ಸುಮಲತಾ: ರಾಜಕೀಯ ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತುತ್ತಿದೆ!!

ಕರ್ನಾಟಕ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿದೆ. ಬೇಡದ ವಿಷಯಕ್ಕೆ ವಿಶ್ವದಾದ್ಯಂತ ಕರ್ನಾಟಕವನ್ನು ಚರ್ಚೆಗೀಡು ಮಾಡುವಂತೆ ಮಾಡಿದೆ. ಅದಕ್ಕೆ ಕಾರಣ ಮತ್ತೀನೇನು ಅಲ್ಲ ‘ವಸ್ತ್ರ ರಾಜಕಾರಣ’. ಈ ದೇಶದಲ್ಲಿ ಯಾವೆಲ್ಲಾ ವಿಷಯಗಳನ್ನು ಇಟ್ಟುಕೊಂಡು, ಯಾರನ್ನು ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನುವುದು ಚೆನ್ನಾಗಿ ಗೊತ್ತಿದೆ.

ಅದರ ಭಾಗವೇ ಈ ಕೆಲಸಕ್ಕೆ ಬಾರದ ಹಿಜಾಬ್ Vs ಕೇಸರಿ ಶಾಲು. ಈ ಪ್ರಕರಣ ತಾರಕ್ಕೇರಿದೆ. ಸ್ಥಳೀಯ ಮಟ್ಟದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ವರೆಗೂ ಈ ಹಿಜಾಬ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲಾಗುತ್ತಿದೆ.

ಹಿಜಾಬ್ ಪ್ರಕರಣ ಕರ್ನಾಟಕ ರಾಜ್ಯದಲ್ಲಿ ಶಾಂತಿ ಕದಡಿದೆ. ಎರಡು ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿದೆ. ರಾಜಕೀಯ ದಾಳಕ್ಕೆ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಕೆಲವು ದಿನಗಳಿಂದ ಹೊತ್ತಿ ಉರಿಯುತ್ತಿರುವ ಈ ಹಿಜಾಬ್ ಪ್ರಕರಣದ ಬಗ್ಗೆ ನವದೆಹಲಿಯಲ್ಲಿ ಮಂಡ್ಯ ಲೋಕಸಭೆಯ ಸದಸ್ಯೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸುಮಲತಾ ಏನು ಹೇಳಿದ್ದಾರೆ? ತಿಳಿದುಕೊಳ್ಳಲು ಮುಂದೆ ಓದಿ.

ಮುಗ್ಧ ಮಕ್ಕಳಲ್ಲಿ ರಾಜಕೀಯ ವಿಷ
ಹಿಜಾಬ್ ಪ್ರಕರಣ ದಿನದಿಂದ ದಿನಕ್ಕೆ ಚರ್ಚೆಯಾಗುತ್ತಿದೆ. ಪ್ರತಿಭಟನೆಯಿಂದ ಆರಂಭವಾಗಿದ್ದ ಈ ಪ್ರಕರಣ ಈಗ ಹಿಂಸಾಚಾರಕ್ಕೆ ತಿರುಗಿದೆ. ಒಂದು ನಗರದಿಂದ ಆರಂಭ ಆಗಿದ್ದು, ಇಡೀ ದೇಶದೆಲ್ಲಡೆ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಇಷ್ಟೊಂದು ವ್ಯಪಕವಾಗಿ ಹರಡುತ್ತಿರುವ ಹಿಜಾಬ್ ಪ್ರಕರಣದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ಮುಗ್ಧ ಮಕ್ಕಳಲ್ಲಿ ರಾಜಕೀಯ ವಿಷ ಬಿತ್ತಲಾಗುತ್ತಿದೆ ಎಂದು ಹೇಳಿದ್ದಾರೆ.

