‘ಸುಖೇಶ್ ನನ್ನ ಭಾವನೆಗಳ ಜೊತೆ ಆಟವಾಡಿಬಿಟ್ಟ’.

ಸುಖೇಶ್​ ಚಂದ್ರಶೇಖರನ ಬಲೆಯಲ್ಲಿ ಸಿಲುಕಿ ವಿಲ ವಿಲ ಅಂತ ಒದ್ದಾಡ್ತಿರೋ ರಕ್ಕಮ್ಮ ನಿನ್ನೆ ಕೋರ್ಟ್​ ಮುಂದೆ ಕಣ್ಣೀರಿಟ್ಟಿದ್ದಾರೆ. ಸುಖೇಶನಿಂದ ಪಡೆದ ಲಗ್ಸುರಿ ಗಿಫ್ಟ್​ಗಳ ಬಗ್ಗೆ ಇಂಚಿಂಚು ಮಾಹಿತಿಯನ್ನ ಕೋರ್ಟ್​ ಮುಂದೆ ಬಹಿರಂಗ ಪಡಿಸಿದ್ದಾರೆ.

ಭಾರತೀಯ ಚಲನಚಿತ್ರರಂಗದಲ್ಲಿ ಮಿರ ಮಿರ ಮಿಂಚುತ್ತ ಅಭಿಮಾನಿಗಳ ಮನದರಸಿಯಾಗಿದ್ದ ಜಾಕ್ವೆಲಿನ್ ಫರ್ನಾಂಡೀಸ್, ಅಕ್ರಮ ಹಣವರ್ಗಾಣೆಯ ಕಿಂಗ್​ ಪಿನ್​ ಸುಖೇಶ್ ಚಂದ್ರಶೇಖರನ ಬಲೆಯಲ್ಲಿ ಸಿಲುಕಿ ವಿಲ ವಿಲ ಅಂತ ಒದ್ದಾಡ್ತಿದ್ದಾರೆ. ಅಕ್ರಮ ಹಣವರ್ಗಾವಣೆಯಲ್ಲಿ ಅಂದರ್​ ಆಗಿರೋ ಸುಖೇಶ್​ ಚಂದ್ರಶೇಖರ್​ ಅತ್ತ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ರೆ, ಇತ್ತ ಆತನ ಬಣ್ಣದ ಪ್ರಪಂಚಕ್ಕೆ ಮಾರು ಹೋಗಿ ಡೇಟಿಂಗ್​, ಚಾಟಿಂಗ್​, ಮೀಟಿಂಗ್​ ಅಂತ ಹಳ್ಳಕ್ಕೆ ಬಿದ್ದಿದ್ದ ಚೆಲುವೆಯರು ಕಣ್ಣಿರಿಡ್ತಿದ್ದಾರೆ. ಸುಖೇಶನ ಬಂಧನದ ಬಳಿಕ ಕೋರ್ಟ್​ ಮೆಟ್ಟಿಲು ಹತ್ತಿ ಇಳಿದು ಹೈರಾಣಾಗಿರೋ ಜಾಕ್ವೆಲಿನ್ ಫರ್ನಾಂಡೀಸ್, ನಿನ್ನೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ ​ಮುಂದೆ ಹಾಜರಾಗಿ ಕಣ್ಣೀರಿಟ್ಟಿದ್ದಾರೆ. ಸುಖೇಶ್ ನನ್ನ ಲೈಫನ್ನೇ ಹಾಳು ಮಾಡಿದ್ದಾನೆ ಅಂತ ಅಳಲು ತೋಡಿಕೊಂಡಿದ್ದಾರೆ.

