ನಿಯಮದ ವಿರುದ್ಧ ಕಿಡಿ ಕಾರಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

ಭಾರತ ಕ್ರಿಕೆಟ್ ಹಿರಿಯ ಪುರುಷರ ತಂಡಕ್ಕೆ ಆಯ್ಕೆಯಾಗಲು ಯೋ-ಯೋ ಮತ್ತು ಡೆಕ್ಸಾ ಫಿಟ್‌ನೆಸ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿರುವ ಬಿಸಿಸಿಐ ಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.

ತಂಡಕ್ಕೆ ಆಯ್ಕೆಯಾಗಲು ಫಿಟ್ನೆಸ್ ಬೇಕು, ಆದರೆ ಈ ರೀತಿಯ ಟೆಸ್ಟ್‌ಗಳು ಅನಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ಇತ್ತೀಚೆಗೆ ಭಾರತ ತಂಡಕ್ಕೆ ಆಯ್ಕೆಯಾಗಲು, ಗಾಯಗೊಂಡ ಆಟಗಾರರು ತಂಡಕಕ್ಕೆ ಮರಳಲು ಯೋ-ಯೋ ಮತ್ತು ಡೆಕ್ಸಾ ಪರೀಕ್ಷೆ ಕಡ್ಡಾಯವಾಗಿದೆ.

ಒಬ್ಬ ಉದಯೋನ್ಮುಖ ಆಟಗಾರರ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಶತಕ, ದ್ವಿಶತಕಗಳನ್ನು ಬಾರಿಸಿ ಅಥವಾ ಬೌಲರ್ ಒಬ್ಬ 5 ಅಥವಾ 10 ವಿಕೆಟ್‌ಗಳನ್ನು ಪಡೆದು ಸಾಮರ್ಥ್ಯ ತೋರಿದ ಹೊರತಾಗಿಯೋ ಆತ ಯೋ-ಯೋ, ಡೆಕ್ಸಾ ಟೆಸ್ಟ್‌ನಲ್ಲಿ ಪಾಸಾಗದಿದ್ದರೆ ಆತ ಭಾರತ ತಂಡಕ್ಕೆ ಆಯ್ಕೆಯಾಗಲು ಅರ್ಹನಾಗುವುದಿಲ್ಲ.

ಬಿಸಿಸಿಐ ತೀರ್ಮಾನವನ್ನು ವ್ಯಂಗ್ಯವಾಗಿ ಟೀಕಿಸಿರುವ ಅವರು, “ಬಯೋಮೆಕಾನಿಸ್ಟ್‌ಗಳು ಮತ್ತು ದೇಹ ವಿಜ್ಞಾನ ತಜ್ಞರು, ಆಯ್ಕೆಗಾರರಾಗಿ ಯಾಕಿಲ್ಲ” ಎಂದು ಕೇಳಿದ್ದಾರೆ.

“ಆಯ್ಕೆಗಾರರ ಸಮಿತಿಯಲ್ಲಿ ಬಯೋ-ಮೆಕಾನಿಕ್ಸ್ ತಜ್ಞ ಅಥವಾ ದೇಹ ವಿಜ್ಞಾನದ ವ್ಯಕ್ತಿಯಾಗಿ ಸೇರಿಸಿಕೊಳ್ಳಿ. ಆಟಗಾರನ ಫಿಟ್ನೆಸ್ ಮಾತ್ರ ಆತನ ಅರ್ಹತೆ ಎಂದರೆ, ಮಾಜಿ ಕ್ರಿಕೆಟಿಗರಿಗಿಂತ ಈ ತಜ್ಞರು ಆಯ್ಕೆ ಸಮಿತಿಯಲ್ಲಿ ಇರುವುದು ಉತ್ತಮ” ಎಂದು ಬಿಸಿಸಿಐ ಕಾಲೆಳೆದಿದ್ದಾರೆ.ರನ್, ವಿಕೆಟ್‌ಗಿಂತ ಫಿಟ್ನೆಸ್‌ ಮುಖ್ಯ

“ತಂಡದಲ್ಲಿ ಸ್ಥಾನಪಡೆಯಲು ಇಬ್ಬರು ಆಟಗಾರರ ನಡುವೆ ಪೈಪೋಟಿ ಇದ್ದಾಗ, ಇಬ್ಬರು ಆಟಗಾರರಲ್ಲಿ ಯಾರು ಹೆಚ್ಚು ಫಿಟ್ ಆಗಿದ್ದಾರೆ ಎಂದು ಪರೀಕ್ಷೆ ಮಾಡಿ, ಅವರಿಗೆ ಅವಕಾಶ ಕೊಡಿ. ಅವರು ಗಳಿಸಿದ ರನ್ ಅಥವಾ ವಿಕೆಟ್‌ಗಳನ್ನು ಪರಿಗಣಿಸಬೇಡಿ” ಎಂದು ಗವಾಸ್ಕರ್ ಬಿಸಿಸಿಐ ನಿರ್ಣಯವನ್ನು ಟೀಕಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಯೋ-ಯೋ ಟೆಸ್ಟ್ ಕಡ್ಡಾಯಗೊಳಿಸಿದಾಗ ಪ್ರಮುಖ ಆಟಗಾರರು ತಂಡದಿಂದ ಹೊರಗುಳಿಯಬೇಕಾಯಿತು ಎಂದು ಸುನಿಲ್ ಗವಾಸ್ಕರ್ ಹೇಳಿದರು.

