ಹ್ಯಾಂಡ್ಸಮ್‌ HUNK ಮಹೇಶ್‌ ಬಾಬು LOVES ಕ್ಲಾಸಿ ಬ್ಯೂಟಿ ನಮ್ರತಾ ಶಿರೋಡ್ಕರ್

ಬಾಲಿವುಡ್​ನಲ್ಲಿ ಸ್ಟಾರ್​ ನಟರ ಜೊತೆ ಸಿನಿಮಾಗಳಲ್ಲಿ ನಟಿಸಿದ್ದ ನಟಿ ನಮ್ರತಾ ಶಿರೋಡ್ಕರ್ ತೆಲುಗಿನಲ್ಲೂ ಅಭಿನಯಿಸಿದ್ದಾರೆ. ಮಹೇಶ್​ ಬಾಬು ಜೊತೆ ಮದುವೆಯಾದ ನಂತರ ಬಣ್ಣದ ಲೋಕದಿಂದ ದೂರ ಉಳಿದಿದ್ರು. ಬಣ್ಣದ ಲೋಕದಿಂದ ದೂರ ಇದ್ರು ಸಹ ನಮ್ರತಾ ಶಿರೋಡ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ಆದರೆ ಈಗ ಪತಿ ಮಹೇಶ್ ಬಾಬು ಜೊತೆ ನಮ್ರತಾ ಮತ್ತೆ ಬಣ್ಣ ಹಚ್ಚಿದ್ದಾರೆ.

ಹೌದು, ಮಹೇಶ್​ ಬಾಬು ಜೊತೆ ಮದುವೆಗೂ ಮುನ್ನ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ರು. 2000ರಲ್ಲಿ ತೆರೆಗೆ ಬಂದ ‘ವಂಶಿ’ ಸಿನಿಮಾದಲ್ಲಿ ಮಹೇಶ್​ ಬಾಬು ಹಾಗೂ ನಮ್ರತಾ ಜೋಡಿಯಗಿ ತೆರೆ ಮೇಲೆ ಕಾಣಿಸಿಕೊಂಡಿದ್ರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿ, 2005ರಲ್ಲಿ ಇಬ್ಬರೂ ಮದುವೆ ಆದ್ರು. ಆಗಿನಿಂದ ನಮ್ರತಾ ಸಿನಿಮಾರಂಗದಿಂದ ದೂರ ಉಳಿದು ಬಿಟಿದ್ರು.ಮದುವೆ ನಂತರ ಮುದ್ದಾದ  ಇಬ್ಬರು ಮಕ್ಕಳ ಆರೈಕೆಯಲ್ಲಿದ್ದ ನಮ್ರತಾ, ಕೆಲ ಸಮಯದ ಹಿಂದೆ ಮಹೇಶ್​ ಬಾಬು ಹಾಗೂ ಮಕ್ಕಳ ಜೊತೆ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ರು.

ಆದಾದ ನಂತರ ಈಗ ಮತ್ತೆ ನಮ್ರತಾ ಪತಿಗಾಗಿ ರಂಗು ರಂಗಿನ ಬಣ್ಣ ಹಚ್ಚಿದ್ದಾರೆ. ಅದೂ ಕೂಡ ಮಹೇಶ್ ಬಾಬು ಅವರ ಜೊತೆಗಿನ ಫೋಟೋಶೂಟ್​ನಲ್ಲಿ ನಮ್ರತಾ ಸಖತ್ ಕ್ಲಾಸಿ ಬ್ಯೂಟಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ರತಾ ಹಾಗೂ ಮಹೇಶ್ ಬಾಬು ಅವರ ಲೆಟೆಸ್ಟ್​ ಫೋಟೋಶೂಟ್​ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಜೊತೆಗೆ ತಮ್ಮ ಪೊಟೋಗಳನ್ನು ನಮ್ರತಾ ಹಾಗೂ ಮಹೇಶ್ ಬಾಬು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮಹೇಶ್​ ಬಾಬು ಅಭಿನಯದ ಬಹುನಿರೀಕ್ಷಿತ ಸಿನಿಮಾ ಸರ್ಕಾರು ವಾರಿ ಪಾಟ ಇನ್ನೇನು ರಿಲೀಸ್ ಆಗಬೇಕಿದೆ .

 

Please follow and like us:

Leave a Reply

Your email address will not be published. Required fields are marked *

Next Post

 “ಕೈ” ಮತ್ತು “ದಳ” ಅಹಿಂದ ಮತ ಮಂತ್ರ- 2023ರ ಚುನಾವಣೆಯಲ್ಲಿ ಮತ ಸೆಳೆಯಲು “ಕೈ ಮತ್ತು ದಳ” ಭರ್ಜರಿ ಫೈಟ್‌

Tue Oct 5 , 2021
ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದ್ಯಂತ ವಿಧಾನಸಭೆ ಚುನಾವಾಣೆಯಲ್ಲಿ ಹೇಗಾದರು ಮಾಡಿ ಗದ್ದುಗೆ ಯನ್ನು ಏರಲೇ ಬೇಕು ಎಂದು ಕಾಂಗ್ರೆಸ್‌ ಮತ್ತು ಜನತಾ ದಳ ಪಕ್ಷವೂ ಪೈಪೋಟಿ ಈಗಿನಿಂದಲೇ ಶುರುವಾಗಿದೆ. 2023ರಲ್ಲಿ ಅಧಿಕಾರವನ್ನು ಹಿಡಿಯಲೇ ಬೇಕು ಎಂದು ಕಾಂಗ್ರೆಸ್‌ ಒಂದು ಕಡೆ ಪ್ಲಾನ್‌ ಮಾಡಿದರೆ ಮತ್ತೊಂದು ಕಡೆ ಜೆಡಿಎಸ್‌ ಪಕ್ಷವು ಕಾರ್ಯಗಾರ ಸರಣಿ ಸಭೆಗಳಿಂದ ಅಹಿಂದ ಮತಗಳನ್ನು ಸೆಳೆಯಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.ಹಾಗಾದ್ರೆ ಈ ಎರೆಡೂ ಪಕ್ಷಗಳು ಯಾವ ರೀಯಲ್ಲಿ ಮತಗಳನ್ನು […]

Advertisement

Wordpress Social Share Plugin powered by Ultimatelysocial