ಅವರು ಎದುರು ಹಾಕಿಕೊಳ್ಳುತ್ತಿರುವುದು ನನ್ನನ್ನು ಎಂದು ನೆನಪಿರಲಿ ಖಡಕ್ ಎಚ್ಚರಿಕೆ | sumalatha amrish |

ಮಂಡ್ಯ (ಮಾ. 14): ಸಂಸದೆ ಸುಮಲತಾ ಅಂಬರೀಶ್   ರಾಜಕೀಯಕ್ಕೆ ಬೆಂಬಲವಾಗಿರುವ ಮಗ ಅಭಿಷೇಕ್​​  ಕೂಡ ರಾಜಕೀಯಕ್ಕೆ ಬರುವಂತೆ ಒತ್ತಾಯಗಳು ಕೇಳಿ ಬರುತ್ತಿದೆ. ಮಂಡ್ಯ ವಿಧಾನಸಭೆಯಿಂದ ಅವರು ಕಣಕ್ಕೆ ಇಳಿಯುತ್ತಾರೆ ಎಂಬ ಊಹಾ ಪೋಹಾಗಳು ಕೇಳಿ ಬಂದಿದ್ದವು.

  ಅಲ್ಲದೇ, ಅಭಿಷೇಕ್​​ ಅವರಿಗೆ ಅನೇಕ ಅಭಿಮಾನಿಗಳು, ಬೆಂಬಲಿಗರು ರಾಜಕೀಯಕ್ಕೆ  ಬರುವಂತೆ ಮನವಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಇದುವರೆಗೂ ಅಭಿಷೇಕ್​ ಮಾತ್ರ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಜೊತೆಗೆ ಸುಮಲತಾ ಕೂಡ ಈ ನಿರ್ಧಾರ ಆತನಿಗೆ ಬಿಟ್ಟದ್ದು ಎಂದು ಹಾರಿಕೆ ಉತ್ತರ ನೀಡುತ್ತಿದ್ದರು.
ಈ ಸಂಬಂಧ ಇಂದು ಮತ್ತೆ ಮದ್ದೂರಿನಲ್ಲಿ ಮಾತನಾಡಿದ ಸುಮಲತಾ, ನ್ನ ಮಗ ಅಭಿಷೇಕ್ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಎಲ್ಲಾ ಪಕ್ಷದವರು ಒತ್ತಡ ಹೇರುತ್ತಿದ್ದಾರೆ.ಅ ವನು ಚಿತ್ರರಂಗದಲ್ಲಿ ಇರುವುದರಿಂದ ಚುನಾವಣೆ ಬೇಡ. ರಾಜಕೀಯ ಪ್ರವೇಶ ಮಾಡುವ ಸಂಬಂಧ ಅಂತಿಮ ನಿರ್ಧಾರ ಅವನಿಗೆ ಬಿಟ್ಟಿದ್ದೇನೆ. ಇನ್ನು ಸಂಸದೆಯಾಗಿರುವ ನಾನು ಸದ್ಯ ನಾನು ರಾಜ್ಯ ರಾಜಕಾರಣಕ್ಕೆ ಬರುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ
ಅವರು ಎದುರು ಹಾಕಿಕೊಳ್ಳುತ್ತಿರುವುದು ನನ್ನನ್ನು
ಇನ್ನು ತಮ್ಮ ಹಾಗೂ ತಮ್ಮ ಬೆಂಬಲಿಗರ ಮೇಲೆ ಕೆ. ಆರ್. ನಗರದ ಹಳ್ಳಿಯಲ್ಲಿ ನಡೆದ ಹಲ್ಲೆ ಯತ್ನ ಕುರಿತು ಪ್ರತಿಕ್ರಿಯಿಸಿದ ಅವರು, ಹಳ್ಳಿಗಳಲ್ಲಿ ಅಂತಹ ಕಾಮಗಾರಿಯನ್ನ ಹಿಂದಿನ ಯಾವ ಸಂಸದರು ಮಾಡಿಸಿರಲಿಲ್ಲ. ಅದು ಜನರಿಗೆ ಗೊತ್ತಾಗುತ್ತೆ ಅಂತ ಹೀಗೆ ಮಾಡಿದ್ದಾರೆ. ಮೊದಲಿಂದ ಅವರಿಗೆ ಇಂತಹ ರಾಜಕಾರಣ ಮಾಡಿ ಅಭ್ಯಾಸ . ಆದರೆ, ಈ ಸಲ ಅವರು ಎದುರು ಹಾಕಿ ಕೊಳ್ಳುತ್ತಿರುವುದು ನನ್ನನ್ನು. ಅದನ್ನ ಅವರು ಗಮನದಲ್ಲಿಟ್ಟುಕೊಂಡ್ರೆ ಒಳ್ಳೆಯದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
ಅವರ ಹೆದರಿಕೆಗೆ ಬೆದರುವವಳು ನಾನಲ್ಲ
ಈ ಹಿಂದೆ ಅವರೆಲ್ಲಾ ಭ್ರಷ್ಟ ಅನ್ನುವ ಆರೋಪ ಬಂದಾಗ ಯಾರ್ಯಾರ ಜೊತೆ ಸೇರಿಸಿಕೊಂಡು ಅಧಿಕಾರಿಗಳ ವರ್ಗಾವಣೆ ಮಾಡಿಸುವುದರಲ್ಲೇ ಯಶಸ್ವಿಯಾಗಿದ್ದಾರೆ. ಗೂಂಡಾಗಳನ್ನ ಕರೆಸಿ ಗೂಂಡಾಯಿಸಮ್ ಮಾಡಿ ನನ್ನನ್ನು ಹೆದರಿಸಬಹುದು ಎಂದು ಅವರು ಏಣಿಸಿದ್ದಾರೆ. ಆದರೆ, ಅದಕ್ಕೆ ಬೆದರುವವಳು ನಾನಲ್ಲ ಎಂದಿದ್ದಾರೆ
ಅಲ್ಲಿನ ಮಹಿಳೆಯರು ರಕ್ಷಣೆಗೆ ಬಂದ್ರು
ನನ್ನ ಮೇಲೆ ಇವರಿಗೆ ದ್ವೇಷ ಇರಲಿ ಜನರು ಏನು ಮಾಡಿದ್ದಾರೆ. ಅವರ ಮೇಲೆ ಕೂಡ ಯತ್ನ ನಡೆದಿದೆ. ಈ ವೇಳೆ ನನಗೆ ರಕ್ಷಣೆ ಕೊಟ್ಟಿದ್ದು, ಅಲ್ಲಿನ ಮಹಿಳೆಯರು ಅವರನ್ನು ಹೆದರಿಸಿದ ಬಳಿಕ ಗೂಂಡಾಗಳು ಹೆದರಿಕೊಂಡು ಓಡಿದರು ಎಂದರು
ಅವರಿಗೆ ಪಾಠ ಕಲಿಸಲೇ ಬೇಕು
ಕೆ.ಆರ್.ನಗರದ ಆ ಹಳ್ಳಿಯಲ್ಲಿ ಗಲಾಟೆ ಮಾಡಿದವರು ಆ ಊರಿನವರೆ ಅಲ್ಲ. ಪ್ರೋಟೋಕಾಲ್ ಬಗ್ಗೆ ಪ್ರಶ್ನಿಸುತ್ತಾರೆ. ಅವರೇನು ಪ್ರೋಟೋಕಾಲ್ ಆಫೀಸರ್ಸಾ? ಅದರ ಬಗ್ಗೆ ಸಂಬಂಧಪಟ್ಟವರು ಬಂದು ಪ್ರಶ್ನೆ ಕೇಳಬೇಕು. ಪ್ರೋಟೋಕಾಲ್ ಬಗ್ಗೆ ತಿಳಿಯದೆ ಆ ಕೆಲಸಕ್ಕೆ ಕೈ ಹಾಕಲ್ಲ. ನನ್ನ ಮೇಲೆ ಬಂದು ಈ ರೀತಿ ಬೀಳುವುದರ ಹಿಂದಿನ ಉದ್ದೇಶ ಎನೇನ್ನುವುದು ತಿಳಿಯುತ್ತೆ. ಮಹಿಳೆ ಅನ್ನೋದು ನೋಡದೇ ಎಂಪಿ ಅನ್ನೋದು ನೋಡದೆ ದಾಳಿ ಮಾಡುವುದಕ್ಕೆ ಬಂದರು. ಅವರಿಗೆ ಪಾಠ ಕಲಿಸಲೇಬೇಕು. ಆದ್ದರಿಂದಲೇ ದೂರು ಕೊಟ್ಟಿದ್ದೀನಿ. ಆದಕ್ಕೆ ಅವರು ಕೌಂಟರ್ ಕೊಡಲು ನಮ್ಮ ವಿರುದ್ದ ದೂರು ಕೊಟ್ಟಿದ್ದಾರೆ. ಅದು ನಿಲ್ಲಲ್ಲ ಎಂದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ಯುದ್ಧವು ರಶಿಯಾ ಜೊತೆಗಿನ ಚೀನಾದ ಬಾಂಧವ್ಯವನ್ನು ಹೇಗೆ ಪರೀಕ್ಷಿಸುತ್ತದೆ!

