” ಪ್ರಾಣಾಯಾಮ ” ರಕ್ತ ಶುದ್ದಿಗೊಳಿಸುತ್ತೆ

ಅನುಲೋಮ-ವಿಲೋಮ ಪ್ರಾಣಾಯಾಮದ ಒಂದು ವಿಧಾನ. ಇದ್ರಲ್ಲಿ ವ್ಯಕ್ತಿ ತನ್ನ ಉಸಿರಾಟ ಕ್ರಿಯೆಗೆ ಹೆಚ್ಚಿನ ಗಮನ ನೀಡ್ತಾನೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತವನ್ನು ನೈಸರ್ಗಿಕ ವಿಧಾನದ ಮೂಲಕ ಶುದ್ಧಗೊಳಿಸುತ್ತದೆ.ಅನುಲೋಮ-ವಿಲೋಮದಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ.ಇದ್ರಿಂದ ದೇಹದ ಎಲ್ಲ ಅಂಗ ಉತ್ಸಾಹದಿಂದ ಕೆಲಸ ಮಾಡಲು ಶುರು ಮಾಡುತ್ತದೆ. ಇದ್ರ ಜೊತೆಗೆ ಚರ್ಮ ಕೂಡ ಹೊಳಪು ಪಡೆಯುತ್ತದೆ.ಈ ಪ್ರಾಣಾಯಾಮ ಮಾಡಲು ಹಾಸಿಗೆ ಮೇಲೆ ಚಕ್ಕಲಪಟ್ಟೆ ಹಾಕಿ ಕುಳಿತುಕೊಳ್ಳಬೇಕು. ಬೆನ್ನು, ಕುತ್ತಿಗೆ ನೇರವಾಗಿರಲಿ. ಎಡಗೈ, ಎಡ ಮೊಣಕಾಲಿನ ಮೇಲಿರಲಿ. ಎಡ ಕೈನ ಹೆಬ್ಬರಳಿಗೆ ತೋರು ಬೆರಳು ಹಾಗೂ ಮಧ್ಯದ ಬೆರಳು ತಾಗಿರಲಿ.

ಬಲಗೈನ ತೋರು ಬೆರಳು ಹಾಗೂ ಮಧ್ಯದ ಬೆರಳು ಮುಚ್ಚಿರಲಿ. ಬಲಗೈ ಹೆಬ್ಬೆರಳಿನಿಂದ ಮೂಗಿನ ಬಲ ಭಾಗದ ಹೊಳ್ಳೆಯನ್ನು ಮುಚ್ಚಿ. ಎಡ ಹೊಳ್ಳೆಯಿಂದ ನಾಲ್ಕು ಎಣಿಸುತ್ತ ಉಸಿರು ಎಳೆದುಕೊಳ್ಳಿ. ನಂತ್ರ ಬಲ ಕೈನ ಉಂಗುರ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿ. ಮೂರನ್ನು ಎಣಿಸಿದ ನಂತ್ರ ನಿಧಾನವಾಗಿ ಬಲ ಭಾಗದ ಹೊಳ್ಳೆಯಿಂದ ಉಸಿರು ಬಿಡಿ. ನಂತ್ರ ಎಡ ರಂಧ್ರದಿಂದ ಉಸಿರೆಳೆದುಕೊಂಡು ಬಲ ಹೊಳ್ಳೆಯಿಂದ ಬಿಡಿ. ಇದನ್ನು ಐದು ನಿಮಿಷದಿಂದ 15 ನಿಮಿಷದವರೆಗೆ ಮಾಡಬಹುದಾಗಿದೆ.ನಿಯಮದಂತೆ ಇದನ್ನು ಮಾಡಿದಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಯೋಗ ತಜ್ಞರನ್ನು ಭೇಟಿಯಾಗಿ ತರಬೇತಿ ಪಡೆದು ಅನುಲೋಮ-ವಿಲೋಮ ಶುರುಮಾಡುವುದು ಸೂಕ್ತ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

. ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ, ಮಹಿಳೆ ಸಾವು

Sun Jan 30 , 2022
ಬೆಂಗಳೂರು: ಸಿಲಿಕಾನ್​ ಸಿಟಿಯ ಯಮ ಸ್ವರೂಪಿ ರಸ್ತೆ ಗುಂಡಿಯ ಅನಾಹುತಗಳು ಮುಂದುವರೆದಿವೆ. ರಸ್ತೆ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಶರ್ಮಿಳಾ (38) ಮೃತಪಟ್ಟ ಮಹಿಳೆ. ಮಾಗಡಿ ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋದ ಮಹಿಳೆ ಆಯತಪ್ಪಿ ರೋಡ್​ಗೆ ಬಿದ್ದಿದ್ದಾರೆ.ಈ ವೇಳೆ ಹಿಂದಿನಿಂದ ಬಂದ ಬೊಲೆರೋ ವಾಹನ ಮಹಿಳೆಯ ಮೇಲೆ ಹರಿದಿದ್ದು ಮಹಿಳೆ ಸ್ಥಳದಲ್ಲೇ ದುರ್ಮರಣ ಕಂಡಿದ್ದಾರೆ.ಪ್ರಕರಣ ಸಂಬಂಧ ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೊಲೆರೋ ಚಾಲಕ ಮಾದೇಶ್​ […]

Advertisement

Wordpress Social Share Plugin powered by Ultimatelysocial