ಒಂದೇ ವಾರದಲ್ಲಿ 3 BJP ದಂಡ ನಾಯಕರ ದಂಡಯಾತ್ರೆ.

 

2023ರ ವಿಧಾನಸಭಾ ಕ್ಷೇತ್ರದ ಚುನಾವಣೆ ದಿನ ಕಳೆದಂತೆ ಕಳೆಗಟ್ಟುತ್ತಿದೆ. ಡಿಸೆಂಬರ್ ಅಂತ್ಯದಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ, ತಿಂಗಳ ಹೊತ್ತಲ್ಲೇ ರಿಟರ್ನ್​ ಆಗ್ತಿದ್ದಾರೆ. ಇದೇ 25 ರಂದು ಬೆಂಗಳೂರಿಗೆ ಆಗಮಿಸ್ತಿದ್ದಾರೆ. ಡಿಸೆಂಬರ್‌ನಲ್ಲಿ ಹಳೇ ಮೈಸೂರು ಭಾಗದ ನಾಯಕರನ್ನು ಕರೆದು ಸಭೆ ನಡೆಸಿದ್ದ ಅಮಿತ್ ಶಾ, ಈ ಬಾರಿಯೂ ಮ್ಯಾರಾಥಾನ್​​​ ಮೀಟಿಂಗ್​​​ ಮಾಡಲಿದ್ದಾರೆ.

ಬಿಜೆಪಿಯ ಚುನಾವಣಾ ಚಾಣಾಕ್ಯ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ. ಇದೇ ತಿಂಗಳ 25 ರಂದು ಬೆಂಗಳೂರಿಗೆ ಅಮಿತ್ ಶಾ ಒಂದು ದಿನದ ಪ್ರವಾಸ ಕೈಗೊಳ್ತಿದ್ದಾರೆ. ಡಿಸೆಂಬರ್​​ 29 ರಂದು ರಾಜ್ಯಕ್ಕೆ ಬಂದು ಹೋಗಿದ್ದ ಬಿಜೆಪಿ ಮಾಸ್ಟರ್​​​ ಪ್ಲಾನರ್​​​​ ಅಮಿತ್​​ ಶಾ, ತಿಂಗಳೊಪ್ಪತ್ತರಲ್ಲೇ ಸಿಲಿಕಾನ್​​ ಸಿಟಿಗೆ ಲಗ್ಗೆ ಹಾಕ್ತಿದ್ದಾರೆ.. ಅಮಿತ್​ ಶಾ ಆಗಮನ ಕೇಸರಿ ಪಡೆಯಲ್ಲಿ ಸಂಚಲನ ಸೃಷ್ಟಿಸಲಿದೆ.

ವಾರದಲ್ಲೇ ಮೂರು ಕೇಸರಿ ದಂಡ ನಾಯಕರ ದಂಡಯಾತ್ರೆ
25ರಂದು ರಾಜ್ಯಕ್ಕೆ ಎಲೆಕ್ಷನ್​​ ಮಾಸ್ಟರ್​​​ ಅಮಿತ್​​ ಶಾ ಎಂಟ್ರಿ