Tue Mar 15 , 2022
ವರದಿಗಳು ಹೋದರೆ ಉಕ್ರೇನ್‌ನ ಆಕ್ರಮಣಕ್ಕೆ ಡ್ರೋನ್‌ಗಳು ಮತ್ತು ಆರ್ಥಿಕ ನೆರವು ಸೇರಿದಂತೆ ಮಿಲಿಟರಿ ಬೆಂಬಲಕ್ಕಾಗಿ ರಷ್ಯಾ ಇತ್ತೀಚೆಗೆ ಚೀನಾವನ್ನು ಕೇಳಿದೆ. ಸಿಎನ್‌ಎನ್ ವರದಿಯ ಪ್ರಕಾರ, ಹೆಸರಿಸದ ವಾಷಿಂಗ್ಟನ್ ಅಧಿಕಾರಿಗಳು ಯುಎಸ್ ಸುದ್ದಿವಾಹಿನಿಗಳಿಗೆ ಬೀಜಿಂಗ್ ಮಾಸ್ಕೋದ ವಿನಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ ಆದರೆ ಚೀನಾದ ಪ್ರತಿಕ್ರಿಯೆಗಳನ್ನು ವಿವರಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಭಾನುವಾರ, ಉಕ್ರೇನ್ ಮೇಲಿನ ಆಕ್ರಮಣದಲ್ಲಿ ರಷ್ಯಾಕ್ಕೆ ಚೀನಾ ಸಹಾಯ ಮಾಡಿದರೆ ಕಠಿಣ “ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಂದು ಯುಎಸ್ ಹೇಳಿದೆ. CNN […]

Advertisement

Wordpress Social Share Plugin powered by Ultimatelysocial