ಗೂಳಿಪುರ ಗ್ರಾಮದ ಶ್ರೀ.ವಿ.ಮಹಾಂತ ದೇವರ ಸರ್ಕಾರಿ ಪ್ರೌಢ ಶಾಲೆ.

ಗೂಳಿಪುರ ಗ್ರಾಮದ ಮಹಾಂತದೇವರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದಿಂದ ನಡೆದ ಕಲಿಕಾ ಹಬ್ಬ….

ಚಾಮರಾಜನಗರ ತಾಲ್ಲೂಕಿನ
ಗೂಳಿಪುರ ಗ್ರಾಮದ ಶ್ರೀ.ವಿ.ಮಹಾಂತ ದೇವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ, ಸಮೂಹ ಸಂಪನ್ಮೂಲ ಕೇಂದ್ರ ಕಾಗಲವಾಡಿ ಇವರ ಸಂಯುಕ್ತಶ್ರಯದಲ್ಲಿ ಕಲಿಕಾ ಹಬ್ಬವನ್ನು ನಡೆಸಲಾಯಿತು…..

ಬೆಳಿಗ್ಗೆ ಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಶ ಒತ್ತು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಸಂಭ್ರಮಿಸಿದರು.ಯುವಕರು ನೃತ್ಯ ಮಾಡುವ ಮೂಲಕ ಹಾಗೂ ಮಕ್ಕಳು ತಯಾರಿಸಿದ ನಂದಿಕಂಬ ಕುಣಿತವು ಕಲಿಕಾ ಹಬ್ಬಕ್ಕೆ ಮೆರಗು ತಂದಿತು….

ನಂತರ ಶಾಲೆಯ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ
ಬಿ.ಆರ್.ಸಿ. ರಾಜೀವ್ ರವರು ಮಾತನಾಡಿ ಹಾಡು ಕಥೆ ಪರಿಸರ ಅಧ್ಯಯನ,ಸಮುದಾಯದ ಜ್ಞಾನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಅತ್ಯಂತ ಸಂತಸದಾಯಕವಾಗಿ ಕಲಿಕಾ ಹಬ್ಬದಲ್ಲಿ ಕೈಗೊಳ್ಳಲಾಗುತ್ತದೆ‌…

ಕ್ಲಸ್ಟರ್ ಮತ್ತು ಜಿಲ್ಲಾ ಹಂತದಲ್ಲಿ ಕಲಿಕಾ ಹಬ್ಬವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ,

ಕಲಿಕಾ ಹಬ್ಬವನ್ನು ಪೋಷಕರು ನೋಡುವುದರಿಂದ ಶಾಲೆಯ ಸಂಬಂಧ ಗಟ್ಟಿಗೊಳ್ಳುತ್ತದೆ.
ಈ ಕಾರ್ಯಕ್ರಮದ ನಿರಂತರತೆಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನವಾಗಿ ಕಲಿಕಾ ಹಬ್ಬ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕರು,ಜನಪ್ರತಿನಿದಿನಗಳು, ವಿದ್ಯರ್ಥಿಗಳು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಕಾಶ್ಮೀರಿ ಪಂಡಿತರ ನಿಯೋಗ.

Mon Jan 23 , 2023
ಕಾಶ್ಮೀರಿ ಪಂಡಿತರ ನಿಯೋಗವು ಸೋಮವಾರ ಸಾಂಬಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿತು ಮತ್ತು ಭಯೋತ್ಪಾದಕರ ‘ಉದ್ದೇಶಿತ ಹತ್ಯೆಗಳು’ ಮತ್ತು ಪ್ರಧಾನ ಮಂತ್ರಿಯ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುವವರ ಪ್ರತಿಭಟನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರಿಗೆ ವಿವರಿಸಿದರು. ಜಮ್ಮು: ಕಾಶ್ಮೀರಿ ಪಂಡಿತರ ನಿಯೋಗವು ಸೋಮವಾರ ಸಾಂಬಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ […]

Advertisement

Wordpress Social Share Plugin powered by Ultimatelysocial