ಸ್ವಾತಿಮುತ್ತಿನ ಮಳೆಹನಿಯೆ ಚಿತ್ರದಲ್ಲಿ ರಮ್ಯಾ ಇಲ್ಲ -ಚಿತ್ರಕ್ಕೆ ನಾಯಕಿ ಇವರೇ ನೋಡಿ

ರಾಜ್‌ ಬಿ ಶೆಟ್ಟಿ ನಿರ್ದೇಶನದ 3 ನೇ ಚಿತ್ರ “ಸ್ವಾತಿ ಮುತ್ತಿನ ಮಳೆಹನಿಯೆ ” ಈಗಾಗಲೇ  ಟೈಟಲ್‌ ಅನೌನ್ಸ್‌ ಆಗದೆ. ಈ ಚಿತ್ರದ ಮೂಲಕ  ಸ್ಯಾಂಡಲ್ವುಡ್ನ ಮೋಹಕ ತಾರೆ ದಶಕಗಳ ಬಳಿಕ ಕಮ್‌ ಬ್ಯಾಕ್‌  ಮಾಡಲಿದ್ದಾರೆ  ಅನ್ನೋ ಮಾಹಿತಿ ಕೂಡ ಸಿಕ್ಕಿತ್ತು. ಇದರಿಂದ ರಮ್ಯಾ ಅಭಿಮಾನಿಗಳು ಬಹಳ ಖುಷಿಯಾಗಿದ್ದರು. ಆದರೆ ಇದೀಗ ರಮ್ಯಾ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಹೌದು, ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಣೆ ಮಾಡಿದ್ದ ನಟಿ ರಮ್ಯಾ ಇದಕ್ಕೆ ‘ಆಪಲ್ ಬಾಕ್ಸ್ ಸ್ಟುಡಿಯೊ’ ಎಂದು ಹೆಸರನ್ನೂ ಸಹ ಇಟ್ಟಿದ್ದರು. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡು ಆರೇಳು ವರ್ಷಗಳ ಬಳಿಕ ಚಂದನವನಕ್ಕೆ ಮರಳುವುದಾಗಿ ಸಹ ರಮ್ಯಾ ಘೋಷಿಸಿದ್ದರು.ಆದರೆ ಕೆಲ ದಿನಗಳು ಉರುಳಿದ ಬಳಿಕ ಚಿತ್ರದಲ್ಲಿ ರಮ್ಯಾ ಅಭಿನಯಿಸುತ್ತಿಲ್ಲ, ರಮ್ಯಾ ಬದಲಿಗೆ ಯುವ ನಟಿ ಸಿರಿ ರವಿಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿತ್ತು.

ಆದರೆ ಈ ಚಿತ್ರದಲ್ಲಿ ನಟಿ ರಮ್ಯಾ ನಿರ್ಮಾಪಕಿಯಾಗಿ ಮುಂದುವರಿಯಲಿದ್ದಾರೆ, ಚಿತ್ರದಿಂದ ಹೊರನಡೆದಿಲ್ಲ, ನಾಯಕಿಯ ಬದಲಾವಣೆ ಮಾತ್ರ ಆಗಿದೆ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿತು. ಆದರೆ ಇಂದಿಗೂ ಸಹ ರಮ್ಯಾ ಬದಲಾಗಿ ಸಿರಿ ರವಿಕುಮಾರ್ ಯಾಕೆ ನಟಿಸಿದ್ರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಗಲಿಲ್ಲ. ಹೀಗೆ ರಮ್ಯಾ ಬದಲಾಗಿ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ನಟಿಸಿರುವ ನಟಿ ಸಿರಿ ರವಿಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಇಂದು ( ಡಿಸೆಂಬರ್ 5 ) ಹಂಚಿಕೊಂಡಿದೆ. ಪ್ರತಿಭಾವಂತ ನಟಿ ಸಿರಿ ರವಿಕುಮಾರ್ ಅವರನ್ನು ಪ್ರೇರಣ ಆಗಿ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಸ್ವತಃ ರಮ್ಯಾ ಈ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

 

Please follow and like us:

Leave a Reply

Your email address will not be published. Required fields are marked *

Next Post

Leading Camming Sites

Tue Dec 6 , 2022
If you’re a fan of webcam models and want to watch the best ones, then you certainly need to know where you should look. The good news is that there are several options to pick out coming from, all of which offer a variety of ways to earn. The best […]

Advertisement

Wordpress Social Share Plugin powered by Ultimatelysocial