‘ಸುಖೇಶ್‌ನಿಂದ ನನ್ನ ಜೀವನ ನರಕ’

ಸುಖೇಶ್ ಚಂದ್ರಶೇಖರ್ ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾನೆ. ನನ್ನ ಜೀವನವನ್ನು ನರಕವಾಗಿಸಿದ್ದಾನೆ. ಆತ ನನ್ನನ್ನ ದಾರಿ ತಪ್ಪಿಸಿ, ನನ್ನ ವೃತ್ತಿ ಮತ್ತು ನನ್ನ ಜೀವನೋಪಾಯವನ್ನ ಹಾಳುಮಾಡಿದ್ದಾನೆ. ಪಿಂಕಿ ಇರಾನಿ ಎಂಬಾಕೆ ಸುಖೇಶನನ್ನ ಗೃಹ ಸಚಿವಾಲಯದ ಅಧಿಕಾರಿ ಎಂದು ನನ್ನ ಮೇಕಪ್ ಕಲಾವಿದ ಶಾನ್ ಮುತ್ತತ್ತಿಲ್ ಅವರಿಗೆ ಪರಿಚಯಿಸಿದ್ರು, ಬಳಿಕ ನನಗೆ ಪರಿಚಯವಾಗಿ ಇಬ್ಬರೂ ಮಾತನಾಡಲು ಪ್ರಾರಂಭಿಸಿದ್ದೆವು. ಪಿಂಕಿಗೆ ಶೇಖರ್‌ನ ಚಟುವಟಿಕೆ ಮತ್ತು ಹಿನ್ನೆಲೆಯ ಅರಿವಿದ್ದರು, ಆಕೆ ಇದನ್ನ ನನಗೆ ಬಹಿರಂಗಪಡಿಸಲೇ ಇಲ್ಲ. ಸುಖೇಶ್​ ನನ್ನ ದೊಡ್ಡ ಅಭಿಮಾನಿ ಅಂತ ಹೇಳಿದ್ರು. ಇಬ್ಬರೂ ದಿನಕ್ಕೆ ಕನಿಷ್ಠ ಮೂರು ಬಾರಿ ಕರೆಗಳು ಮತ್ತು ವೀಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದೆವು. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಕರೆ ಮಾಡಿ ಮಾತನಾಡ್ತಿದ್ವಿ. ಕೊನೆಯದಾಗಿ ಆಗಸ್ಟ್ 8, 2021 ರಂದು ಕರೆಯಲ್ಲಿ ಮಾತನಾಡಿದ್ದೆವು.

ಜಾಕ್ವೆಲಿನ್ ಫರ್ನಾಂಡಿಸ್‌, ಬಾಲಿವುಡ್ ನಟಿ

ಸುಖೇಶ್​ ಚಂದ್ರಶೇಖರ್​ ಜೊತೆ ನಂಟು ಹೊಂದಿದ್ದ ಜಾಕ್ವೆಲಿನ್ ಫರ್ನಾಂಡೀಸ್, ಆತನಿಂದ ದುಬಾರಿ ಗಿಫ್ಟ್​ ಹಾಗೂ ಹಣ ಪಡೆದಿರೋದರ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಸುಖೇಶ್​ ನನಗೆ 5 ದುಬಾರಿ ವಾಚ್​, 20 ಬಗೆಯ ಆಭರಣ, 65 ದುಬಾರಿ ಶೂಗಳು, 47 ಜೊತೆ ಕಾಸ್ಲಿ ಬಟ್ಟೆಗಳು, 32 ದುಬಾರಿ ಬ್ಯಾಗ್​, 9 ಪೈಟಿಂಗ್​ಗಳು​, 1 ಮಸಾಜ್​ ಚೇರ್​​ , ದುಬಾರಿ ಹರ್​ಮೆಸ್​ ಬ್ರಾಂಡಿನ 4 ಬ್ಯಾಗ್​ ಹಾಗೂ ದುಬಾರಿ ಪರ್ಶಿಯನ್​ ಬೆಕ್ಕನ್ನ ನನಗೆ ಗಿಫ್ಟ್​ ಆಗಿ ನೀಡಿದ್ದ.

