ಸುರಾರಿ ಪ್ರಯೋಗಾತ್ಮಕ ಚಿತ್ರ.

ಸಸ್ಪೆನ್ಸ್ ,ಥ್ರಿಲ್ಲರ್ ,ತನಿಖಾ ಕಥೆ ಹೊಂದಿರುವ ಪ್ರಯೊಗಾತ್ಮಕ  ಚಿತ್ರ ” ಸುರಾರಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಶಾಲಜಯ ನಾಯಕ,ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರಡ. ಡೊಳ್ಳುಹೊಟ್ಟೆಯನ್ನು ಸಿಕ್ಸ್ ಪ್ಯಾಕ್ ಆಗಿ ಮಾಡುವ ಕಥಾ ಹಂದರ ಹೊಂದಿದೆ.‌ವಾಣಿಜ್ಯ ಮಂಡಳಿ  ಅಧ್ಯಕ್ಷ ಭಾ.ಮ ಹರೀಶ್ ಮತ್ತಿತರು ಚಿತ್ರಕ್ಕೆ  ಶುಭ ಹಾರೈಸಿದರು.ನಿರ್ದೇಶಕ ವಿಶಾಲಾಜಯ ಮಾಹಿತಿ ನೀಡಿ, ಹೊಸ ತನದ  ಸಿನಿಮಾ ಮಾಡಬೇಕು ಎಂದಾಗ ಹೊಳೆದ ಕಥೆ.   ಬಾಲಿವುಡ್ ನ ದಂಗಲ್  ಚಿತ್ರದ ಕಥೆಗೆ ಹೊಲಿಕೆ‌ ಇಲ್ಲ. ದೇಹ  ಬದಲಾವಣೆ ಮಾತ್ರ.ಅಮೀರ್ ಖಾನ್ 9 ತಿಂಗಳು ತೆಗೆದುಕೊಂಡಿದ್ದರು.ನಾನು ನೂರು ದಿನದಲ್ಲಿ  ಬದಲಾವಣೆ ಮಾಡಿದ್ದೇನೆ. ಪಿಟ್ ನೆಸ್ ಸಲಹೆಗಾರರಿಲ್ಲದೆ ಮಾಡಬೇಡಿ. ಈ ರೀತಿ ಮಾಡುವುದು ಅಪಾಯಕಾರಿ ಎಂದರು.ಸುರಾರಿ, ದೇವತೆಗಳ ವೈರಿ, ಅಸುರ, ಸುರಪಾನ   ಸೇವಿಸುವರನ್ನು  ಸುರಾರಿ  ಅಂತಾರೆ. ದಪ್ಪ ಆಗಲು 9 ತಿಂಗಳು ತೆಗೆದುಕೊಂಡೆ ದೇಹ ತೂಕ‌ ಇಳಿಸಲು ,100 ದಿನ‌ ತೆಗೆದುಕೊಂಡಿದ್ದೇನೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ ಎಂದು ವಿವರ ನೀಡಿದರು.ನಾಯಕಿಯಲ್ಲಿ ಒಬ್ಬರಾದ  ಚಿತ್ರಾಲ್ ರಂಗಸ್ವಾಮಿ,ಮೂಲತಃ ಬಿಕಿನಿ ಬಾಡಿ ಬಿಲ್ಡಿಂಡರ್, ಚಿತ್ರದಲ್ಲಿ ನಾಯಕ ತರಬೇತುದಾರನಾಗಿ ನಟಿಸಿದ್ದೇನೆ ಎಂದರೆ ಮತ್ತೊಬ್ಬ ನಟಿ ಆರ್ಚನಾ ಸಿಂಗ್ , ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ಪಾತ್ರ ಮಾಡಿದ್ದೇನೆ ಎಂದರೆ ಮತ್ತೊಬ್ಬ ನಟಿ ರತನ್ಯ ಸಿಬಿಐ ಪಾತ್ರ ಮಾಡಿದ್ದೇನೆ  ಥ್ರಿಲ್ಲರ್ ಅಂಶಗಳಿವೆ ಎನ್ನುವ ವಿವರ ನೀಡಿದರು. ನಿರ್ಮಾಪಕ ಕೃಷ್ಣನ್, ಸಂಗೀತ ನಿರ್ದೇಶಕ ಅನಂತ್ ಆರ್ಯನ್  ಸೇರಿದಂತೆ ಹಲವರು ಮಾಹಿತಿ ಹಂಚಿಕೊಂಡರು.ಸುರಾರಿ ಪ್ರಯೋಗಾತ್ಮಕ ಚಿತ್ರ, ಡೊಳ್ಳು ಹೊಟ್ಟೆ ನೋಡಿ  ಇವರೆ ನಾಯಕನಾ ಅಂದುಕೊಂಡಿದ್ದೆ‌.ಚಿತ್ರದಲ್ಲಿ ಗರಡಿ ಪೈಲ್ವಾನ್ ಪಾತ್ರ ಮಾಡಿದ್ದೇನೆ.ನಾಯಕಿಯರಲ್ಲಿ ಒಬ್ಬರ ತಂದೆ. ನಾಯಕನ‌‌ ಶ್ರಮ ಮೆಚ್ಚುವಂತಹುದು  ಯುವ ಜನರಿಗೆ ಸ್ಪೂರ್ತಿ‌ ಆಗಲಿದೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಿ ಬ್ಯಾಂಕ್ ಗಳು ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿವೆ.

Wed Jan 18 , 2023
(ನ್ಯೂಸ್ ಕಡಬ) ನವದೆಹಲಿ, ಜ.18. ಕೇಂದ್ರ ಸರ್ಕಾರವಲ್ಲದೆ ಸರ್ಕಾರಿ ಬ್ಯಾಂಕ್ ಗಳು ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿವೆ. ಇದರಲ್ಲಿ ಪೂರ್ಣ 15 ಲಕ್ಷ ರೂ.ಗಳನ್ನು ಪಡೆಯಬಹುದು. ಹೆಣ್ಣು ಮಕ್ಕಳಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶೇಷ ಯೋಜನೆ ಜಾರಿಯಾಗುತ್ತಿದ್ದು, ಇದರ ಅಡಿಯಲ್ಲಿ ಈ ಸೌಲಭ್ಯ ದೊರೆಯಲಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಸಂಪೂರ್ಣ 15 ಲಕ್ಷ ರೂ.ಗಳನ್ನು ನೀಡುತ್ತಿದೆ. ಈ ಹಣವನ್ನು ಅಧ್ಯಯನಕ್ಕಾಗಿ ಅಥವಾ ಮದುವೆಗೆ ಬಳಸಬಹುದು […]

Advertisement

Wordpress Social Share Plugin powered by Ultimatelysocial