ನಿನ್ನೆ ಅಷ್ಟೇ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಅಂತ್ಯವಾಗಿದ್ದು, ಈ ಬೆನ್ನಲ್ಲೆ ರಾಜ್ಯದತ್ತ ಕೇಸರಿ ಸೇನೆಯ ಮಹಾದಂಡ ನಾಯಕರ ಪಡೆ ರಾಜ್ಯದತ್ತ ದಂಡೆತ್ತಿ ಬರ್ತಿದೆ.. ನಾಳೆ ಕಲ್ಯಾಣ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮಿಸ್ತಿದ್ದಾರೆ.. ಅಲ್ಲದೆ, ರಾಷ್ಟ್ರಮಟ್ಟದ ಬಿಜೆಪಿ ಸಂಘಟನೆಯ ನಂಬರ್​​ 2 ಲೀಡರ್​​ ಬಿ.ಎಲ್​​ ಸಂತೋಷ್​​, ಕೋಲಾರದ ಚಿನ್ನದ ಬೇಟೆಗೆ ತಂತ್ರ ಹೆಣೆಯಲು ಬರ್ತಿದ್ದಾರೆ. ಈ ಇಬ್ಬರ ಬಳಿಕ ಅಮಿತ್​​ ಶಾ ಆಗಮನ ಆಗ್ತಿದ್ದು, ಬಿಜೆಪಿ ಚುನಾವಣೆ ತಂತ್ರಗಾರಿಕೆಯ ಮಂತ್ರಬೋಧನೆ ಆಗಲಿದೆ. ಈ ಬಾರಿ ಬೆಂಗಳೂರಿಗೆ ಆಗಮಿಸ್ತಿರುವ ಅಮಿತ್​​ ಶಾ, ರಾಜ್ಯದ ರಾಜಕಾರಣದ ವಾತಾವರಣವನ್ನ ಮತ್ತೊಮ್ಮೆ ಅವಲೋಕನ ನಡೆಸಲಿದ್ದಾರೆ.. ರಾಜ್ಯ ಬಿಜೆಪಿ ನಾಯಕರ ಜತೆ ಮಹತ್ವದ ಸಭೆಗಳನ್ನೂ ನಡೆಸಲು ಅಮಿತ್ ಶಾ ತೀರ್ಮಾನಿಸಿದ್ದಾರೆ.

ಇನ್ನೂ ಕಳೆದ ಬಾರಿ ಕೊಟ್ಟಿದ್ದ ಟಾಸ್ಕ್ ಬಗ್ಗೆಯೂ ಅಮಿತ್ ಶಾ ಮಾಹಿತಿ ಪಡೆಯಲಿದ್ದಾರೆ.. ಇದರ ಜೊತೆಗೆ ರಾಜಧಾನಿ ಬೆಂಗಳೂರಲ್ಲಿ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಅಮಿತ್ ಶಾ ಚಾಲನೆ ಕೊಡಲಿದ್ದಾರೆ.. ಅಷ್ಟಕ್ಕೂ ಕರ್ನಾಟಕವನ್ನ ಇಷ್ಟು ಗಂಭೀರವಾಗಿ ಪರಿಗಣಿಸಲು ಕಾರಣಗಳು ಹಲವಾರಿವೆ. ಈ ವರ್ಷ ಈಶಾನ್ಯದ ನಾಲ್ಕು ರಾಜ್ಯಗಳು ಸೇರಿ ಒಟ್ಟು 9 ರಾಜ್ಯಗಳು ಚುನಾವಣೆಯನ್ನ ಎದುಸ್ತಿವೆ.. ಇದರಲ್ಲಿ ಐದು ಅತಿದೊಡ್ಡ ರಾಜ್ಯಗಳಿದ್ದು, ಆ ಪೈಕಿ 2 ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧಿಕಾರ ಅನುಭವಿಸ್ತಿದೆ. ಹೀಗಾಗಿ ಕರ್ನಾಟಕದಲ್ಲಿನ ಆಡಳಿತವನ್ನ ಉಳಿಸಿಕೊಳ್ಳಲು ಶತಪ್ರಯತ್ನಕ್ಕೆ ಬಿದ್ದ ಕಮಲ ಪಡೆ, ಇನ್ನಿಲ್ಲದ ಕಸರತ್ತು ನಡೆಸ್ತಿದೆ.. ಇದಕ್ಕೆ ಕಾರಣ ಕರ್ನಾಟಕ ಎಲೆಕ್ಷನ್​​​​ ಬಳಿಕ ಹಿಂದಿ ಹಾರ್ಟ್​​ಲ್ಯಾಂಡ್​​ ಮನ ಗೆಲ್ಲಬೇಕಾದ ಜರೂರತ್ತು. ಕರ್ನಾಟಕ ಏನಾದ್ರೂ ಕೈಕೊಟ್ರೆ, ಅದರ ಪರಿಣಾಮ ಹಿಂದಿ ಬೆಲ್ಟ್​ ಮೇಲೆ ಬಿದ್ದು, ದುಬಾರಿ ಆಗುವ ಆತಂಕ ಬಿಜೆಪಿಯನ್ನ ಕಾಡ್ತಿದೆ.. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, 25ರಲ್ಲಿ ಬಿಜೆಪಿ ಗೆದ್ದಿದೆ.. ಒಂದ್ವೇಳೆ ರಾಜ್ಯದಲ್ಲಿ ಅಧಿಕಾರ ಇಲ್ಲದಿದ್ರೆ, 2024ರಲ್ಲಿ ಈ ಸಾಧನೆ ಮರುಕಳಿಸೋದು ಅಸಾಧ್ಯ ಅನ್ನೋದು ಬಿಜೆಪಿ ಟಾಪ್​​ ಕಮಾಂಡರ್​​ಗಳು ಬಲ್ಲ ಸತ್ಯ.

