ಬಿಜೆಪಿ ಮುಖಂಡರಿಂದ 2023ರ ಚುನಾವಣೆಯ ಪೂರ್ವಭಾವಿ ಹಾಗೂ ಆತ್ಮಾವಲೋಕನ ಸಭೆ ನಡೆಯಿತು.

 

ಸಭೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಬಿಜೆಪಿ ಮುಖಂಡರು ಹಾಗೂ ಅಭ್ಯರ್ಥಿ ಆಕಾಂಕ್ಷಿಗಳು ಭಾಗವಹಿಸಿದ್ದರು.
ಮುಂಬರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಮತ್ತು ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿ ಶತಾಯುಗದಾಯ ಬಿಜೆಪಿ ಗೆಲ್ಲಿಸಲೇಬೇಕು ಎಂದು ಪಣತೊಟ್ಟ ಮುಖಂಡರು.
65 ರಿಂದ 70,000 ಮತಗಳು ಬಿಜೆಪಿಗೆ ಕಟ್ಟಿಟ್ಟ ಬುತ್ತಿಯಾಗಿದ್ದು ಉಳಿದ ಅಲ್ಪಸ್ವಲ್ಪ ಮತಗಳನ್ನು ಸೆಳೆಯುವತ್ತಾ ಗಮನಹರಿಸಿ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲೇಬೇಕು ಎಂದು ಸಭೆಯಲ್ಲಿ ಒಕ್ಕೂರಲಿನಿಂದ ತೀರ್ಮಾನಗೊಂಡ ಕಮಲ ಕಲಿಗಳು.
ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಸರಿಯಾದ ನಾಯಕತ್ವವಿಲ್ಲದೆ ಮೂರು ಚುನಾವಣೆಯಿಂದ ಎಡವಿ ಕಾರ್ಯಕರ್ತರ ಭವಿಷ್ಯ ಹಾಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಮುಖಂಡರು.
ಹಾಗಾಗಿ ಈ ಬಾರಿ ಯಾರೇ ಹೊರಗಿನ ಅಭ್ಯರ್ಥಿಗಳನ್ನು ಕರೆತರದೆ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ನೀಡಿ ಯಾರೇ ಅಭ್ಯರ್ಥಿಯಾದರು ಒಗ್ಗಟ್ಟಾಗಿ ದುಡಿದು ನಮ್ಮಲೊಬ್ಫ ನಾಯಕನನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಎಂಬ ತೀರ್ಮಾನಕ್ಕೆ ಬಂದ ಪಕ್ಷದ ಮುಖಂಡರು.
2023ರ ಚುನಾವಣೆಗೆ ವರುಣ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾದ ಜಿಲ್ಲಾ ಪಂಚಾಯಿತಿ ಮಾಜಿ ಮಾಜಿ ಅಧ್ಯಕ್ಷರಾಗಿದ್ದ ಕೆ ಏನ್ ಪುಟ್ಟ ಬುದ್ಧಿ ಅವರ ಪುತ್ರ ಶರತ್ ಹಾಗೂ ಶಿವಣ್ಣ ಕುಪ್ಪರವಳ್ಳಿ ಮಾತನಾಡಿ
ನಾವು ಸೇರಿದಂತೆ ಇನ್ನೂ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದರೂ ಹೈಕಮಾಂಡ್ ಯಾರಿಗೆ ಸೂಚಿಸುತ್ತಾರೋ ಅವರಿಗೆ ನಮ್ಮ ತನು ಮನ ಧನ ನೀಡಿ ಬೆಂಬಲ ಸೂಚಿಸುತ್ತೇವೆ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಈ ಬಾರಿ ಬಿಜೆಪಿ ಬಾವುಟ ಹಾರಿಸಿ ನಮ್ಮ ಶಾಸಕರನ್ನು ಆಯ್ಕೆ ಮಾಡಿಕೊಳ್ಳುವ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಬಿ ಎನ್ ಸದಾನಂದ ಮತ್ತು ಮಮತಾ ಶಿವಪ್ರಸಾದ್ ಸಭೆಯ ಆಯೋಜಕರಾದ ಹದಿನಾರು ಸತೀಶ್ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ರಮ್ಯಾ ಸಿನಿಮಾಗೆ ಸಂಕಷ್ಟ – ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಇಲ್ಲ

Tue Dec 13 , 2022
  ಬಹಳ ವರ್ಷಗಳ ಬಳಿಕ ಸ್ಯಾಂಡಲ್ವುಡ್‌ ಕ್ವೀನ್‌ ರಮ್ಯಾ ಮತ್ತೆ ಚಂದನವನಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ತಮ್ಮದೇ ಒಂದು ಹೊಸ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಚಿತ್ರ ನೀಡೋದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಆ ಚಿತ್ರದ ಹೆಸರನ್ನ ಕೂಡ ಅನೌನ್ಸ್‌ ಮಾಡಿದ್ದರು. ಕಳೆದ ಅ.5ರಂದು ರಮ್ಯಾ ತಮ್ಮ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯಡಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವುದರ ಬಗ್ಗೆ ಘೋಷಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ […]

Advertisement

Wordpress Social Share Plugin powered by Ultimatelysocial