ಹೊಸ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಹೊಸ ಮನೆಗೆ ಬಂದ ಆ ಹೆಣ್ಣು ಒಂದು ದಿನವೂ ಸಂತಸದಿಂದ ಕಳೆಯಲೇ ಇಲ್ಲ!

 

ಉತ್ತರ ಪ್ರದೇಶ: ಅವರದ್ದು ಅತ್ತೆ  , ಮಾವ  , ಅಣ್ಣ  , ಅತ್ತಿಗೆ  ಇರುವ ತುಂಬು ಸಂಸಾರ. ಇತ್ತೀಚಿಗಷ್ಟೇ ಆತನ ಮದುವೆಯಾಗಿತ್ತು. ಈಗ ಹೆಂಡತಿ  ಮದುವೆಯಾಗಿ ಈತನ ಮನೆ ಸೇರಿದ್ದಳು.
ಮೇಲ್ನೋಟಕ್ಕೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ಆ ಸಂಸಾರ. ಆದರೆ ಮನೆಯೊಳಗಿನ ಕಿಚ್ಚು ಮನೆಯನ್ನೇ ಸುಡುತ್ತಾ ಇದ್ದುದು ಯಾರಿಗೂ ಗೊತ್ತಾಗಲೇ ಇಲ್ಲ. ನೂರಾರು ಕನಸು ಹೊತ್ತು, ಹೊಸ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಹೊಸ ಮನೆಗೆ ಬಂದ ಆ ಹೆಣ್ಣು ಒಂದು ದಿನವೂ ಸಂತಸದಿಂದ ಕಳೆಯಲೇ ಇಲ್ಲ. ಕಾರಣ ತವರು ಮನೆಯಲ್ಲಿದ್ದ ಅವಳು! ಆಕೆಯ ಗಂಡನನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಆಕೆ, ತನ್ನ ಆದೇಶದಂತೆ ಕುಣಿಸುತ್ತಾ ಇದ್ದಳು. ತಮ್ಮಿಬ್ಬರಿಗೆ ಅಡ್ಡಿಯಾಗಬಾರದು ಅಂತ ಈಕೆಯನ್ನೇ ದೂರ ಮಾಡುವ ಪ್ಲಾನ್   ಮಾಡಿದಳು. ಆಗ ಅವರಿಬ್ಬರೂ ಸೇರಿ ಹಾಕಿಕೊಂಡ ಪ್ಲಾನ್ ಮಾತ್ರ ಖತರ್ನಾಕ್ ಆಗಿತ್ತು.ಉತ್ತರ ಪ್ರದೇಶ ರಾಜ್ಯದ ಕೆ.ಪ್ರತಾಪಗಢ್ ಎಂಬಲ್ಲಿ ನವಿ ವಿವಾಹಿತೆಯೊಬ್ಬಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಹೆಸರು ಸುಶೀಲಾ. ಸಂಗ್ರಾಮ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಯಾಪುರ ಕುಸುವಾಪುರ ಗ್ರಾಮದ ನಿವಾಸಿ ಬಚಾಯ್ ಗೌತಮ್ ಅವರ ಪುತ್ರ ಅಂಕಿತ್ ಕುಮಾರ್ ಮೂರು ವರ್ಷಗಳ ಹಿಂದೆ ಸುಶೀಲಾ ಅವರನ್ನು ವಿವಾಹವಾಗಿದ್ದರು. ಮೊದ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಬರುಬರುತ್ತಾ ಸಂಸಾರ ಭಾರವಾಗತೊಡಗಿತು.ಸುಶೀಲಾ ಹಾಗೂ ಅಂಕಿತ್ ಮೊದ ಮೊದಲು ಚೆನ್ನಾಗಿಯೇ ಇದ್ದರು. ಆದರೆ ಅವರಿಬ್ಬರ ನಡುವೆ ಹುಳಿ ಹಿಂಡಿದ್ದು ಸುಶೀಲಾ ತಂಗಿ ಮೋನು. ಅಂದರೆ ವರಸೆಯಲ್ಲಿ ಅಂಕಿತ್ನ ನಾದಿನಿ. ಅಕ್ಕನನ್ನು ಮದುವೆಯಾದ ಭಾವನ ಮೇಲೆ ಮೋನು ಮೋಹ ಬೆಳೆಸಿಕೊಂಡುಬಿಟ್ಟಳು. ಅಕ್ಕನ ಜೊತೆ ಭಾವ ಚೆನ್ನಾಗಿರುವುದನ್ನು ನೋಡಿ ಒಳಗೊಳಗೇ ಕುದ್ದು ಕೆಂಡವಾದಳು. ಅವರಿಬ್ಬರನ್ನು ಹೇಗಾದರೂ ಮಾಡಿ ದೂರ ಮಾಡಬೇಕು ಅಂತ ಯೋಜನೆ ಹಾಕಿಕೊಂಡಳು.ಭಾವ ಅಂಕಿತ್ ಜೊತೆ ಮೋನು ಅನೈತಿಕ ಸಂಬಂಧ ಶುರು ಮಾಡಿಕೊಂಡು ಬಿಟ್ಟಿದ್ದಳು. ಮನೆಯವರ ಕಣ್ಣಿಗೆ ಮಣ್ಣೆರಚಿ ಇಬ್ಬರೂ ರಾಸಲೀಲೆಯಲ್ಲಿ ತೊಡಗುತ್ತಿದ್ದರು. ಆಗಾಗ ಅಕ್ಕನ ಮನೆಗೆ ಬರುತ್ತಿದ್ದ ಮೋನು, ಭಾವನ ಜೊತೆ ಸೇರುತ್ತಿದ್ದಳು. ತವರಿಗೆ ಹೋದರೂ ಅಷ್ಟೇ, ಅಂಕಿತ್ ಮೋನು ಜೊತೆಯಲ್ಲಿಯೇ ಇರುತ್ತಿದ್ದ.ಹೀಗೆ ಒಮ್ಮೆ ಅಂಕಿತ್ ಹಾಗೂ ತನ್ನ ತಂಗಿ ಮೋನು ಏಕಾಂತದಲ್ಲಿದ್ದಾಗ ಅಂಕಿತ್ ಪತ್ನಿ ಸುಶೀಲಾ ನೋಡಿದ್ದಾಳೆ. ಇರಬಾರದ ಸ್ಥಿತಿಯಲ್ಲಿ ಗಂಡ ಹಾಗೂ ತನ್ನ ತಂಗಿ ಇರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾಳೆ. ಇದು ತಪ್ಪು, ಇದನ್ನು ಇಲ್ಲಿಗೆ ನಿಲ್ಲಿಸಿ ಅಂತ ಇಬ್ಬರಿಗೂ ಹೇಳಿದ್ದಾಳೆ. ಇದೇ ಕಾರಣಕ್ಕೆ ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಾ ಇತ್ತು ಎನ್ನಲಾಗಿದೆ.ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾದ ಸುಶೀಲಾಳನ್ನು ಕೊಲ್ಲಲೇ ಬೇಕು ಅಂತ ಅಂಕಿತ್ ಹಾಗೂ ಆತನ ನಾದಿನಿ ಪ್ಲಾನ್ ಮಾಡಿದ್ರು. ಅದರಂತೆ ಫೆಬ್ರವರಿ 9ರ ರಾತ್ರಿ ಆಕೆಯನ್ನು ಮನೆಯಲ್ಲೇ ಕತ್ತು ಹಿಸುಕಿ ಇಬ್ಬರೂ ಸಾಯಿಸಿದ್ದಾರೆ. ಆ ರಾತ್ರಿಯೇ ಮೋನು ಅಕ್ಕನ ಮನೆಯಿಂದ ಹೊರಟು ಹೋಗಿದ್ದಾಳೆ.ಮರುದಿನ ಬೆಳಗ್ಗೆಯೇ ತನ್ನ ಹೆಂಡತಿ ಅನಾರೋಗ್ಯದಿಂದ ಸತ್ತಿದ್ದಾಗ ಅಂಕಿತ್ ಹೇಳಿದ್ದಾನೆ. ಮನೆಯವರೆಲ್ಲ ಆತನ ಮಾತು ನಂಬಿಕೊಂಡು ಅಂತ್ಯಸಂಸ್ಕಾರವನ್ನೂ ನಡೆಸಿದ್ದಾರೆ. ಆದ್ರೆ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಸುಶೀಲಾ ತಂದೆಗೆ ಇದರಲ್ಲಿ ಸಂಶಯ ಮೂಡಿದೆ. ಆಗ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸುಶೀಲಾ ತಂದೆ ಕೊಟ್ಟ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗ ಭಾವ-ನಾದಿನಿ ಕಳ್ಳಾಟ ಬಯಲಾಗಿದೆ. ವಿಚಾರಣೆ ವೇಳೆ ಸುಶೀಲಾಳನ್ನು ಕೊಂದಿದ್ದಾಗಿ ಹೇಳಿದ್ದಾರೆ. ಇದೀಗ ಪಾಪಿಗಳು ಜೈಲು ಸೇರಿದ್ದರೆ, ಪಾಪದ ಪತ್ನಿ ಬಾರದ ಲೋಕಕ್ಕೆ ಹೊರಟೇ ಹೋಗಿದ್ದಾಳೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ-ಉಕ್ರೇನ್ ಬಿಕ್ಕಟ್ಟು ತೈವಾನ್ ಮೇಲೆ ಆಕ್ರಮಣ ಮಾಡುವ ಚೀನೀ ಯೋಜನೆಗಳನ್ನು ಬಲಪಡಿಸುತ್ತದೆ;