ಸುಖೇಶನಿಂದ ಪಡೆದ ಗಿಫ್ಟ್​ಗಳ ಬಗ್ಗೆ ಇಂಚಿಚು ಮಾಹಿತಿಯನ್ನ ಕೋರ್ಟ್​ ಮುಂದೆ ಬಿಚ್ಚಿಟ್ಟ ಜಾಕ್ವೆಲಿನ್ ಈ ಗಿಫ್ಟ್​ಗಳೆಲ್ಲವೂ ಪಿಂಕಿ ಇರಾನಿ ಮೂಲಕ ಯಾವುದೇ ಬಿಲ್​ ಇಲ್ಲದೆ ನನಗೆ ತಲುಪಿವೆ ಅಂತಾನೂ ತಿಳಿಸಿದ್ದಾಳೆ. ಸುಖೇಶ್​ ಪ್ರಕರಣದಲ್ಲಿ ಜಾಕ್ವೆಲಿನ್ ಆರೋಪಿ ಅಂತ ಕೋರ್ಟ್ ಆಕೆಯ​ ವಿದೇಶಿ ಪ್ರವಾಸಕ್ಕೆ ಸಹ ಬ್ರೇಕ್​ ಹಾಕಿರೋದ್ರಿಂದ ನನಗೆ ವಿದೇಶಿ ಪ್ರವಾಸಕ್ಕೆ ಅನುಮತಿ ಕೊಡಿ, ನೀವು ಕರೆದಾಗ ನಾನು ತಪ್ಪದೇ ವಿಚಾರಣೆಗೆ ಹಾಜರಾಗ್ತೇನೆ ಅಂತ ಗೋಗರೆದಿದ್ದಾರೆ. ಪುಗಸಟ್ಟೆ ಸಿಕ್ತು ಅಂತ ಸುಖೇಶ್​ ಚಂದ್ರಶೇಖರ್​ನಿಂದ ಗಿಫ್ಟ್​ ಪಡೆದಿದ್ದ ಸುಂದರಿ ಈಗ ಕೋರ್ಟ್​ ಮುಂದೆ ಹ್ಯಾಪು ಮೊರೆ ಹಾಕ್ಕೋಂಡು ತಲೆ ತಗ್ಗಿಸಿದ್ದಾರೆ.. ಸುಖೇಶನ ಬಲೆಯಲ್ಲಿ ಬಣ್ಣ ಬಣ್ಣದ ಗಿಫ್ಟ್​ ಪಡೆದ ತಪ್ಪಿಗೆ ರಕ್ಕಮ್ಮ ಮೇಲೆ ಕೋರ್ಟ್ ಅದ್ಯಾವ ಕ್ರಮ ತೆಗೆದುಕೊಳ್ಳುತ್ತೆ ಅಂತ ಕಾದುನೋಡಬೇಕಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ವಾರದಲ್ಲಿ 3 BJP ದಂಡ ನಾಯಕರ ದಂಡಯಾತ್ರೆ.

Thu Jan 19 , 2023
  2023ರ ವಿಧಾನಸಭಾ ಕ್ಷೇತ್ರದ ಚುನಾವಣೆ ದಿನ ಕಳೆದಂತೆ ಕಳೆಗಟ್ಟುತ್ತಿದೆ. ಡಿಸೆಂಬರ್ ಅಂತ್ಯದಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ, ತಿಂಗಳ ಹೊತ್ತಲ್ಲೇ ರಿಟರ್ನ್​ ಆಗ್ತಿದ್ದಾರೆ. ಇದೇ 25 ರಂದು ಬೆಂಗಳೂರಿಗೆ ಆಗಮಿಸ್ತಿದ್ದಾರೆ. ಡಿಸೆಂಬರ್‌ನಲ್ಲಿ ಹಳೇ ಮೈಸೂರು ಭಾಗದ ನಾಯಕರನ್ನು ಕರೆದು ಸಭೆ ನಡೆಸಿದ್ದ ಅಮಿತ್ ಶಾ, ಈ ಬಾರಿಯೂ ಮ್ಯಾರಾಥಾನ್​​​ ಮೀಟಿಂಗ್​​​ ಮಾಡಲಿದ್ದಾರೆ. ಬಿಜೆಪಿಯ ಚುನಾವಣಾ ಚಾಣಾಕ್ಯ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ. ಇದೇ ತಿಂಗಳ […]

Advertisement

Wordpress Social Share Plugin powered by Ultimatelysocial