“ತಾವು ಆಡುತ್ತಿದ್ದ ದಿನಗಳಲ್ಲಿ, ಇಬ್ಬರು ಕ್ರಿಕೆಟಿಗರು, ಭಾರತ ತಂಡಕ್ಕೆ ಆಯ್ಕೆಯಾಗಬೇಕಿದ್ದವರು, ಫಿಟ್‌ನೆಸ್‌ ಮಟ್ಟಗಳ ಹತ್ತಿರವೂ ಬರುತ್ತಿರಲಿಲ್ಲ. ಉತ್ತರ ಭಾರತದ ಆಟಗಾರರು ಮಾತ್ರ ಮೈದಾನದಲ್ಲಿ ಓಡುತ್ತಿದ್ದರು, ವ್ಯಾಯಾಮ ಮಾಡುತ್ತಿದ್ದರು. ದಕ್ಷಿಣ ಮತ್ತು ಪಶ್ಚಿಮ ಭಾರತದ ಆಟಗಾರರು ಮಾತ್ರ ಕ್ರಿಕೆಟ್ ಫಿಟ್‌ನೆಸ್ ಮೇಲೆ ಗಮನ ಕೇಂದ್ರೀಕರಿಸಿದರು. ಇದರಿಂದ ಹಲವರು ಅವಕಾ ಕಳೆದುಕೊಂಡರು” ಎಂದು ಹೇಳಿದರು.

“ನಾನು ಶಾಲಾದಿನಗಳ ಕ್ರಿಕೆಟ್ ಆಡುವಾಗಿನಿಂದಲೂ ಶಿನ್ ಸ್ಪ್ಲಿಂಟ್ಸ್ ಎನ್ನುವ ಸಮಸ್ಯೆ ಇತ್ತು. ಮೈದಾನದಲ್ಲಿ ಒಂದೆರಡು ಸುತ್ತು ಓಡುವುರಿಂದ ಮೊಣಕಾಲಿನ ಸುತ್ತಲಿನ ಸ್ನಾಯುಗಳು ಹಿಗ್ಗುತ್ತವೆ, ನಡೆಯಲು ನೋವುಂಟು ಮಾಡುತ್ತವೆ. ಮೊಣಕಾಲಿನ ಸಮಸ್ಯೆಯಿಂದಾಗಿ ನಾನು ಓಡಲು ಸಾಧ್ಯವಿಲ್ಲ ಎಂದು ಮ್ಯಾನೇಜರ್‌ಗಳಿಗೆ ತಿಳಿದಿತ್ತು. ಆದರೂ ಅವರು ಇತರೆ ಆಟಗಾರರಂತೆ ನನಗೂ ಮೈದಾನದ ಸುತ್ತಲೂ ಓಡಲು ಒತ್ತಾಯಿಸಿದ್ದರು” ಎಂದು ಹೇಳಿದ್ದಾರೆ.ಬಿಸಿಸಿಐ ಆಟಗಾರರ ಫಿಟ್ನೆಸ್ ಪರೀಕ್ಷೆ ಮಾಡಬೇಕು,ಆದರೆ ಯೋ ಯೋ ಮತ್ತು ಡೆಕ್ಸಾ ಟೆಸ್ಟ್‌ಗಳನ್ನು ಕೈಬಿಡಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂದನನ್ನು ಮುದ್ದಿಸುವ ಚಿಂಪಾಂಜಿಯ ದೃಶ್ಯವೇ ಹೃದಯಸ್ಪರ್ಶಿ

Mon Jan 9 , 2023
ಆ ತಾಯಿ ತನ್ನ ಕರುಳಬಳ್ಳಿಯನ್ನು ಕಾಣದೆ ಪರಿತಪಿಸಿದ್ದಳು. ಕಂದನಿಂದ ದೂರ ಇದ್ದು ಎರಡು ದಿನ ನೊಂದಿದ್ದಳು. ಆದರೆ, ಎರಡು ದಿನಗಳ ಬಳಿಕ ತನ್ನ ಮರಿಯನ್ನು ಕೈಯಲ್ಲಿ ಹಿಡಿಯುವ ಕ್ಷಣ ಬಂದಾಗ ಅವಳು ತೋರಿದ ಪ್ರೀತಿ ನಿಜಕ್ಕೂ ಹೃದಯಸ್ಪರ್ಶಿ. ತಾಯಿ ಮಮತೆಯ ಈ ದೃಶ್ಯ ಒಂದು ಕ್ಷಣ ಎಲ್ಲರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿವೆ.ತಾಯಿ ಮಮತೆ ಎಂಬುದು ಅದ್ಭುತ. ಮನುಷ್ಯರಾಗಲಿ, ಪ್ರಾಣಿಗಳಾಗಲಿ ತಾಯಿ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಅದಕ್ಕೆ ಬೇಕಾದಷ್ಟು […]

Advertisement

Wordpress Social Share Plugin powered by Ultimatelysocial