ಹಿಜಾಬ್ ಪ್ರಕರಣದಲ್ಲಿ ರಾಜಕೀಯ

ಸುಮಲತಾ ಎಎನ್‌ಐಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹಿಜಾಬ್ ಪ್ರಕರಣ ಆರಂಭ ಆಗಲು ರಾಜಕೀಯದ ಪಾತ್ರ ಬಹಳ ದೊಡ್ಡದಿದೆ ಎಂದು ಹೇಳಿದ್ದಾರೆ. “ಈ ಪ್ರಕರಣದಲ್ಲಿ ರಾಜಕೀಯ ಪ್ರಮುಖ ಪಾತ್ರ ವಹಿಸಿದೆ ಎಂದು ಅನಿಸುತ್ತಿದೆ. ಮುಗ್ಧ ಮಕ್ಕಳಲ್ಲಿ ವಿಷ ಬಿತ್ತಲು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ನನಗೆ ಈ ಪ್ರಕರಣದಲ್ಲಿ ಬಹಳಷ್ಟು ರಾಜಕೀಯವಿರುವುದು ಎದ್ದು ಕಾಣುತ್ತಿದೆ. ” ಎಂದು ಯಾವುದೇ ರಾಜಕೀಯ ಪಕ್ಷದ ಕಡೆ ಬೊಟ್ಟು ಮಾಡದೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ಬಗ್ಗೆ ಸುಮಲತಾ ಹೇಳಿದ್ದೇನು

ಹಿಜಾಬ್ ಪ್ರಕರಣ ತಾರಕಕ್ಕೇರುತ್ತಿದ್ದಂತೆ ಪ್ರಿಯಾಂಕಾ ಗಾಂಧಿ ತಮಗೆ ಬೇಕಾದ ವಸ್ತ್ರ ತೊಡುವುದು ನಮ್ಮ ಹಕ್ಕು ಎಂದು ಹೇಳಿದ್ದರು. ಈ ಹೇಳಿಕೆಗೂ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. “ನಾವೇನು ಧರಿಸಬೇಕು ಅನ್ನುವುದು ನಮ್ಮ ಹಕ್ಕು. ಇದು ಖಂಡಿತವಾಗಿಯೂ ಒಪ್ಪುವಂತಹದ್ದೇ. ಆದರೆ, ನೀವು ಬಿಕಿನಿಯನ್ನು ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಧರಿಸುತ್ತೀರ. ಅದನ್ನು ಸ್ಕೂಲ್‌ನಲ್ಲಿ ಬಳಸಲು ಸಾಧ್ಯವಿಲ್ಲ ಅಲ್ಲವೇ. ನೀವು ಕೆಲಸ ಮಾಡುವ ಜಾಗದಲ್ಲಿ ಜೀನ್ಸ್ ಬಳಸಲು ಸಾಧ್ಯವಿಲ್ಲ. ಅಲ್ಲಿ ನೀವು ಕಂಪನಿ ಏನು ಹೇಳುತ್ತದೆಯೋ ಅದನ್ನು ಧರಿಸಬೇಕಾಗುತ್ತೆ. ” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ದೊಡ್ಡ/ಭಾರಿ ಗಾತ್ರದ ಮೀನನ್ನು ಹಿಡಿದ ಮಹಿಳೆ . ಆ ಮೀನಿನ ತೂಕ ಎಷ್ಟು ಗೊತ್ತ?

Wed Feb 9 , 2022
ಒಂದು ದೊಡ್ಡ/ಭಾರಿ ಗಾತ್ರದ ಮೀನನ್ನು ಎಳೆಯಲು ಅಗಾಧ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಈ ಬಗ್ಗೆ ಸ್ವತಃ ಮೀನುಗಾರರನ್ನೇ ಕೇಳಿದ್ರೆ ಸಾಕು ನಿಮಗೆ ಮಾಹಿತಿ ದೊರೆಯುತ್ತದೆ. ಸಣ್ಣ ಪ್ರಮಾಣದ ಮೀನುಗಳನ್ನು ಸುಲಭವಾಗಿ ಎಳೆದು ದೋಣಿಗೆ ಹಾಕಬಹುದು. ಆದರೆ, ದೊಡ್ಡ ಮೀನುಗಳನ್ನು ಎಳೆಯಲು ಭಾರಿ ಶ್ರಮ ಹಾಕಬೇಕಾಗುತ್ತದೆ.ಅಂದಹಾಗೆ, ಯುಎಸ್ ನ ಹ್ಯಾಂಪ್ಟನ್ ಬೀಚ್‌ನಿಂದ 450 ಕೆ.ಜಿ ತೂಕದ ಬ್ಲೂಫಿನ್ ಟ್ಯೂನವನ್ನು ತನ್ನ ದೋಣಿಯಲ್ಲಿ ಸಾಗಿಸಲು ಏಕಾಂಗಿಯಾಗಿ ನಿರ್ವಹಿಸಿದ ಮಹಿಳೆಯೊಬ್ಬಳ ಬಗ್ಗೆ ಜನರು ದಿಗ್ಭ್ರಮೆಗೊಂಡಿದ್ದಾರೆ.ರೆಡ್ಡಿಟ್, […]

Advertisement

Wordpress Social Share Plugin powered by Ultimatelysocial