ಇವೆಲ್ಲವೂ ಬಿಜೆಪಿ ವರಿಷ್ಠರ ದಂಡು ರಾಜ್ಯದತ್ತ ಆಗಮಿಸಲು ಕಾರಣ ಕೊಡ್ತಿವೆ. ಈ ಬಾರಿಯ ಅಮಿತ್ ಶಾ ಆಗಮನ ಸಂಕ್ರಾಂತಿ ಬಳಿಕದ ಕ್ರಾಂತಿಗೆ ಕಾರಣವಾಗುತ್ತಾ ಎನ್ನುವ ಕುತೂಹಲ ಇದೆ. ಹಳೇ ಮೈಸೂರು ಭಾಗದ ಮತ್ತಷ್ಟು ಪ್ರಭಾವಿಗಳು ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.. ಇವರೆಲ್ಲರನ್ನು ಅಮಿತ್ ಶಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆಯೂ ಪಕ್ಷದಲ್ಲಿ ನಡೀತಿದೆ. ಒಟ್ಟಾರೆ, ಈ ಬಾರಿ ಅಮಿತ್ ಶಾ ಆಗಮನ ಬಿಜೆಪಿಯಲ್ಲಿ ಸಂಚಲನದ ಜೊತೆ ಆತಂಕವೂ ಕಾಡ್ತಿದೆ. ಹಿಂದುತ್ವ ಮತ್ತು ಅಭಿವೃದ್ಧಿ ಅಜೆಂಡಾ ಹೊತ್ತು ಆಗಮಿಸ್ತಿರುವ ಅಮಿತ್​​​ ಶಾ, ಚುನಾವಣಾ ತಯಾರಿಗೆ ರೂಟ್‌ಮ್ಯಾಪ್ ಸಿದ್ಧಪಡಿಸಿ ತೆರಳಲಿದ್ದಾರೆ ಎನ್ನಲಾಗಿದೆ. ಈ ತಿಂಗಳ 25 ರಂದು ಆಗಮಿಸುವ ಅಮಿತ್​​ ಶಾ, ಮತ್ಯಾವ ಟಾಸ್ಕ್​​ಗಳನ್ನ ರಾಜ್ಯ ನಾಯಕರಿಗೆ ನೀಡ್ತಾರೆ ಅನ್ನೋ ಕುತೂಹಲ ಇದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನ್ಯ ಸರ್ಕಾರಗಳಿಗೆ ವೋಟ್‌ ಬ್ಯಾಂಕ್‌ ಚಿಂತೆ.

Thu Jan 19 , 2023
    ಯಾದಗಿರಿ: ವಿವಿಧ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿ ಕೇವಲ ಜಾತಿ ಮತದ ಆಧಾರದಲ್ಲಿ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿದ್ದವು. 2014ರಿಂದ ಆಡಳಿತದಲ್ಲಿರುವ ನಮ್ಮ ಸರಕಾರವು ಕೇವಲ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ಹಾಗೂ ಅಭಿವೃದ್ಧಿ ಯೋಜನೆಗೆ ಚಾಲನೆ ಸೇರಿ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದು. ಕನ್ನಡದಲ್ಲೆ ಭಾಷಣ ಆರಂಭಿಸಿದ ಮೋದಿ, ʼಕರ್ನಾಟಕದ […]

Advertisement

Wordpress Social Share Plugin powered by Ultimatelysocial