Fri Feb 11 , 2022
ರಷ್ಯಾ-ಉಕ್ರೇನ್ ಗಡಿಯಲ್ಲಿ ಬೆಳವಣಿಗೆಯಾಗುತ್ತಿರುವ ಪರಿಸ್ಥಿತಿಯನ್ನು ಇಡೀ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿರುವಾಗ, ತೈವಾನ್‌ನ ಮೇಲೆ ಆಕ್ರಮಣ ಮಾಡುವ ಚೀನಾದ ಯೋಜನೆಗಳು ಕಾಯುತ್ತಿರುವ ಮತ್ತೊಂದು ದುರಂತವಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ವಾಷಿಂಗ್ಟನ್ ಮೂಲದ ಗ್ಲೋಬಲ್ ಸ್ಟ್ರಾಟ್ ವ್ಯೂ ತನ್ನ ವರದಿಯಲ್ಲಿ, ತೈವಾನ್‌ನ ವಾಯುಪ್ರದೇಶದಲ್ಲಿ ಚೀನಾದ ಫೈಟರ್ ಜೆಟ್‌ಗಳಿಂದ ದೊಡ್ಡ ಪ್ರಮಾಣದ ಆಕ್ರಮಣಗಳ ಇತ್ತೀಚಿನ ಪ್ರಕರಣಗಳು ಮತ್ತು ಮಿಲಿಟರಿ ಸಂಘರ್ಷದ ಬಗ್ಗೆ ಯುಎಸ್‌ಗೆ ಬೀಜಿಂಗ್ ಮುಕ್ತ ಎಚ್ಚರಿಕೆ ನೀಡಿರುವುದು ಚೀನಾ ಬಲವಂತದ ಸ್ವಾಧೀನಕ್ಕೆ […]

Advertisement

Wordpress Social Share Plugin powered by Ultimatelysocial