ನು ಪರದೆಯ ಮೇಲೆ ನೋಡಲು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಆದರೆ ಅವರು ದೊಡ್ಡ-ಬಜೆಟ್ ಚಿತ್ರದೊಂದಿಗೆ ಹಿಂದಿರುಗುವ ಮೊದಲು, ಅವರು ತಮ್ಮ ಅಭಿಮಾನಿಗಳನ್ನು ಸಂಪೂರ್ಣವಾಗಿ ವಿಸ್ಮಯಗೊಳಿಸುವಂತಹ ಜಾಹೀರಾತಿನೊಂದಿಗೆ […]

Advertisement

Wordpress Social Share Plugin powered by Ultimatelysocial