ಮೈಸೂರು: ಇತಿಹಾಸದ ಪುಟ ಸೇರಿದ ಕರ್ನಾಟಕದ ಮೊದಲ ಮಹಿಳಾ ಕನ್ನಡ ಶಾಲೆ

ಮೈಸೂರು, ಫೆಬ್ರವರಿ 8: ಕಳೆದ 15 ವರ್ಷಗಳಿಂದ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸ್ವಾಮಿ ವಿವೇಕನಾಂದರ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ವಿವಾದಿತ ಪ್ರದೇಶವಾಗಿದ್ದ ಎನ್‍ಟಿಎಂಎಸ್ ಶಾಲೆಯ ಕಟ್ಟಡವನ್ನು ಸೋಮವಾರ ರಾತ್ರೋರಾತ್ರಿ ಧ್ವಂಸ ಮಾಡಲಾಗಿದೆ. ಈ ಮೂಲಕ ಕರ್ನಾಟಕ ಮೊದಲ ಮಹಿಳಾ ಕನ್ನಡ ಶಾಲೆ ಇತಿಹಾಸ ಪುಟ ಸೇರಿದಂತಾಗಿದೆ.ರಾಜ್ಯ ಸರ್ಕಾರ ವಿವಾದಿತ ಮಹಿಳಾ ಕನ್ನಡ ಶಾಲೆಯ ಜಾಗವನ್ನು ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು. ಇದನ್ನು ಕೆಲ ಸಂಘಟನೆಗಳು ಪ್ರಶ್ನಿಸಿ ಹೈಕೋರ್ಟ್‌ಗೆ ದಾವೆ ಹೂಡಿದ್ದವು. ಹೈಕೋರ್ಟ್‌ನಲ್ಲಿ ರಾಮಕೃಷ್ಣ ಆಶ್ರಮದ ಪರ ತೀರ್ಪು ಬಂದಿತ್ತು. ಹೀಗಾಗಿ ಒಂದು ವಾರದ ಹಿಂದೆ ಶಾಲೆಯನ್ನು ಪಕ್ಕದ ಮಹಾರಾಣಿ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು.ಸೋಮವಾರ ಇಡೀ ರಾತ್ರಿ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್, 5 ಸರ್ಕಲ್ ಇನ್ಸ್‌ಪೆಕ್ಟರ್ ಸೇರಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ.ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಕಟ್ಟಡವನ್ನು 4 ಹಿಟಾಚಿ, 3 ಜೆಸಿಬಿಗಳಿಂದ ಕಟ್ಟಡ ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ತಡೆಯಲು ಬಂದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರನ್ನು ಬಂಧಿಸಲಾಗಿದೆ. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಾಣವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದೂ ಅಭಿಮಾನ ಮತ್ತು ಮುಸ್ಲಿಮರ ಭಯ ಯುಪಿ ಅಸೆಂಬ್ಲಿ ಚುನಾವಣೆಯನ್ನು ಆವರಿಸಿದೆ;

Wed Feb 9 , 2022
ಉತ್ತರ ಪ್ರದೇಶದಲ್ಲಿ ಮರುಚುನಾವಣೆ ಪಡೆಯಲು ಬಿಜೆಪಿಯು ಈಗ ಭಾರತದ ಬಹುಮತದ ನಂಬಿಕೆಯ ಪಾಲಕನಾಗಿ ತನ್ನನ್ನು ತಾನು ರೂಪಿಸಿಕೊಳ್ಳುವ ಪ್ರಯತ್ನಗಳಲ್ಲಿ ತೊಡಗಿದೆ. ಅಯೋಧ್ಯಾ: ಮೂರು ದಶಕಗಳ ಹಿಂದೆ ಧಾರ್ಮಿಕ ಮತಾಂಧರಿಂದ ಐತಿಹಾಸಿಕ ಮಸೀದಿಯನ್ನು ಕೆಡವಲಾಯಿತು — ಸಾವಿರಾರು ಜನರನ್ನು ಕೊಂದ ಅಂತರ-ಧರ್ಮದ ಗಲಭೆಗಳನ್ನು ಪ್ರಚೋದಿಸುವ ಅಯೋಧ್ಯೆಯಲ್ಲಿ ಭಾರತದಾದ್ಯಂತದ ಹಿಂದೂ ಆರಾಧಕರು ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆ ಮಾಡಲು ಸೇರುತ್ತಾರೆ.   ಶತಮಾನಗಳಷ್ಟು ಹಳೆಯದಾದ ಬಾಬರಿ ಮಸೀದಿಯ ಧ್ವಂಸವು ದೇಶದ ಜಾತ್ಯತೀತ ಅಡಿಪಾಯವನ್ನು ಅಲುಗಾಡಿಸಿತು […]

Advertisement

Wordpress Social Share Plugin powered by Ultimatelysocial